* ದೇಶದಲ್ಲಿ ಮೊದಲ ಬಾರಿಗೆ ಜಲಜನಕ ಇಂಧನ ಪೂರಿತ ಟ್ರಕ್ಗಳ ಪ್ರಾಯೋಗಿಕ ಸಂಚಾರಕ್ಕೆ ಟಾಟಾ ಮೋಟರ್ಸ್ ಮಂಗಳವಾರ(ಮಾರ್ಚ್ 4) ಚಾಲನೆ ನೀಡಿದೆ. * ಟಾಟಾ ಮೋಟಾರ್ಸ್ 2070ರ ಇಂಗಾಲ ಶೂನ್ಯ ಗುರಿಯನ್ನು ತಲುಪುವ ಹೈಡ್ರೋಜನ್ ಚಾಲಿತ ಭಾರೀ ಟ್ರಕ್ಗಳ ಪ್ರಯೋಗವನ್ನು ಆರಂಭಿಸಿದೆ, ಪರಿಸರ ಸ್ನೇಹಿ ವಾಹನಗಳತ್ತ ಮಹತ್ವದ ಹೆಜ್ಜೆ ಇಟ್ಟಿದೆ.* ಪ್ರಾಯೋಗಿಕ ಸಂಚಾರದ ಅವಧಿ 24 ತಿಂಗಳಾಗಿದ್ದು, 16 ಅತ್ಯಾಧುನಿಕ ಟ್ರಕ್ಗಳು ಸಂಚರಿಸಲಿವೆ. * ಈ ಟ್ರಕ್ ಪ್ರಾಯೋಗಿಕಗಳು ಜಲಜನಕದ ಆಂತರಿಕ ಸಂಚಾರದ ಅವಧಿ 2 ವರ್ಷ ದಹನಕಾರಿ ಎಂಜಿನ್ ಮತ್ತು ಇಂಧನ ಕೋಶ ತಂತ್ರಜ್ಞಾನವನ್ನು ಹೊಂದಿವೆ. ಮುಂಬಯಿ, ಪುಣೆ, ದಿಲ್ಲಿ, ಸೂರತ್, ವಡೋದರಾ, ಜೆಮ್ಶೆಡ್ಪುರ ಹಾಗೂ ಕಳಿಂಗ ನಗರದ ಪ್ರಮುಖ ಮಾರ್ಗಗಳಲ್ಲಿ ಪರೀಕ್ಷಾರ್ಥ ಸಂಚಾರ ನಡೆಸಲಿದೆ.* ದೀರ್ಘಕಾಲದ ಪ್ರಯಾಣಕ್ಕೆ ವಿದ್ಯುತ್ಚಾಲಿತ ಬ್ಯಾಟರಿ ತಂತ್ರಜ್ಞಾನದ ಬಳಕೆ ಲಾಭದಾಯಕವಾಗಿ ಕಾಣಿಸುತ್ತಿಲ್ಲ. ಹಾಗಾಗಿ, ಬ್ಯಾಟರಿಯಲ್ಲಿ ಕೆಲ ಸುಧಾರಣೆ ಮಾಡಲಾಗುತ್ತಿದೆ. ಇದೇ ವೇಳೆ ಜಲಜನಕ ಇಂಧನಪೂರಿತ ವಾಹನಗಳ ಮೇಲೂ ಪರೀಕ್ಷೆ ನಡೆಸಲಾಗುತ್ತಿದೆ ಎಂದು ಟಾಟಾ ಮೋಟಾರ್ಸ್ನ ಕಾರ್ಯನಿರ್ವಾಹಕ ನಿರ್ದೇಶಕ ಗಿರೀಶ್ ವಾಫ್ ತಿಳಿಸಿದ್ದಾರೆ.