* ಏಪ್ರಿಲ್ ತಿಂಗಳಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ಸಂಗ್ರಹವು ಕಳೆದ ವರ್ಷದ ಈ ಅವಧಿಗೆ ಹೋಲಿಸಿದರೆ ಶೇ 12.6ರಷ್ಟು ಹೆಚ್ಚಳಗೊಂಡು ದಾಖಲೆಮಟ್ಟದ ₹2.37 ಲಕ್ಷ ಕೋಟಿಗಳನ್ನು ತಲುಪಿದೆ ಎಂದು ಗುರುವಾರ(ಮೇ 01) ಬಿಡುಗಡೆಯಾದ ಸರ್ಕಾರಿ ಅಂಕಿಅಂಶಗಳು ತಿಳಿಸಿವೆ.* 2024ರ ಏಪ್ರಿಲ್ನಲ್ಲಿ ಜಿಎಸ್ಟಿ ಸಂಗ್ರಹ ₹2.10 ಲಕ್ಷ ಕೋಟಿ ಆಗಿತ್ತು. 2017ರ ಜುಲೈ 1ರಿಂದ ಜಿಎಸ್ಟಿ ವ್ಯವಸ್ಥೆ ಜಾರಿಗೆ ಬಂದ ನಂತರ ಇದು ಎರಡನೇ ಅತ್ಯಂತ ಅಧಿಕ ಸಂಗ್ರಹವಾಗಿದೆ.* 2025ರ ಮಾರ್ಚ್ ತಿಂಗಳಲ್ಲಿ ಜಿಎಸ್ಟಿ ಸಂಗ್ರಹ ₹1.96 ಲಕ್ಷ ಕೋಟಿ ಆಗಿತ್ತು.* ದೇಶೀಯ ವ್ಯಾಪಾರದಿಂದ ಸಿಕ್ಕ ಆದಾಯ ಶೇ 10.7ರಷ್ಟು ಹೆಚ್ಚಾಗಿ ₹1.9 ಲಕ್ಷ ಕೋಟಿಗೆ ತಲುಪಿದರೆ, ಆಮದು ಮಾಡಿದ ಸರಕುಗಳಿಂದ ಬಂದ ಆದಾಯ ಶೇ 20.8ರಷ್ಟು ಏರಿಕೆ ಹೊಂದಿ ₹46,913 ಕೋಟಿ ಆಗಿದೆ.* ಏಪ್ರಿಲ್ನಲ್ಲಿ ಮರುಪಾವತಿಗಳ ವಿತರಣೆಯು ಶೇ 48.3ರಷ್ಟು ಹೆಚ್ಚಾಗಿ ₹27,341 ಕೋಟಿ ಆಗಿದೆ. ಮರುಪಾವತಿಗಳನ್ನು ಸರಿಹೊಂದಿಸಿದ ನಂತರ, ನಿವ್ವಳ ಜಿಎಸ್ಟಿ ಸಂಗ್ರಹವು ಶೇ 9.1ರಷ್ಟು ಏರಿಕೆ ಕಂಡು ₹2.09 ಲಕ್ಷ ಕೋಟಿಗೆ ತಲುಪಿದೆ.