* ಇತ್ತೀಚಿಗೆ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವರು ಲೋಕಸಭೆಯಲ್ಲಿ ಜನ್ ವಿಶ್ವಾಸ್ (ನಿಬಂಧನೆಗಳ ತಿದ್ದುಪಡಿ) ಮಸೂದೆ 2025 ಅನ್ನು ಮಂಡಿಸಿದ್ದಾರೆ.* ಈ ಮಸೂದೆಯು "ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತ"ಕ್ಕೆ ಸರ್ಕಾರದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.* ಈ ಮಸೂದೆಯು ಒಟ್ಟು 10 ಸಚಿವಾಲಯಗಳು/ಇಲಾಖೆಗಳಿಂದ ನಿರ್ವಹಿಸಲ್ಪಡುವ 16 ಕೇಂದ್ರ ಕಾಯಿದೆಗಳಲ್ಲಿ 355 ತಿದ್ದುಪಡಿಗಳನ್ನು ಪ್ರಸ್ತಾಪಿಸುತ್ತದೆ.* ಒಟ್ಟಾರೆಯಾಗಿ ಈ ಮಸೂದೆವು 288 ನಿಬಂಧನೆಗಳನ್ನು ಅಪರಾಧ ಮುಕ್ತಗೊಳಿಸಲಾಗಿದೆ ಮತ್ತು 67 ನಿಬಂಧನೆಗಳನ್ನು ತಿದ್ದುಪಡಿ ಮಾಡಲಾಗಿದೆ.* ನಂಬಿಕೆ ಆಧಾರಿತ ಆಡಳಿತವನ್ನು ಉತ್ತೇಜಿಸಲು ಜೈಲು ಶಿಕ್ಷೆಯ, ಹಣಕಾಸಿನ ದಂಡಗಳಂತಹ ಸಣ್ಣ ಅಪರಾಧಗಳನ್ನು ಮುಕ್ತಗೊಳಿಸುವ ಗುರಿಯನ್ನು ಹೊಂದಿರುವ ಮೊದಲ ಏಕೀಕೃತ ಶಾಸನವಾಗಿದೆ.