* ಭಾರತದ ತ್ರಿವರ್ಣ ಧ್ವಜ ಕೇವಲ ಖಾದಿ ವಸ್ತ್ರವಾಗಿರದೇ, ಭಾರತದ ಹೆಮ್ಮೆ ಮತ್ತು ಸ್ವಾಭಿಮಾನದ ಸಂಕೇತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಬೆಳಗಾವಿಯ ಸುವರ್ಣಸೌಧದ ಪಶ್ಚಿಮ ದಿಕ್ಕಿನ ಮೆಟ್ಟಿಲುಗಳ ಮೇಲೆ ಮಂಗಳವಾರ(ಡಿಸೆಂಬರ್ 9) ಜಗತ್ತಿನ ಎರಡನೇ ಅತೀ ದೊಡ್ಡ ಖಾದಿ ತ್ರಿವರ್ಣ ಧ್ವಜವನ್ನು ಅನಾವರಣ ಮಾಡಿದರು.* ಡಾ. ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನದ ಪೀಠಿಕೆಯನ್ನು ಶಾಲೆ–ಕಾಲೇಜುಗಳಲ್ಲಿ ಓದಿಸುವ ಕಾರ್ಯ ಸರ್ಕಾರದಿಂದ ನಡೆಯುತ್ತಿದೆ. ಈ ಐತಿಹಾಸಿಕ ಕಾರ್ಯಕ್ರಮವು ಸಂವಿಧಾನಾತ್ಮಕ ಮೌಲ್ಯಗಳು ಹಾಗೂ ರಾಷ್ಟ್ರಚೇತನೆಯನ್ನು ಬಲಪಡಿಸುವ ಉದ್ದೇಶವನ್ನು ಹೊಂದಿದೆ.* ತ್ರಿವರ್ಣ ಧ್ವಜದ ಬಣ್ಣಗಳ ಅರ್ಥ:- => ಕೇಸರಿ: – ತ್ಯಾಗ ಮತ್ತು ಶೌರ್ಯ=> ಬಿಳಿ: – ಶಾಂತಿ ಮತ್ತು ಸತ್ಯ=> ಹಸಿರು: – ಸಮೃದ್ಧಿ ಮತ್ತು ಅಭಿವೃದ್ಧಿ=> ಅಶೋಕ ಚಕ್ರ :– ನಿರಂತರ ಪ್ರಗತಿ, ಸಮಾನ ಅವಕಾಶ ಮತ್ತು ಆರ್ಥಿಕ ಚಲನೆ* ಈ ಸಾಧನೆಗೆ ಕಾರಣರಾದ ವಿಧಾನಸಭಾ ಸಭಾಧ್ಯಕ್ಷ ಯು.ಟಿ. ಖಾದರ್ ಹಾಗೂ ಕಲ್ಬುರ್ಗಿ ಜಿಲ್ಲೆಯ ಕಮಲಾಪುರದ ವಿನೋದ್ ಕುಮಾರ್ ರೇವಪ್ಪ ಬಮ್ಮಣ್ಣ ಅವರ ಕುಟುಂಬವನ್ನು ಮುಖ್ಯಮಂತ್ರಿ ಅಭಿನಂದಿಸಿದರು. ತ್ರಿವರ್ಣ ಧ್ವಜವನ್ನು ಗೌರವದಿಂದ ಹಾಗೂ ಹೆಮ್ಮೆಯಿಂದ ಕಾಣಬೇಕು, ರಾಷ್ಟ್ರಕ್ಕಾಗಿ ತ್ಯಾಗ ಮಾಡಿದವರನ್ನು ಸದಾ ಸ್ಮರಿಸಬೇಕು ಎಂದು ಹೇಳಿದರು.* ಭಾರತವು ಅನೇಕ ಜಾತಿ–ಧರ್ಮಗಳ ದೇಶವಾಗಿರುವುದರಿಂದ ಜಾತ್ಯತೀತತೆ, ಭ್ರಾತೃತ್ವ ಮತ್ತು ಮಾನವೀಯತೆ ಅತಿ ಅವಶ್ಯಕವೆಂದು ತಿಳಿಸಿ, ಸ್ವಾತಂತ್ರ್ಯಕ್ಕೆ 79 ವರ್ಷಗಳಾದ ಹಿನ್ನೆಲೆ, ನಾವು ರಾಷ್ಟ್ರಪ್ರೇಮ ಮತ್ತು ಸಾಮಾಜಿಕ ಸಮಾನತೆಯನ್ನು ಎಷ್ಟರಮಟ್ಟಿಗೆ ಸಾಧಿಸಿದ್ದೇವೆ ಎಂಬುದರ ಬಗ್ಗೆ ಆತ್ಮಾವಲೋಕನ ಅಗತ್ಯ ಎಂದರು.* 2022ರಲ್ಲಿ ಲಡಾಖ್ನ ಲೇಹ್ನಲ್ಲಿ 225 ಅಡಿ ಉದ್ದ ಮತ್ತು 150 ಅಡಿ ಅಗಲದ ಜಗತ್ತಿನ ಅತಿದೊಡ್ಡ ಖಾದಿ ರಾಷ್ಟ್ರಧ್ವಜವನ್ನು ಅನಾವರಣ ಮಾಡಲಾಗಿದ್ದು, 75 ಅಡಿ ಉದ್ದ ಮತ್ತು 55 ಅಡಿ ಅಗಲ ಹೊಂದಿರುವ ಖಾದಿ ರಾಷ್ಟ್ರಧ್ವಜವು ಜಗತ್ತಿನ ಎರಡನೇ ಅತಿದೊಡ್ಡ ಖಾದಿ ರಾಷ್ಟ್ರಧ್ವಜವಾಗಿದೆ.