* ಅಮೇರಿಕ ಮೂಲದ "ಮಾರ್ನಿಂಗ್ ಕನ್ಸಲ್ಟ್" ಸಂಸ್ಥೆಯು 2025ರ ಜುಲೈ 4ರಿಂದ 10ರ ವರೆಗೆ ನಡೆಸಿದ "ಗ್ಲೋಬಲ್ ಲೀಡರ್ ಅಪ್ರೂವಲ್ ರೇಟಿಂಗ್" ಸಮೀಕ್ಷೆಯಲ್ಲಿ ಹಲವು ರಾಷ್ಟ್ರಗಳ ಜನರ ಅಭಿಪ್ರಾಯ ಸಂಗ್ರಹಿಸಲಾಗಿದೆ.* ಈ ಸಮೀಕ್ಷೆಯಲ್ಲಿ ಭಾಗವಹಿಸಿದ ಪ್ರತಿ ನಾಲ್ಕು ಜನರಲ್ಲಿ ಮೂವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಪ್ರಜಾಪ್ರಭುತ್ವ ನಾಯಕನೆಂದು ಒಪ್ಪಿಕೊಂಡಿದ್ದಾರೆ.* 18% ಜನರು ಭಿನ್ನಾಭಿಪ್ರಾಯ ವ್ಯಕ್ತಪಡಿಸಿದ್ದು, 7% ಜನರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.* ದಕ್ಷಿಣ ಕೊರಿಯಾದ ಅಧ್ಯಕ್ಷ ಲೀ ಜೇ ಮ್ಯುಂಗ್, ಅಧಿಕಾರ ವಹಿಸಿಕೊಂಡ ಕೇವಲ ಒಂದು ತಿಂಗಳಲ್ಲಿ 59% ಅಪ್ರೂವಲ್ ಪಡೆಯದ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ. ಅಮೇರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಂಟನೇ ಸ್ಥಾನಕ್ಕಿಳಿದಿದ್ದಾರೆ.