Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಜಗತ್ತಿನಲ್ಲಿ ಅತಿ ಹೆಚ್ಚು ಪೆಟ್ರೋಲ್ ಬಂಕ್ಗಳ ಪಟ್ಟಿಯಲ್ಲಿ ಅಮೆರಿಕ–ಚೀನಾದ ಬಳಿಕ ಭಾರತಕ್ಕೆ ಮೂರನೇ ಸ್ಥಾನ
26 ಡಿಸೆಂಬರ್ 2025
*
ದೇಶದಲ್ಲಿ ಪೆಟ್ರೋಲ್ ಬಂಕ್ಗಳ ಸಂಖ್ಯೆ 1 ಲಕ್ಷದ ಗಡಿ ದಾಟಿದ್ದು,
ಇದರಲ್ಲಿ ಶೇ 90ರಷ್ಟು ಬಂಕ್ಗಳು ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ನಿಯಂತ್ರಣದಲ್ಲಿವೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವಾಲಯದ ಪೆಟ್ರೋಲಿಯಂ ಯೋಜನೆ ಮತ್ತು ವಿಶ್ಲೇಷಣಾ ಘಟಕ (PPAC) ಬಿಡುಗಡೆ ಮಾಡಿದ ಅಂಕಿ-ಅಂಶಗಳು ತಿಳಿಸಿವೆ. 2015ರಲ್ಲಿ ದೇಶದಲ್ಲಿ
50,451
ಪೆಟ್ರೋಲ್ ಬಂಕ್ಗಳು ಮಾತ್ರ ಇದ್ದು, 2025ರ ನವೆಂಬರ್ ವೇಳೆಗೆ ಈ ಸಂಖ್ಯೆ
1,00,266ಕ್ಕೆ
ಏರಿಕೆಯಾಗಿದೆ.
ಅಮೆರಿಕಾ ಮತ್ತು ಚೀನಾದ ನಂತರ ಭಾರತದಲ್ಲಿ ಅತಿ ಹೆಚ್ಚು ಪೆಟ್ರೋಲ್ ಬಂಕ್ಗಳು ಹೊಂದಿರುವ ದೇಶವಾಗಿದೆ.
* ಸರ್ಕಾರಿ ವಲಯದ ತೈಲ ಕಂಪನಿಗಳಲ್ಲಿ ಇಂಡಿಯನ್ ಆಯಿಲ್ ಕಾರ್ಪೊರೇಷನ್
(IOC)
ಅತಿ ಹೆಚ್ಚು
41,664
ಪೆಟ್ರೋಲ್ ಬಂಕ್ಗಳನ್ನು ಹೊಂದಿದ್ದು, ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ (
BPCL) 24,605
ಹಾಗೂ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್
(HPCL) 24,418
ಬಂಕ್ಗಳನ್ನು ನಿರ್ವಹಿಸುತ್ತಿವೆ.
* ಖಾಸಗಿ ವಲಯವು 2003–04ರಲ್ಲಿ ಕೇವಲ 27 ಪೆಟ್ರೋಲ್ ಬಂಕ್ಗಳೊಂದಿಗೆ ಈ ಕ್ಷೇತ್ರಕ್ಕೆ ಪ್ರವೇಶಿಸಿತ್ತು. 2015ರಲ್ಲಿ ಖಾಸಗಿ ವಲಯದ ಪಾಲು ಶೇ 5.9ರಷ್ಟಿದ್ದರೆ, ಪ್ರಸ್ತುತ ಅದು ಶೇ 9.3ಕ್ಕೆ ಏರಿಕೆಯಾಗಿದೆ. ಖಾಸಗಿ ವಲಯದಲ್ಲಿ
ನಯಾರಾ ಎನರ್ಜಿ ಲಿಮಿಟೆಡ್ 6,921, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ 2,114 ಮತ್ತು ಬಿಪಿ ಶೆಲ್ 346 ಪೆಟ್ರೋಲ್ ಬಂಕ್ಗಳನ್ನು
ಹೊಂದಿವೆ.
* ಗ್ರಾಮೀಣ ಪ್ರದೇಶಗಳಲ್ಲಿ ಪೆಟ್ರೋಲ್ ಬಂಕ್ಗಳ ಪ್ರಮಾಣವೂ ಗಮನಾರ್ಹವಾಗಿ ಹೆಚ್ಚಿದ್ದು, 2015ರಲ್ಲಿ ಶೇ 22ರಷ್ಟಿದ್ದದ್ದು ಈಗ ಶೇ 29ಕ್ಕೆ ಏರಿಕೆಯಾಗಿದೆ. ಇಂದಿನ ಪೆಟ್ರೋಲ್ ಬಂಕ್ಗಳು ಪೆಟ್ರೋಲ್ ಮತ್ತು ಡೀಸೆಲ್ ಮಾರಾಟಕ್ಕೆ ಮಾತ್ರ ಸೀಮಿತವಾಗದೇ, ಸಿಎನ್ಜಿ ಮುಂತಾದ ಪರ್ಯಾಯ ಇಂಧನಗಳ ಜೊತೆಗೆ ಇಲೆಕ್ಟ್ರಿಕ್ ವಾಹನಗಳಿಗಾಗಿ ಚಾರ್ಜಿಂಗ್ ಕೇಂದ್ರಗಳನ್ನೂ ಹೊಂದಿರುವುದು ಮಹತ್ವದ ಬೆಳವಣಿಗೆಯಾಗಿದೆ.
* ಇಂಧನ ಬೆಲೆಗಳ ಮೇಲೆ ಸರ್ಕಾರದ ಪರೋಕ್ಷ ನಿಯಂತ್ರಣ ಇರುವುದರಿಂದ ಇಂಧನ ವಹಿವಾಟು ಕ್ಷೇತ್ರದಲ್ಲಿ ಖಾಸಗಿ ವಲಯದ ಪಾಲುದಾರಿಕೆ ಇನ್ನೂ ಸೀಮಿತವಾಗಿದೆ ಎಂಬುದನ್ನು ಈ ವರದಿ ಸೂಚಿಸುತ್ತದೆ.
Take Quiz
Loading...