* ವಂದೇ ಭಾರತ್ ರೈಲು ಜಗತ್ತಿನ ಎತ್ತರದ ಚೆನಾಬ್ ರೈಲ್ವೆ ಸೇತುವೆ ಮೇಲೆ ಯಶಸ್ವಿಯಾಗಿ ಪ್ರಯೋಗ ನಡೆಸಿದೆ, ಮತ್ತು ಇದರ ಮೂಲಕ ಜಮ್ಮು-ಕಾಶ್ಮೀರ ನಡುವೆ ನೇರ ರೈಲು ಸಂಪರ್ಕ ಸ್ಥಾಪಿಸಲಾಗಿದೆ.* ಶ್ರೀಮಾತಾ ವೈಷ್ಣೋದೇವಿ ಕಾತ್ರಾ ನಿಲ್ದಾಣದಿಂದ ಹೊರಟ ವಂದೇ ಭಾರತ್ ರೈಲು, 1.35 ಕಿ.ಮೀ ಉದ್ದದ ಮತ್ತು 353 ಮೀ. ಎತ್ತರದ ಕಾಮನಬಿಲ್ಲು ಆಕಾರದ ಸೇತುವೆ ಮೂಲಕ ಶ್ರೀನಗರವನ್ನು ತಲುಪಿತು. ರೈಲು ಬುಡ್ಗಾಂಗೆ ಪ್ರಯಾಣವಿಡುವ ಮೂಲಕ ಪ್ರಾಯೋಗಿಕ ಪರೀಕ್ಷೆ ಪೂರ್ಣಗೊಳಿಸಿತು.* ಚಳಿಗಾಲ ಮತ್ತು ಹಿಮಪಾತದ ಹಿನ್ನೆಲೆಯಲ್ಲಿ ವಂದೇ ಭಾರತ್ ರೈಲು ವಿನ್ಯಾಸಗೊಳಿಸಲಾಗಿದೆ. ರೈಲಿನಲ್ಲಿ ಹವಾಮಾನಕ್ಕೆ ಅನುಗುಣವಾಗಿ ಹೀಟಿಂಗ್ ತಂತ್ರಜ್ಞಾನ ಅಳವಡಿಸಲಾಗಿದೆ, ಇದರಿಂದ ಹಿಮಪಾತದ ವೇಳೆ ಸಂಚಾರದಲ್ಲಿ ಅಡ್ಡಿಯುಂಟಾಗದಂತೆ ದಟ್ಟ ಮಂಜು ಸ್ವಯಂಚಾಲಿತವಾಗಿ ಕರಗುತ್ತದೆ.* ಪೈಲಟ್ ಮುಂಭಾಗದ ಗಾಜಿನ ಮೇಲೆ ಬೀಳುವ ಹಿಮವನ್ನು ತೆರವುಗೊಳಿಸಲು ಸ್ವಯಂಚಾಲಿನ ವಿಂಡ್ಶೀಲ್ಡ್ ಅಳವಡಿಸಲಾಗಿದೆ. ರೈಲ್ವೆ ಸುರಕ್ಷತಾ ಆಯುಕ್ತರು ಅನುಮತಿ ನೀಡಿದ ನಂತರ ಚೆನಾಬ್ ಸೇತುವೆ ಮೇಲೆ ರೈಲ್ವೆ ಸಂಚಾರ ಆರಂಭವಾಗಲಿದೆ.