* 45 ವರ್ಷಗಳ ಸರ್ಕಾರಿ ಸೇವೆ ಸಲ್ಲಿಸಿದ ಅಮಿತಾಭ್ ಕಾಂತ್ ಅವರು ಜಿ–20 ಶೆರ್ಪಾ ಹುದ್ದೆಯಿಂದ ರಾಜೀನಾಮೆ ನೀಡಿದ್ದಾರೆ.* 1980ರ ಐಎಎಸ್ ಬ್ಯಾಚ್ನ ಕೇರಳ ಕೇಡರ್ನ ನಿವೃತ್ತ ಅಧಿಕಾರಿ ಆಗಿರುವ ಅವರು, 2022ರ ಜುಲೈನಲ್ಲಿ ಭಾರತದ ಜಿ–20 ಶೆರ್ಪಾ ಹುದ್ದೆಗೆ ನೇಮಕಗೊಂಡಿದ್ದರು.* ‘ಎಕ್ಸ್’ನಲ್ಲಿ ತಮ್ಮ ನಿರ್ಧಾರ ಹಂಚಿಕೊಂಡ ಅವರು, ಹೊಸ ಅವಕಾಶಗಳನ್ನು ಸ್ವೀಕರಿಸಲು ಮುಂದಾಗುತ್ತಿರುವುದಾಗಿ ತಿಳಿಸಿದ್ದಾರೆ.* ತಮ್ಮ ಸೇವೆಯನ್ನು ಗುರುತಿಸಿ, ಜಿ20 ಶೆರ್ಪಾ ಆಗಿ ಅವಕಾಶ ನೀಡಿದ ಪ್ರಧಾನ ಮಂತ್ರಿ ಮೋದಿ ಅವರಿಗೆ ಅವರು ಕೃತಜ್ಞತೆ ತಿಳಿಸಿದ್ದಾರೆ.* ಜಿ–20 ಶೆರ್ಪಾಗಳು ತಮ್ಮ ದೇಶದ ನಾಯಕರ ಪರವಾಗಿ ಚರ್ಚೆಗಳಿಗೆ ಬುನಾದಿ ರೂಪಿಸುತ್ತಾರೆ. ಅಂತರರಾಷ್ಟ್ರೀಯ ಶೃಂಗಸಭೆಗಳಿಗೆ ಚೌಕಟ್ಟನ್ನು ತಯಾರಿಸಿ, ಒಪ್ಪಂದಗಳಿಗೆ ಭದ್ರತೆ ಒದಗಿಸುವ ಮಹತ್ವದ ಜವಾಬ್ದಾರಿ ಇವರಿಗೆ ಇದೆ.* ಈ ಪದವು ನೇಪಾಳದ ಹಿಮಾಲಯದ ಮಾರ್ಗದರ್ಶಕರಾದ ಶೆರ್ಪಾ ಜನಾಂಗದಿಂದ ಬಂದಿದ್ದು, ರಾಷ್ಟ್ರದ ನಾಯಕರ ಶೃಂಗಸಭೆ ಚಟುವಟಿಕೆಗಳನ್ನು ಸುಗಮಗೊಳಿಸುವ ಪಾತ್ರವನ್ನು ಸೂಚಿಸುತ್ತದೆ.