Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಜಗತ್ತಿನ ಅತಿ ಎತ್ತರದ ಚೆನಾಬ್ ಸೇತುವೆ ಉದ್ಘಾಟನೆ: ಜಮ್ಮು-ಕಾಶ್ಮೀರಕ್ಕೆ ಹೊಸ ಬೆಳಕು
6 ಜೂನ್ 2025
* ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಜಮ್ಮು ಮತ್ತು ಕಾಶ್ಮೀರದ ರೀಯಾಸಿಯಲ್ಲಿ ನಿರ್ಮಿತವಾಗಿರುವ ವಿಶ್ವದ ಅತ್ಯಂತ ಎತ್ತರದ ರೈಲು ಸೇತುವೆ
— ಚೆನಾಬ್ ಸೇತುವೆ —
ಯನ್ನು ಇಂದು ಅಧಿಕೃತವಾಗಿ ಉದ್ಘಾಟಿಸಿದರು. ತಿರಂಗವನ್ನು ಹಿಡಿದಿರುವ ಪ್ರಧಾನಿಯ ದೃಶ್ಯ ಎಲ್ಲೆಡೆ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
* ಈ ಸೇತುವೆ ಭಾರತೀಯ ರೈಲ್ವೆಯ ಇತಿಹಾಸದಲ್ಲಿ ಪ್ರಮುಖ ಮೈಲಿಗಲ್ಲಾಗಿದ್ದು, ಇಂಜಿನಿಯರ್ಗಳ ಮತ್ತು ತಾಂತ್ರಿಕತೆಯ ಸಾಧನೆಯ ಸಂಕೇತವಾಗಿದೆ. ಚೆನಾಬ್ ನದಿಯ ಮೇಲೆ 359 ಮೀಟರ್ ಎತ್ತರದಲ್ಲಿ ನಿರ್ಮಿತವಾದ 1,315 ಮೀಟರ್ ಉದ್ದದ ಉಕ್ಕಿನ ಕಮಾನು ಸೇತುವೆಯಾಗಿದೆ. ಇದನ್ನು ಭೂಕಂಪ ಪ್ರದೇಶ-5 ಮತ್ತು 260 ಕಿ.ಮೀ. ಪ್ರತಿ ಗಂಟೆ ಗಾಳಿಯ ವೇಗವನ್ನು ತಡೆದುಕೊಳ್ಳುವಂತೆ ವಿನ್ಯಾಸಗೊಳಿಸಲಾಗಿದೆ. 30,000 ಟನ್ ಉಕ್ಕು ಮತ್ತು ಫುಟ್ಬಾಲ್ ಮೈದಾನದ ಅರ್ಧದಷ್ಟು ಗಾತ್ರದ ಅಡಿಪಾಯವನ್ನು ಬಳಸಿಕೊಂಡು ನಿರ್ಮಿಸಲಾದ ಈ ಸೇತುವೆ, ಎಫಿಲ್ ಟವರ್ಗಿಂತ 35 ಮೀಟರ್ ಎತ್ತರವಾಗಿದೆ.
ಇನ್ನಷ್ಟು ವಿವರಗಳು:
* ಪ್ರಪಂಚದ ಅತ್ಯಂತ ಎತ್ತರದ ರೈಲು ಸೇತುವೆಯಾಗಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಂಡಿದೆ.
*ಈ ಸೇತುವೆ ಉಧಂಪುರ-ಶ್ರೀನಗರ-ಬಾರಾಮುಲ್ಲಾ ರೈಲು ಮಾರ್ಗದ ಭಾಗವಾಗಿದ್ದು, ಜಮ್ಮು ಮತ್ತು ಕಾಶ್ಮೀರವನ್ನು ಭಾರತದ ಇತರ ಭಾಗಗಳಿಗೆ ಸಂಪರ್ಕ ಮಾಡುತ್ತದೆ.
* ₹46,000 ಕೋಟಿ ವೆಚ್ಚದ ಯೋಜನೆಯ ಭಾಗವಾಗಿ ಸೇತುವೆ ನಿರ್ಮಾಣವಾಗಿದೆ.
* 1,315 ಮೀಟರ್ ಸೇತುವೆಯ ಉದ್ದ.
* 35 ಮೀಟರ್ ಅಗಲ.
* ಯೋಜನೆಯ ಒಟ್ಟು ವೆಚ್ಚ: ₹43,780 ಕೋಟಿ.
* 272 ಕಿ.ಮೀ ಯೋಜನೆಯ ಉದ್ದ.
* 36 ರೈಲು ನಿಲ್ದಾಣಗಳು.
* 943 ಕಿ.ಮೀ ಒಟ್ಟು ರೈಲು ಮಾರ್ಗದ ಉದ್ದ.
ಭವಿಷ್ಯದಲ್ಲಿ ಜಮ್ಮು-ಕಾಶ್ಮೀರ ಭಾಗದಲ್ಲಿ ಆರ್ಥಿಕ, ಪ್ರವಾಸೋದ್ಯಮ ಮತ್ತು ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ನಿರೀಕ್ಷೆಯಿದೆ.
Take Quiz
Loading...