Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಜಗತ್ತಿನ ಅಭಿವೃದ್ಧಿ ಸೂಚ್ಯಂಕ 2025: ರಾಷ್ಟ್ರಗಳ ಜವಾಬ್ದಾರಿತ್ವದ ಮೌಲ್ಯಮಾಪನ
26 ನವೆಂಬರ್ 2025
* ಜಾಗತಿಕ ಅಭಿವೃದ್ದಿಗೆ ಪ್ರತಿ ರಾಷ್ಟ್ರ ನೀಡುವ ಕೊಡುಗೆ ಎಷ್ಟಿದೆ ಎಂಬುದನ್ನು ಅಳೆಯುವ ಪ್ರಮುಖ ಅಂತರರಾಷ್ಟ್ರೀಯ ಸೂಚ್ಯಂಕವಾಗಿರುವುದು
Commitment to Development Index (CDI)
. ಇದನ್ನು
Centre for Global Development (CGD)
ಎಂಬ ಸ್ವತಂತ್ರ ಸಂಶೋಧನಾ ಸಂಸ್ಥೆ ಪ್ರಕಟಿಸುತ್ತದೆ. CDI 2025 ರ ವರದಿ ವಿಶ್ವದ 36 ಪ್ರಮುಖ ದೇಶಗಳ ನೀತಿಗಳನ್ನು ವಿಶ್ಲೇಷಿಸಿ ಪ್ರಕಟಿಸಿದೆ.
* ಈ ವರ್ಷ ಬಿಡುಗಡೆಗೊಂಡ CDI 2025 ರ ರ್ಯಾಂಕಿಂಗ್ನಲ್ಲಿ ಭಾರತ
ಒಟ್ಟು 36 ದೇಶಗಳಲ್ಲಿ 36ನೇ ಸ್ಥಾನ
ಪಡೆದಿದೆ.
ವೈಶ್ವಿಕ ಅಭಿವೃದ್ದಿ ಮತ್ತು ಸಹಕಾರದ ಕ್ಷೇತ್ರದಲ್ಲಿ ಭಾರತ ಹಲವು ಜಾಗತಿಕ ಪ್ರಯತ್ನಗಳನ್ನು ಮಾಡುತ್ತಿದ್ದರೂ CDI ಯ ಮಾಪನ ಕ್ರಮದ ಪ್ರಕಾರ ಭಾರತ ಇನ್ನೂ ಹೆಚ್ಚಿನ ಸುಧಾರಣೆಯನ್ನು ಮಾಡಬೇಕಿದೆ.
CDI ಯಲ್ಲಿ ದೇಶಗಳ ಅಭಿವೃದ್ದಿ ಕೊಡುಗೆಯನ್ನು ಕೆಳಗಿನ 7 ವಿಭಾಗಗಳ ಆಧಾರದ ಮೇಲೆ ಅಳೆಯಲಾಗುತ್ತದೆ:
- ವ್ಯಾಪಾರ (Trade) :
1.
ಅಭಿವೃದ್ಧಿಶೀಲ ರಾಷ್ಟ್ರಗಳ ಉತ್ಪನ್ನಗಳ ಮೇಲಿನ ಸುಂಕ ಕಡಿಮೆ ಮಾಡಲಾಗಿದೆಯೇ? 2. ಮಾರುಕಟ್ಟೆ ಪ್ರವೇಶ ಅವಕಾಶಗಳನ್ನು ಎಷ್ಟು ತೆರೆಯಲಾಗಿದೆ?
ಭಾರತದ ವ್ಯಾಪಾರ ನೀತಿಗಳು ಹಲವು ಸುಂಕ ಮತ್ತು ನಿಬಂಧನೆಗಳನ್ನು ಹೊಂದಿರುವುದರಿಂದ ಈ ವಿಭಾಗದಲ್ಲಿ ಅಂಕಗಳು ಕಡಿಮೆ.
- ಹೂಡಿಕೆ (Investment) :
1.
ವಿದೇಶಿ ಹೂಡಿಕೆಗಳಿಗೆ ಅವಕಾಶಗಳೇನು?
2.
ಕಂಪನಿಗಳು ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಜವಾಬ್ದಾರಿಯುತ ಹೂಡಿಕೆ ಮಾಡುತ್ತಿದ್ದಾರೆಯೇ?
ಭಾರತ ಕೆಲವು ನಿರ್ಬಂಧಗಳನ್ನು ಹೊಂದಿರುವುದರಿಂದ ಈ ವಿಭಾಗವೂ ಬಹುಶಃ ಕಡಿಮೆ ಅಂಕ ಪಡೆದಿದೆ.
- ವಲಸೆ (Migration):
1. ವಿದೇಶಿ ಪ್ರತಿಭೆಯನ್ನು ಸ್ವೀಕರಿಸುವುದು, ಅವಕಾಶ ನೀಡುವುದು. 2. ಆಶ್ರಯಾರ್ಥಿಗಳಿಗೆ ನೀಡುವ ಅವಕಾಶಗಳು.
ಭಾರತ ವಲಸೆ ನೀತಿಗಳಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಹೊಂದಿರುವುದರಿಂದ ಅಂಕ ಕಡಿಮೆ.
- ಪರಿಸರ (Environment) :
1.ಕಾರ್ಬನ್ ಇಮ್ಮಿಷನ್ ಕಡಿತ 2. ನವೀಕರಿಸಬಹುದಾದ ಶಕ್ತಿ ಉತ್ತೇಜನ 3. ಹವಾಮಾನ ಬದಲಾವಣೆ ನೀತಿಗಳು
ಭಾರತ ಪರಿಸರ ಕಾರ್ಯಗಳಲ್ಲಿ ಮುಂದುವರೆದಿದ್ದರೂ, ಅಭಿವೃದ್ಧಿಶೀಲ ರಾಷ್ಟ್ರಗಳ ಮಾನದಂಡಕ್ಕೆ ಹೋಲಿಸಿದರೆ ಸುಧಾರಣೆಗೆ ಅವಕಾಶವಿದೆ.
- ಸುರಕ್ಷತೆ (Security) :
1. ಯುಎನ್ ಶಾಂತಿ ಪಡೆಗೆ ನೀಡಿರುವ ಸಹಕಾರ 2. ಜಾಗತಿಕ ಭದ್ರತೆಯಲ್ಲಿ ಪಾತ್ರ
ಭಾರತ ಯುಎನ್ ಶಾಂತಿ ಪಡೆಗೆ ದೊಡ್ಡ ಕೊಡುಗೆ ನೀಡಿದರೂ, CDI ಯ ಇತರ ಭದ್ರತಾ ಮಾನದಂಡಗಳ ಪ್ರಕಾರ ಮಧ್ಯಮ ಮಟ್ಟದ ಅಂಕವಿದೆ.
- ತಂತ್ರಜ್ಞಾನ (Technology) :
1.ತಂತ್ರಜ್ಞಾನ ಹಂಚಿಕೆ 2. ಅಭಿವೃದ್ದಿಶೀಲ ದೇಶಗಳಿಗೆ ತಂತ್ರಜ್ಞಾನ ವರ್ಗಾವಣೆ
ಭಾರತ ತಂತ್ರಜ್ಞಾನ ಕ್ಷೇತ್ರದಲ್ಲಿ ದೊಡ್ಡ ದಿಗ್ಗಜವಾದರೂ ಜಾಗತಿಕ ಸಹಕಾರದ ದೃಷ್ಟಿಯಿಂದ CDN ಮಾನದಂಡಕ್ಕೆ ಪ್ರಕಾರ ಮಧ್ಯಮ ಅಂಕ.
- ಅಭಿವೃದ್ಧಿ ನೆರವು (Aid):
1. ಬಡ ರಾಷ್ಟ್ರಗಳಿಗೆ ನೀಡುವ ನೆರವು 2. ಮಾನವೀಯ ಸಹಾಯ 3.ಅಂತರರಾಷ್ಟ್ರೀಯ ದಾನ
ಭಾರತ ನೆರವು ನೀಡಿದರೂ, ಅಭಿವೃದ್ಧಿಶೀಲ ರಾಷ್ಟ್ರಗಳಷ್ಟಾಗಿ ದೊಡ್ಡ ಮೊತ್ತದ ನೆರವಿಲ್ಲ.
CDI ಯ ಮುಖ್ಯ ಗುರಿಗಳು:
✔ ಜಗತ್ತಿನ ಪ್ರತಿಯೊಂದು ದೇಶವೂ ವಿಶ್ವ ಅಭಿವೃದ್ದಿಗೆ ಹೇಗೆ ಕೊಡುಗೆ ಕೊಡುತ್ತದೆ ಎಂಬುದನ್ನು ಅಳೆಯುವುದು
✔ ನೀತಿಗಳ ಜಾಗತಿಕ ಪರಿಣಾಮವನ್ನು ವಿಶ್ಲೇಷಿಸುವುದು
✔ ಅಭಿವೃದ್ಧಿ, ಭದ್ರತೆ, ಪರಿಸರ ರಕ್ಷಣೆಯಂತಹ ಕ್ಷೇತ್ರಗಳಲ್ಲಿ ರಾಷ್ಟ್ರಗಳನ್ನು ಉತ್ತೇಜಿಸುವುದು
✔ ಜಾಗತಿಕ ಸಹಕಾರ ಮತ್ತು ಜವಾಬ್ದಾರಿತ್ವವನ್ನು ಹೆಚ್ಚಿಸುವುದು
Take Quiz
Loading...