* ಎಲನ್ ಮಸ್ಕ್ ಒಡೆತನದ ಸ್ಪೇಸ್ ಎಕ್ಸ್ ಸಂಸ್ಥೆಯ ಸ್ಟಾರ್ಲಿಂಕ್ ಬ್ರಾಡ್ಬ್ಯಾಂಡ್ ಇಂಟರ್ನೆಟ್ ಸೇವೆ ಒದಗಿಸುವ ಒಪ್ಪಂದಕ್ಕೆ ಜಿಯೋ ಫ್ಲಾಟ್ಫಾರಂ ಸೇರ್ಪಡೆಯಾಗಿದೆ.* ಏರ್ಟೇಲ್ ಸ್ಟಾರ್ಲಿಂಕ್ ಸೇವೆಗೆ ಒಪ್ಪಂದ ಮಾಡಿದ ನಂತರವೇ, ಜಿಯೋ ಕೂಡ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿದೆ.* ಈ ಒಪ್ಪಂದವು ಭಾರತದಲ್ಲಿ ಸ್ಟಾರ್ ಲಿಂಕ್ ಅನ್ನು ಮಾರಾಟ ಮಾಡಲು ಸ್ಪೇಸ್ ಎಕ್ಸ್ ಅನುಮತಿ ಪಡೆಯುವುದಕ್ಕೆ ಒಳಪಟ್ಟಿರುತ್ತದೆ. ಜಿಯೋ ಮತ್ತು ಸ್ಟಾರ್ಲಿಂಕ್ ಒಪ್ಪಂದದಂತೆ, ಸ್ಪೇಸ್ ಎಕ್ಸ್ ಭಾರತದಲ್ಲಿ ಸ್ಟಾರ್ಲಿಂಕ್ ಮಾರಾಟಕ್ಕೆ ಅನುಮತಿ ಪಡೆಯಲಿದೆ. ಜಿಯೋ ಇದರ ಮೂಲಕ ತನ್ನ ಬ್ರಾಡ್ಬ್ಯಾಂಡ್ ವ್ಯಾಪ್ತಿಯನ್ನು ವಿಸ್ತರಿಸಿ, ಹೈಸ್ಪೀಡ್ ಸಂಪರ್ಕವನ್ನು ಸುಲಭವಾಗಿ ಲಭ್ಯವಾಗುವಂತೆ ಮಾಡಲಿದೆ.* ಈ ಒಪ್ಪಂದದ ಮೂಲಕ, ಉಪಗ್ರಹ ಆಧಾರಿತ ಬ್ರಾಡ್ಬ್ಯಾಂಡ್ ಸೇವೆಗಳು ಭಾರತದೆಲ್ಲೆಡೆ, ಗ್ರಾಮೀಣ ಹಾಗೂ ದೂರದ ಪ್ರದೇಶಗಳಲ್ಲಿಗೂ ಲಭ್ಯವಾಗಿವೆ, ಇದರಿಂದ ಸುಲಭ ಸಂಪರ್ಕ ಸಾಧ್ಯವಾಗುತ್ತದೆ.* ಸ್ಪೇಸ್ ಎಕ್ಸ್ ನೊಂದಿಗಿನ ಒಪ್ಪಂದವು ಭಾರತದಾದ್ಯಂತದ ಎಲ್ಲಾ ಉದ್ಯಮಗಳು, ಸಣ್ಣ ಮತ್ತು ಮಧ್ಯಮ ವ್ಯವಹಾರಗಳು ಮತ್ತು ಸಮುದಾಯಗಳಿಗೆ ವಿಶ್ವಾಸಾರ್ಹ ಇಂಟರ್ನೆಟ್ ಅನ್ನು ಪಡೆಯುವಂತೆ ಮಾಡುತ್ತದೆ.* ರಿಲಯನ್ಸ್ ಜಿಯೋ ಮತ್ತು ಸ್ಪೇಸ್ಎಕ್ಸ್ ಸ್ಟಾರ್ಲಿಂಕ್ ನಡುವಿನ ಒಪ್ಪಂದವು ಜಿಯೋ ಸೇವೆಗಳ ವಿಸ್ತರಣೆಗೆ ಮತ್ತು ಸ್ಪೇಸ್ಎಕ್ಸ್ನ ಕಾರ್ಯಕ್ಷಮತೆಗೆ ಪೂರಕವಾಗಬಹುದು ಎಂದು ಜಿಯೋ ಗ್ರೂಪ್ ಸಿಇಒ ಮ್ಯಾಥ್ಯ ಊಮ್ಮೆನ್ ತಿಳಿಸಿದ್ದಾರೆ.* ಸ್ಪೇಸ್ಎಕ್ಸ್ ಅಧ್ಯಕ್ಷ ಗ್ವಿನ್ ಶಾಟ್ವೆಲ್ ಜಿಯೋದೊಂದಿಗೆ ಸಹಕಾರವನ್ನು ಪ್ರಶಂಸಿಸಿ, ಭಾರತದಲ್ಲಿ ಸ್ಟಾರ್ಲಿಂಕ್ ಸೇವೆ ನೀಡಲು ಸರ್ಕಾರದ ಅನುಮತಿ ನಿರೀಕ್ಷಿಸುತ್ತೇವೆ ಎಂದು ತಿಳಿಸಿದ್ದಾರೆ.