ಜಲ ಸಂರಕ್ಷಣೆಯಲ್ಲಿ 7 ಜಿಲ್ಲೆಗಳ ಗ್ರಾಮ ಪಂಚಾಯಿತಿಗಳಿಗೆ ರಾಷ್ಟ್ರೀಯ ಪ್ರಶಸ್ತಿ* ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಅಡಿಯಲ್ಲಿ ನಡೆಯುತ್ತಿರುವ 'ಜಲ ಸಂಚಯ ಜನ ಭಾಗೀದಾರಿ' ಅಭಿಯಾನವು ರಾಜ್ಯದ ಗ್ರಾಮೀಣ ಭಾಗಗಳಲ್ಲಿ ಜಲ ಸಂರಕ್ಷಣೆಗೆ ಮಹತ್ವದ ಕೊಡುಗೆ ನೀಡಿದೆ. * ಈ ಅಭಿಯಾನದಲ್ಲಿ ಅತ್ಯುತ್ತಮವಾಗಿ ಜಲ ಸಂರಕ್ಷಣಾ ಕ್ರಮಗಳನ್ನು ಅನುಷ್ಠಾನಗೊಳಿಸಿರುವ ಕಾರಣ, ರಾಜ್ಯದ 7 ಜಿಲ್ಲೆಗಳ ಗ್ರಾಮ ಪಂಚಾಯಿತಿಗಳಿಗೆ ರಾಷ್ಟ್ರೀಯ ಪ್ರಶಸ್ತಿ ಪ್ರದಾನವಾಗಿದೆ.ಪ್ರಮುಖ ಜಿಲ್ಲೆಗಳು ಮತ್ತು ಸಾಧನೆ ಪ್ರಮಾಣ:# ಗದಗ: 11,971 ಕಾರ್ಯಗಳು# ವಿಜಯಪುರ: 11,453 ಕಾರ್ಯಗಳು# ಬೀದರ್: 10,297 ಕಾರ್ಯಗಳು# ಕೋಲಾರ: 8,470 ಕಾರ್ಯಗಳು# ತುಮಕೂರು: 9,885 ಕಾರ್ಯಗಳು# ಮಂಡ್ಯ: 7,192 ಕಾರ್ಯಗಳು# ಚಿತ್ರದುರ್ಗ: 7,815 ಕಾರ್ಯಗಳು* ಈ ಎಲ್ಲಾ ಜಿಲ್ಲೆಗಳ ಗ್ರಾಮ ಪಂಚಾಯಿತಿಗಳು ಜಲ ಸಂರಕ್ಷಣೆ ಮತ್ತು ಅಂತರ್ಜಲ ಮರುಪೂರಣ ಕಾರ್ಯಗಳಲ್ಲಿ ತಮ್ಮ ವಿಶೇಷ ಕೊಡುಗೆ ನೀಡಿ, ಗ್ರಾಮೀಣ ಅಭಿವೃದ್ಧಿ ಮತ್ತು ಪರಿಸರ ಸಂರಕ್ಷಣೆಗೆ ಹೊಸ ಮಾದರಿಯನ್ನು ಪ್ರತಿಪಾದಿಸಿದ್ದವು.* ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಪ್ರಶಸ್ತಿ ಪಡೆದ ಗ್ರಾಮ ಪಂಚಾಯಿತಿಗಳನ್ನು ಅಭಿನಂದಿಸಿದ್ದು, ಈ ಕಾರ್ಯಗಳು ಭವಿಷ್ಯದಲ್ಲಿನ ಜಲ ಸಂಪನ್ಮೂಲ ನಿರ್ವಹಣೆ ಮತ್ತು ಗ್ರಾಮೀಣ ಜೀವನಮಟ್ಟ ಸುಧಾರಣೆಗೆ ಮಾದರಿಯಾಗಿವೆ ಎಂದು ತಿಳಿಸಿದರು.