* ನಟ ಮತ್ತು ರಾಜ್ಯಸಭಾ ಸದಸ್ಯ ಜಗ್ಗೇಶ್ ಅವರಿಗೆ ತೆಲುಗು ವಿಜ್ಞಾನ ಸಮಿತಿಯಿಂದ ಶ್ರೀಕೃಷ್ಣ ದೇವರಾಯ ಪುರಸ್ಕಾರ ನೀಡಲು ಆಯ್ಕೆ ಮಾಡಲಾಗಿದೆ.* ಜಗ್ಗೇಶ್ರನ್ನು ಶ್ರೀಕೃಷ್ಣ ದೇವರಾಯ ಪುರಸ್ಕಾರಕ್ಕೆ ಆಯ್ಕೆ ಮಾಡಿರುವ ತೆಲುಗು ವಿಜ್ಞಾನ ಸಮಿತಿ, ನಟ ಸಾಯಿ ಕುಮಾರ್ ಅವರಿಗೆ ಸುವರ್ಣ ಸತ್ಕಾರ ನೀಡಲಿದೆ.* ಏಪ್ರಿಲ್ 6ರಂದು ಬೆಳಿಗ್ಗೆ 10 ಗಂಟೆಗೆ ಮಲ್ಲೇಶ್ವರದ ವೈಯಾಲಿಕಾವಲ್ನಲ್ಲಿ ಇರುವ ಶ್ರೀಕೃಷ್ಣ ದೇವರಾಯ ಕಲಾಮಂದಿರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ.* ₹25,000 ನಗದು ಬಹುಮಾನವಿರುವ ಈ ಪ್ರಶಸ್ತಿಯನ್ನು ಆಂಧ್ರ ಪ್ರದೇಶ ವಿಧಾನಸಭೆಯ ಉಪಾಧ್ಯಕ್ಷ ಕೆ.ರಘುರಾಮ ಕೃಷ್ಣರಾಜು, ರಾಜ್ಯದ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ಎಸ್. ತಂಗಡಗಿ, ಸಮಿತಿ ಅಧ್ಯಕ್ಷ ಎ. ರಾಧಾಕೃಷ್ಣರಾಜು ಮತ್ತು ವಿದ್ಯಾಸಂಸ್ಥೆಯ ಅಧ್ಯಕ್ಷ ಶ್ಯಾಮರಾಜು ಅವರ ಸಾನ್ನಿಧ್ಯದಲ್ಲಿ ಪ್ರದಾನ ಮಾಡಲಾಗುತ್ತದೆ ಎಂದು ಸಮಿತಿಯ ಪ್ರಧಾನ ಕಾರ್ಯದರ್ಶಿ ಐ. ಲಕ್ಷ್ಮೀ ರೆಡ್ಡಿ ತಿಳಿಸಿದ್ದಾರೆ.* ಆಂಧ್ರಪ್ರದೇಶ ಸರ್ಕಾರವು ಖ್ಯಾತ ಇತಿಹಾಸಕಾರ ಮತ್ತು ಪುರಾತತ್ವ ಶಾಸ್ತ್ರಜ್ಞ ಮೈನಾ ಸ್ವಾಮಿ ಅವರಿಗೆ ಪ್ರತಿಷ್ಠಿತ ಯುಗಾದಿ ಪ್ರಶಸ್ತಿಯನ್ನು ನೀಡಿ ಗೌರವಿಸುವುದಾಗಿ ಘೋಷಿಸಿದೆ.