* ಜಪಾನ್ನ ಪಶ್ಚಿಮ ಜಪಾನ್ ರೈಲ್ವೆ ಕಂಪನಿಯು ವಿಶ್ವದ ಮೊದಲ 3D ಮುದ್ರಿತ ರೈಲ್ವೆ ನಿಲ್ದಾಣವನ್ನು ನಿರ್ಮಿಸಿ ಗಮನ ಸೆಳೆದಿದೆ.* ಈ ನಿಲ್ದಾಣವು ಜಪಾನ್ನ ಆರಿಡಾ ನಗರದಲ್ಲಿರುವ ಹ್ಯಾಟ್ಸುಶಿಮಾ ಸ್ಟೇಷನ್ 1948ರ ಹಳೆಯ ಮರದ ನಿಲ್ದಾಣದ ಬದಲಿಗೆ 3D ಮುದ್ರಿತ ಭಾಗಗಳಿಂದ ಈ ನಿಲ್ದಾಣ ನಿರ್ಮಿಸಲಾಗಿದೆ.* "ಸೆರೆಂಡಿಕ್ಸ್" ಎಂಬ ತಂತ್ರಜ್ಞಾನ ಸಂಸ್ಥೆ ಈ ನಿರ್ಮಾಣ ಕಾರ್ಯವನ್ನು ಕೈಗೊಂಡಿದೆ.* ನಿಲ್ದಾಣದ ಭಾಗಗಳನ್ನು ವಿಶೇಷ ಗಾರೆಗಳಿಂದ ತಯಾರಿಸಿ, ಜಪಾನ್ನ ಕ್ಯುಶು ದ್ವೀಪದಲ್ಲಿರುವ ಕಾರ್ಖಾನೆಯಲ್ಲಿ ಮುದ್ರಿಸಲಾಗಿತ್ತು. ಕಾರ್ಖಾನೆಯಿಂದ 804 ಕಿ.ಮೀ ದೂರದ ಆರಿಡಾ ನಗರಕ್ಕೆ ಟ್ರಕ್ಗಳ ಮೂಲಕ ಭಾಗಗಳನ್ನು ತರಲಾಯಿತು.* ಸಂಪ್ರದಾಯಿಕ ನಿರ್ಮಾಣಕ್ಕೆ ಬೇಕಾಗುವ ಸಮಯ ಮತ್ತು ವೆಚ್ಚದ ಅರ್ಧದಲ್ಲಿ ಈ 3D ತಂತ್ರಜ್ಞಾನ ಮೂಲಕ ನಿಲ್ದಾಣ ನಿರ್ಮಿಸಲಾಗಿದೆ.* ನಿಲ್ದಾಣವು ಸಂಚಾರ ದಟ್ಟಣೆಗೆ ತಯಾರಾಗಿ, ಟಿಕೆಟ್ ಯಂತ್ರ ಮತ್ತು ಸಾರಿಗೆ ಕಾರ್ಡ್ ಸೌಲಭ್ಯಗಳೊಂದಿಗೆ ನಿರ್ಮಿಸಲಾಗಿದೆ.* ಅಂತಿಮ ತಾಂತ್ರಿಕ ಜೋಡಣೆ ಬಳಿಕ ಈ ನಿಲ್ದಾಣವನ್ನು 2025ರ ಜುಲೈನಲ್ಲಿ ಸಾರ್ವಜನಿಕ ಬಳಕೆಗೆ ನೀಡಲಾಗುವುದು.