* 2025-26ರ ಏಪ್ರಿಲ್-ಜೂನ್ ಮೊದಲ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ಶೇ. 7.8ರಷ್ಟು ಬೆಳವಣಿಗೆ ದಾಖಲಿಸಿದೆ.* ಇದು ಅಂದಾಜಿಗಿಂತ ಹೆಚ್ಚಿನ ಬೆಳವಣಿಗೆಯಾಗಿದ್ದು, ಹಿಂದಿನ ವರ್ಷದ ಇದೇ ಅವಧಿಯಲ್ಲಿ ಕಂಡುಬಂದ ಶೇ. 6.5ರಷ್ಟು ಬೆಳವಣಿಗೆಯಿಗಿಂತಲೂ ವೇಗವಾಗಿದೆ.* ಈ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸಿದ್ದು ಸೇವಾ ವಲಯ, ಅದು ಶೇ. 9.3ರಷ್ಟು ನೈಜ GVA ವೃದ್ಧಿಯನ್ನು ದಾಖಲಿಸಿದೆ. ಕೃಷಿ ವಲಯದ ಸಹಕಾರವೂ ಗಮನಾರ್ಹವಾಗಿದೆ.* ಇದಕ್ಕೂ ಮುನ್ನ, 2024ರ ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ಭಾರತ ಜಿಡಿಪಿ ಶೇ. 8.4ರಷ್ಟು ಗರಿಷ್ಠ ಬೆಳವಣಿಗೆಯನ್ನು ಕಂಡಿತ್ತು. ಇದೀಗ 7.8% ಬೆಳವಣಿಗೆಯೊಂದಿಗೆ ಭಾರತವು ವಿಶ್ವದಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯ ಸ್ಥಾನವನ್ನು ಬಲಪಡಿಸಿದೆ.* ಇದೇ ಅವಧಿಯಲ್ಲಿ ಚೀನಾದ ಆರ್ಥಿಕ ಬೆಳವಣಿಗೆ ದರ ಶೇ. 5.2 ಆಗಿದ್ದು, ಭಾರತದ ಬೆಳವಣಿಗೆ ಅದಕ್ಕಿಂತ ಹೆಚ್ಚಾಗಿದೆ.