* ಅಂತಾರಾಷ್ಟ್ರೀಯ ಸಾಗರ ಸಂಸ್ಥೆ (IMO) ಲಂಡನ್ನಲ್ಲಿ ಜರುಗಿದ ವಾರಪೂರ್ತಿ ಮಾತುಕತೆಯ ನಂತರ ಜಗತ್ತಿನ ಮೊದಲ ಜಾಗತಿಕ ಇಂಗಾಲ ತೆರಿಗೆಯ ನಿರ್ಧಾರ ತೆಗೆದುಕೊಂಡಿದೆ.* ಈ ತೆರಿಗೆಯನ್ನು ಭಾರತ, ಚೀನಾ, ಬ್ರೆಜಿಲ್ ಸೇರಿ 63 ರಾಷ್ಟ್ರಗಳು ಬೆಂಬಲಿಸಿವೆ. ಇದರ ಉದ್ದೇಶ ಹಡಗುಗಳಿಂದ ಇಂಗಾಲ ಹೊರಸೂಸುವಿಕೆಯನ್ನು ನಿಯಂತ್ರಿಸಿ ಶುದ್ಧ ಇಂಧನ ಬಳಕೆಯನ್ನು ಉತ್ತೇಜಿಸುವುದು.* 2028ರಿಂದ ಸಾಂಪ್ರದಾಯಿಕ ಇಂಧನ ಬಳಸುವ ಹಡಗುಗಳಿಗೆ ಪ್ರತಿ ಟನ್ ಇಂಗಾಲಕ್ಕೆ ₹32,000 (ಮಲಿನಕಾರಕ ಭಾಗ) ಮತ್ತು ₹8,000 (ಇತರ ಭಾಗ) ತೆರಿಗೆ ವಿಧಿಸಲಾಗುತ್ತದೆ.* ಈ ತೆರಿಗೆಯಿಂದ 2030ರ ವೇಳೆಗೆ $40 ಬಿಲಿಯನ್ ಸಂಗ್ರಹವಾಗುವ ನಿರೀಕ್ಷೆಯಿದೆ. ಆದರೆ ಈ ತೆರಿಗೆ ಅಭಿವೃದ್ಧಿಶೀಲ ದೇಶಗಳ ಹವಾಮಾನ ಆರ್ಥಿಕ ಅಗತ್ಯಗಳನ್ನು ಪೂರೈಸುವುದಿಲ್ಲ ಎಂಬ ಟೀಕೆ ಇದೆ.* ಇದು IMO ಗುರಿಯಾದ ಶೇ. 20 ಇಂಗಾಲ ಕಡಿತಕ್ಕಿಂತ ಕಡಿಮೆ ಶೇ. 10ರಷ್ಟು ಮಾತ್ರ ಇಳಿಕೆ ಸಾಧ್ಯ ಎಂದು ಅಂದಾಜಿಸಲಾಗಿದೆ. ಸೌದಿ ಅರೇಬಿಯಾ, ರಷ್ಯಾ, ಯುಎಇ ಮೊದಲಾದ ತೈಲ-ಸಮೃದ್ಧ ರಾಷ್ಟ್ರಗಳು ಈ ನಿರ್ಧಾರವನ್ನು ವಿರೋಧಿಸಿದ್ದರೆ, ಅಮೆರಿಕ ಭಾಗವಹಿಸಲೇ ಇಲ್ಲ.