* ಮೊಟ್ಟಮೊದಲ ಬಾರಿಗೆ (ಸೆಪ್ಟೆಂಬರ್ 9 ಮತ್ತು 10) ರಾಷ್ಟ್ರ ರಾಜಧಾನಿ ದಿಲ್ಲಿಯ ಪ್ರಗತಿ ಮೈದಾನದಲ್ಲಿರುವ ಭಾರತ ಮಂಟಪದಲ್ಲಿ ಜಿ-20 ಶೃಂಗಸಭೆ ನಡೆಯುತ್ತಿದ್ದು, ಸಭೆಯಲ್ಲಿ ಜಿ-20 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆ ವಹಿಸಿದ್ದಾರೆ.* ಆಫ್ರಿಕನ್ ಒಕ್ಕೂಟವನ್ನು ಜಿ-20ಯ ಕಾಯಂ ಸದಸ್ಯ ರಾಷ್ಟ್ರವನ್ನಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಜಿ-20ಶೃಂಗಸಭೆಯ 21ನೇ ರಾಷ್ಟ್ರವಾಗಿ ಆಫ್ರಿಕನ್ ಒಕ್ಕೂಟ ಸೇರ್ಪಡೆಗೊಂಡಿದೆ ಘೋಷಿಸಿದರು.* ಜಿ20 ಶೃಂಗಸಭೆಯ ಉದ್ಘಾಟನಾ ಭಾಷಣದಲ್ಲಿ ಪ್ರಧಾನಿ ಮೋದಿಯವರು ಜಿ20 ಬಳಗಕ್ಕೆ 55 ಸದಸ್ಯ ರಾಷ್ಟ್ರಗಳನ್ನೊಳಗೊಂಡ ಆಫ್ರಿಕ ಒಕ್ಕೂಟದ ಸೇರ್ಪಡೆಯನ್ನು ಪ್ರಕಟಿಸಿದರು.* ಪ್ರಧಾನಿ ನರೇಂದ್ರ ಮೋದಿ ಅವರು ಪ್ರಸ್ತಾಪವನ್ನು ಎಲ್ಲಾ ಸದಸ್ಯ ರಾಷ್ಟ್ರಗಳು ಒಪ್ಪಿಕೊಂಡ ಬಳಿಕ ಕೊಮೊರೊಸ್ ಒಕ್ಕೂಟ ಮತ್ತು ಆಫ್ರಿಕನ್ ಯೂನಿಯನ್ ಅಧ್ಯಕ್ಷ ಅಜಲಿ ಅಸ್ಸೌಮಾನಿ ಅವರನ್ನು ಜಿ20 ಹೈ ಟೇಬಲ್‌ನಲ್ಲಿ ತಮ್ಮ ಸ್ಥಾನವನ್ನು ಪಡೆದುಕೊಳ್ಳಲು ಆಹ್ವಾನಿಸಲಾಯಿತು.* ಆಫ್ರಿಕನ್ ಯೂನಿಯನ್ 55 ರಾಷ್ಟ್ರಗಳನ್ನು ಒಳಗೊಂಡಿದೆ ಜಿ20ನಲ್ಲಿ ಅದರ ಸೇರ್ಪಡೆಯೊಂದಿಗೆ, ಈ ಮೂಲಕ ಯುರೋಪಿಯನ್ ಒಕ್ಕೂಟದ ಬಳಿಕ 2ನೇ ಅತಿದೊಡ್ಡ ಯೂನಿಯನ್ ಇದಾಗಿದ್ದು, ಆಫ್ರಿಕನ್ ಯೂನಿಯನ್ ಪ್ರವೇಶದ ಬಳಿಕ ಜಿ20 ಅನ್ನು ಜಿ21 ಎಂದು ಮರುನಾಮಕರಣ ಮಾಡುವ ನಿರೀಕ್ಷೆಯಿದೆ.