* ಸೂಪರ್ ಕಂಪ್ಯೂಟರ್-ಎಐ ಯುಗದಲ್ಲಿಯೂ ಜಗತ್ತಿನಲ್ಲಿ 77.7 ಕೋಟಿ ನಿರಕ್ಷರರು ಇದ್ದಾರೆ. ಎಂದು ಯುನೆಸ್ಕೊ ವರದಿ ಮಾಡಿದೆ. ಜಾಗತಿಕ ಸಾಕ್ಷರತೆ ಪ್ರಮಾಣ ಶೇ.87ರಷ್ಟಿದೆ. ಮಹಿಳೆಯರು ನಿರಕ್ಷರರಲ್ಲಿ ಶೇ.63ರಷ್ಟಿದ್ದಾರೆ.* ಭಾರತದಲ್ಲಿ 2.9 ಕೋಟಿ ನಿರಕ್ಷರರು ಇದ್ದಾರೆ. 1951ರಲ್ಲಿ ಸಾಕ್ಷರತೆ ಶೇ.18 ಇದ್ದರೆ, 2011ರಲ್ಲಿ ಶೇ.74ಕ್ಕೆ ಏರಿತು. * 2025ರಲ್ಲಿ ಶೇ.80.9 ತಲುಪಲಿದೆ. ಸಾಕ್ಷರತೆ ಹೆಚ್ಚಿದಂತೆ ವ್ಯಕ್ತಿಗತ ಜೀವನಮಟ್ಟ ಸುಧಾರಣೆ, ಉದ್ಯೋಗಾವಕಾಶ, ಆರೋಗ್ಯ ಜ್ಞಾನ ಮತ್ತು ಸಾಮಾಜಿಕ ಸಮಾನತೆ ಸಾಧ್ಯ.- ಕಡಿಮೆ ಸಾಕ್ಷರತೆಯ ದೇಶಗಳು:ಜಡ್ (27%), ಮಾಲಿ (30.7%), ದಕ್ಷಿಣ ಸುಡಾನ್ (34.5%), ಬುರ್ಕಿನಾ ಫಾಸೊ (34.5%), ಆಫಘಾನಿಸ್ತಾನ್ (37.3%) ಸಾಕ್ಷರತೆಯಲ್ಲಿ ಹಿಂದುಳಿದಿವೆ.- ಕಡಿಮೆ ಸಾಕ್ಷರತೆ ಭಾರತದ ರಾಜ್ಯಗಳು : ಆಂಧ್ರಪ್ರದೇಶ (72.6%), ಬಿಹಾರ (74.3%), ಮಧ್ಯಪ್ರದೇಶ (75.2%), ರಾಜಸ್ಥಾನ (75.8%), ಜಾರ್ಖಂಡ್ (76.7%).- ಹೆಚ್ಚು ಸಾಕ್ಷರತೆ ಭಾರತದ ರಾಜ್ಯಗಳು : ಮಿಜೋರಾಂ (98.2%), ಲಕ್ಷದ್ವೀಪ (97.3%), ತ್ರಿಪುರ (95.3%), ಗೋವಾ (93.6%).* ಶೇ.100 ಸಾಕ್ಷರತೆ ಹೊಂದಿರುವ ರಾಷ್ಟ್ರಗಳಲ್ಲಿ ಉತ್ತರ ಕೊರಿಯಾ, ಕಜಕಿಸ್ತಾನ್, ಅಂಡೋರಾ, ಫಿನ್ಲ್ಯಾಂಡ್, ಉಕ್ರೇನ್, ಉಜ್ಬೇಕಿಸ್ತಾನ್,ಲಕ್ಸೆಂಬರ್ಗ್, ಗ್ರೀನ್ಲ್ಯಾಂಡ್ ಮತ್ತು ನಾರ್ವೆ ಸೇರಿವೆ.* ಬುಡಕಟ್ಟು, ಅಲೆಮಾರಿ, ವಲಸಿಗರನ್ನು ಸಾಕ್ಷರತೆ ವ್ಯಾಪ್ತಿಗೆ ತರುವುದು ಸವಾಲಾಗಿದೆ. ಶಾಲಾ ನೋಂದಣಿ ಪ್ರಮಾಣ ಹೆಚ್ಚಾದರೂ, ಮಕ್ಕಳಲ್ಲಿ ಮೂಲ ಗಣಿತ ಮತ್ತು ಓದು ಸಾಮರ್ಥ್ಯ ಕೊರತೆ ಉಳಿದಿದೆ.