* ಹೇರ್ ಆಯಿಲ್, ಕಾರ್ನ್ಫ್ಲೇಕ್ಸ್, ಟಿವಿ ಸೆಟ್ಗಳು, ಆರೋಗ್ಯ ಮತ್ತು ಜೀವ ವಿಮೆ ಪಾಲಿಸಿಗಳಂತಹ ಸಾಮಾನ್ಯ ಜನರ ದೈನಂದಿನ ಬಳಕೆಯ ವಸ್ತುಗಳ ಮೇಲಿನ ಜಿಎಸ್ಟಿ ದರಗಳಲ್ಲಿ ತಿದ್ದುಪಡಿ ಮಾಡುವ ಮಹತ್ವದ ನಿರ್ಧಾರವನ್ನು ಜಿಎಸ್ಟಿ ಮಂಡಳಿಯು ಬುಧವಾರ(ಆಗಸ್ಟ್ 03) ಕೈಗೊಂಡಿದೆ.* ವೈಯಕ್ತಿಕ ಜೀವ ವಿಮೆ ಮತ್ತು ಆರೋಗ್ಯ ವಿಮೆ ಪಾಲಿಸಿಗಳ ಪ್ರೀಮಿಯಂಗಳಿಗೆ (ಅವಧಿ ವಿಮೆ, ಯುಲಿಪ್, ಎಂಡೋಮೆಂಟ್ ಪಾಲಿಸಿ ಸೇರಿ) ಈಗಿನಿಂದ ಜಿಎಸ್ಟಿ ವಿಧಿಸಲಾಗುವುದಿಲ್ಲ. ಜನಸಾಮಾನ್ಯರಿಗೆ ಹೆಚ್ಚಿನ ಮಟ್ಟದಲ್ಲಿ ವಿಮೆ ಸೌಲಭ್ಯ ತಲುಪಿಸಲು ಈ ಕ್ರಮ ಜಾರಿಗೆ ತರಲಾಗಿದೆ.* ಹಿರಿಯ ನಾಗರಿಕರ ಆರೋಗ್ಯ ವಿಮೆ ಪಾಲಿಸಿಗಳು ಹಾಗೂ ಫ್ಯಾಮಿಲಿ ಫ್ಲೋಟರ್ ಪಾಲಿಸಿಗಳ ಪ್ರೀಮಿಯಂಗಳಿಗೂ ತೆರಿಗೆಯಿಂದ ವಿನಾಯಿತಿ ನೀಡಲಾಗಿದೆ.* 2017ರಲ್ಲಿ ಜಿಎಸ್ಟಿ ಜಾರಿಗೆ ಬಂದಾಗಿನಿಂದ ಈ ಉತ್ಪನ್ನಗಳ ಮೇಲೆ ಶೇ 18ರಷ್ಟು ತೆರಿಗೆ ಇದ್ದದ್ದು, ಜಿಎಸ್ಟಿ ಮಂಡಳಿ, ಪ್ರಸ್ತುತ ಇರುವ ನಾಲ್ಕು ತೆರಿಗೆ ಹಂತಗಳನ್ನು (ಶೇ 5, 12, 18 ಮತ್ತು 28) ಕಡಿಮೆ ಮಾಡಿ, ಕೇವಲ ಶೇ 5 ಮತ್ತು ಶೇ 18ರಂತೆ ಎರಡು ಹಂತಗಳಿಗೆ ತರುವುದಕ್ಕೆ ಒಪ್ಪಿಗೆ ನೀಡಿದೆ.* ಈ ಹೊಸ ವ್ಯವಸ್ಥೆ ನವರಾತ್ರಿಯ ಮೊದಲ ದಿನವಾದ ಸೆಪ್ಟೆಂಬರ್ 22ರಿಂದ ಜಾರಿಗೆ ಬರುವುದಾಗಿ ಘೋಷಿಸಲಾಗಿದೆ. ಕೇಂದ್ರ ಸರ್ಕಾರವು ದಸರೆಯ ಮುನ್ನ ದೇಶದ ಜನತೆಗೆ ಮಹತ್ವದ ಉಡುಗೊರೆಯನ್ನು ನೀಡಿದೆ.* ಮಂಡಳಿ ಸಭೆಯ ಬಳಿಕ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ “ಜಿಎಸ್ಟಿ ದರ ಪರಿಷ್ಕರಣೆ ಕುರಿತು ಎಲ್ಲಾ ರಾಜ್ಯಗಳೂ ಸಮ್ಮತಿ ವ್ಯಕ್ತಪಡಿಸಿದ್ದರಿಂದ ಏಕಮತದಿಂದ ನಿರ್ಧಾರ ಕೈಗೊಳ್ಳಲಾಗಿದೆ” ಎಂದು ಹೇಳಿದರು.* ಅವರು ಮುಂದುವರಿಸಿ, “ಹೈಎಂಡ್ ಕಾರುಗಳು, ತಂಬಾಕು ಹಾಗೂ ಸಿಗರೇಟ್ಗಳಂತಹ ಐಷಾರಾಮಿ ವಸ್ತುಗಳ ಮೇಲೆ ಶೇ 40ರಷ್ಟು ವಿಶೇಷ ತೆರಿಗೆ ವಿಧಿಸಲು ಅನುಮೋದಿಸಲಾಗಿದೆ. ಉಳಿದ ಎಲ್ಲ ವಸ್ತುಗಳ ಮೇಲಿನ ಹೊಸ ದರಗಳು ಸೆಪ್ಟೆಂಬರ್ 22ರಿಂದ ಜಾರಿಯಾಗುತ್ತವೆ” ಎಂದರು.* ಈ ಜಿಎಸ್ಟಿ ಸುಧಾರಣೆ ಪ್ರಧಾನಿ ನರೇಂದ್ರ ಮೋದಿಯವರು ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಘೋಷಿಸಿದ್ದ ಸರಳೀಕರಣದ ಭಾಗವಾಗಿದೆ. ಜೊತೆಗೆ, ಅಮೆರಿಕವು ಭಾರತದಿಂದ ಆಮದುಮಾಡುವ ವಸ್ತುಗಳ ಮೇಲೆ ಶೇ 50ರಷ್ಟು ಸುಂಕ ವಿಧಿಸಿರುವ ಸಮಯದಲ್ಲೇ ಈ ಬದಲಾವಣೆ ಮಾಡಿರುವುದು ವಿಶೇಷ.ಪ್ರಮುಖ ತಿದ್ದುಪಡಿಗಳು :* ದಿನನಿತ್ಯದ ಆಹಾರ ವಸ್ತುಗಳ ಮೇಲೆ ಯಾವುದೇ ತೆರಿಗೆ ಇರುವುದಿಲ್ಲ.* ಬೆಣ್ಣೆ, ತುಪ್ಪ, ಒಣಹಣ್ಣು, ಸಾಂದ್ರೀಕರಿಸಿದ ಹಾಲು, ಮಾಂಸ, ಸಕ್ಕರೆ, ಮಿಠಾಯಿ, ಜಾಮ್, ಜೆಲ್ಲಿಗಳು, ಎಳನೀರು, ಕರಿದ ತಿನಿಸುಗಳು, 20 ಲೀಟರ್ ಬಾಟಲಿಯನೀರು, ಹಣ್ಣಿನ ರಸ, ಐಸ್ಕ್ರೀಂ, ಪೇಸ್ಟ್ರಿ, ಬಿಸ್ಕತ್ತು, ಕಾರ್ನ್ಫ್ಲೇಕ್ಸ್ಗಳ ತೆರಿಗೆ ಶೇ 18ರಿಂದ ಶೇ 5ಕ್ಕೆ ಇಳಿಕೆ.* ಚಪಾತಿ ಮತ್ತು ಪರಾಠಿಗಳಿಗೆ ತೆರಿಗೆ ರದ್ದುಗೊಂಡಿದೆ (ಹಿಂದೆ ಶೇ 5 ಇತ್ತು).* ಟೂತ್ಪೌಡರ್, ಹಾಲುಣಿಸುವ ಬಾಟಲ್, ಅಡುಗೆ ಉಪಕರಣಗಳು, ಬಂಬೂ ಫರ್ನಿಚರ್, ಹಣಿಗೆಗಳ ತೆರಿಗೆ ಶೇ 12ರಿಂದ ಶೇ 5ಕ್ಕೆ ಇಳಿಕೆ.* ಶಾಂಪೂ, ಟಾಲ್ಕಮ್ ಪೌಡರ್, ಟೂತ್ಪೇಸ್ಟ್, ಟೂತ್ಬ್ರಶ್, ಫೇಸ್ಪೌಡರ್, ಸೋಪು, ಹೇರ್ ಆಯಿಲ್ಗಳಿಗೆ ತೆರಿಗೆ ಶೇ 18ರಿಂದ ಶೇ 5ಕ್ಕೆ ಇಳಿಕೆ.* ಸಿಮೆಂಟ್ ತೆರಿಗೆ ಶೇ 28ರಿಂದ ಶೇ 18ಕ್ಕೆ ಇಳಿಕೆ.* 1200 ಸಿಸಿ ಒಳಗಿನ ಪೆಟ್ರೋಲ್/ಎಲ್ಪಿಜಿ/ಸಿಎನ್ಜಿ ಕಾರುಗಳು ಹಾಗೂ 1500 ಸಿಸಿ ಒಳಗಿನ ಡೀಸೆಲ್ ಕಾರುಗಳಿಗೆ ತೆರಿಗೆ ಶೇ 28ರಿಂದ ಶೇ 18ಕ್ಕೆ ಇಳಿಕೆ.* 1200 ಸಿಸಿ ಮೇಲ್ಪಟ್ಟ ಪೆಟ್ರೋಲ್ ಕಾರುಗಳು ಮತ್ತು 1500 ಸಿಸಿ ಮೇಲ್ಪಟ್ಟ ಡೀಸೆಲ್ ಕಾರುಗಳಿಗೆ ಶೇ 40ರ ತೆರಿಗೆ.* 350 ಸಿಸಿ ಒಳಗಿನ ಬೈಕ್ಗಳು, ಏರ್ಕಂಡೀಷನರ್, ಡಿಶ್ವಾಷರ್, ಟಿವಿ ಮೊದಲಾದ ಎಲೆಕ್ಟ್ರಾನಿಕ್ಸ್ಗಳ ತೆರಿಗೆ ಶೇ 28ರಿಂದ ಶೇ 18ಕ್ಕೆ ಇಳಿಕೆ.* 1200 ಸಿಸಿ ಮೇಲ್ಪಟ್ಟ ಹಾಗೂ 4000 ಎಂಎಂ ಉದ್ದಕ್ಕಿಂತ ಹೆಚ್ಚು ಇರುವ ಕಾರುಗಳು, 350 ಸಿಸಿ ಮೇಲ್ಪಟ್ಟ ಬೈಕ್ಗಳು, ಯಾಚ್ಟ್ಗಳು, ವೈಯಕ್ತಿಕ ಏರ್ಕ್ರಾಫ್ಟ್ಗಳು, ರೇಸಿಂಗ್ ಕಾರುಗಳಿಗೆ ಶೇ 40ರ ತೆರಿಗೆ.* ಎಲ್ಲಾ ಎಲೆಕ್ಟ್ರಿಕ್ ವಾಹನಗಳ ಮೇಲೆ ಇರುವ 5% ಜಿಎಸ್ಟಿ ಮುಂದುವರಿಸಲಾಗುತ್ತದೆ.