* ಪ್ರಸ್ತುತ ದಕ್ಷಿಣ ಕೊರಿಯಾದ ಜನಸಂಖ್ಯೆ 5 ಕೋಟಿಯಷ್ಟಿದ್ದು, ಇದೇ ಪರಿಸ್ಥಿತಿ ಮುಂದುವರಿದರೆ 2100ರ ವೇಳೆಗೆ ದೇಶದ ಜನಸಂಖ್ಯೆ 2 ಕೋಟಿಗೆ ಕುಸಿಯುವ ಸಾಧ್ಯತೆ ಇದೆ ಎಂದು ವರದಿಗಳು ತಿಳಿಸಿವೆ.* ದಕ್ಷಿಣ ಕೊರಿಯಾದಲ್ಲಿ ಹುಟ್ಟುತ್ತಿರುವ ಮಕ್ಕಳ ಪ್ರಮಾಣ ಶೇ.0.6ಕ್ಕೆ ಕುಸಿತ ಕಂಡಿದೆ. ದಕ್ಷಿಣ ಕೊರಿಯಾ ಜಗತ್ತಿನಲ್ಲೇ ಅತ್ಯಂತ ಕನಿಷ್ಠ ಫಲವತ್ತತೆಯ ಪ್ರಮಾಣವನ್ನು ಹೊಂದಿದೆ. 2023ರಲ್ಲಿ ಇದರ ಪ್ರಮಾಣ ಶೇ.8ರಷ್ಟು ಕುಸಿತ ಕಂಡಿದೆ.* 1960ರ ದಶಕದಲ್ಲಿ ಆರಂಭವಾದ ಕುಟುಂಬ ಯೋಜನಾ ನೀತಿಯೇ ಇದಕ್ಕೆಲ್ಲಾ ಪ್ರಮುಖ ಕಾರಣವಾಗಿದೆ. ಜನನ ಪ್ರಮಾಣ ಕಡಿಮೆ ಮಾಡಲು ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಯಿತು. ಆ ಸಮಯದಲ್ಲಿ ದಕ್ಷಿಣ ಕೊರಿಯಾದ ತಲಾ ಆದಾಯವು ಜಾಗತಿಕ ಸರಾಸರಿಯ ಕೇವಲ 20 ಪ್ರತಿಶತದಷ್ಟಿತ್ತು. ಫಲವತ್ತತೆಯ ದರವು ಪ್ರತಿ ಒಬ್ಬ ಮಹಿಳೆ 6ಕ್ಕಿಂತ ಹೆಚ್ಚು ಮಕ್ಕಳನ್ನು ಹೊಂದಿರುತ್ತಿದ್ದರು.* 1982 ರ ಹೊತ್ತಿಗೆ, ಆರ್ಥಿಕ ಬೆಳವಣಿಗೆಯೊಂದಿಗೆ, ಫಲವತ್ತತೆಯ ದರವು 2.4 ಕ್ಕೆ ಇಳಿಯಿತು.* 1983ರಿಂದ ಫಲವತ್ತತೆ ದರ ನಿಯಂತ್ರಣದಲ್ಲಿತ್ತು, ಅಂದಿನಿಂದ ಕಡಿಮೆಯಾಗಿರಲಿಲ್ಲ. ದಕ್ಷಿಣ ಕೊರಿಯಾವು ತನ್ನ ಜನಸಂಖ್ಯೆಯ ಶೇ.70ರಷ್ಟು ಕಳೆದುಕೊಳ್ಳಬಹುದು ಎಂದು ಹೇಳಲಾಗುತ್ತಿದೆ. * ಕೇವಲ 14 ಮಿಲಿಯನ್ ಜನರು ಮಾತ್ರ ದೇಶದಲ್ಲಿರುತ್ತಾರೆ, ಇದು ಆರ್ಥಿಕತೆಯನ್ನು ಅಸ್ಥಿರಗೊಳಿಸುವ ಆತಂಕಕಾರಿ ಪರಿಸ್ಥಿತಿ ಎಂದು ಕೆಲವು ವಿಶ್ಲೇಷಕರು ಹೇಳಿದ್ದಾರೆ.* ದಕ್ಷಿಣ ಕೊರಿಯಾದಲ್ಲಿ ಯುವಕರ ಸಂಖ್ಯೆಗಿಂತ ವಯಸ್ಸಾದವರ ಸಂಖ್ಯೆ ಹೆಚ್ಚಾಗುತ್ತಿದೆ.ಈಗಾಗಲೇ ದೇಶದಲ್ಲಿ 60 ವರ್ಷ ಮೀರಿದವರ ಸಂಖ್ಯೆ 1 ಕೋಟಿಗೂ ಅಧಿಕವಾಗಿದೆ.* ಯುವಕರಸಂಖ್ಯೆ ಬಾರಿ ಪ್ರಮಾಣದಲ್ಲಿ ಕುಸಿದಿದ್ದು, ವಯಸ್ಸಾದವರ ಸಂಖ್ಯೆ ಹೆಚ್ಚಾತ್ತಿದೆ. ಇದು ದೇಶದ ಆರ್ಥಿಕತೆಗೆ ದೊಡ್ಡ ಹೊಡೆತವನ್ನೇ ಕೊಟ್ಟಿದೆ.* ಪ್ರಸ್ತುತ ಫಲವತ್ತತೆ ಹೆಚ್ಚಿನ ಜನಸಂಖ್ಯೆಯನ್ನು ಭಾರತ ಹೊಂದಿದ್ದರೂ ಭಾರತದಲ್ಲಿ ಮಕ್ಕಳ ಜನನ ಪ್ರಮಾಣ ನಿಧಾನಕ್ಕೆ ಕುಸಿತದ ಹಾದಿ ಹಿಡಿದಿದೆ. 1990ರ ದಶಕದಲ್ಲಿ ಭಾರತದ ಫಲವತ್ತತೆ ದರ ಶೇ.3.4ರಷ್ಟಿತ್ತು. ಬಳಿಕ ಇದು ಕುಸಿತದಲ್ಲೇ ಮುಂದುವರಿದಿದೆ. 2020ರ ದಶಕದಲ್ಲಿ ಇದರ ಪ್ರಮಾಣ ಶೇ.2ಕ್ಕೆ ಕುಸಿದಿದೆ.