* ಸ್ಮೃತಿ ಮಂಧನಾ ನಾಯಕತ್ವದಲ್ಲಿ ಭಾರತೀಯ ಮಹಿಳಾ ತಂಡವು ಭಾನುವಾರ ನಡೆದ ಐರ್ಲೆಂಡ್ ವಿರುದ್ಧದ ದ್ವಿತೀಯ ಏಕದಿನ ಪಂದ್ಯವನ್ನು 116 ರನ್ಗಳಿಂದ ಗೆದ್ದು ಸರಣಿಯನ್ನು ಗೆದ್ದಿದೆ.* ಈ ಪಂದ್ಯದಲ್ಲಿ ಜೆಮಿಮಾ ರೋಡ್ರಿಗಸ್ ಅವರ ಮೊದಲ ಅಂತಾರಾಷ್ಟ್ರೀಯ ಶತಕ ದಾಖಲಿಸಿದರು. ಈ ಪಂದ್ಯ ತಮ್ಮ ವೃತ್ತಿಜೀವನದ 41ನೇ ಪಂದ್ಯವಾಗಿತ್ತು.* ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಭಾರತ 5 ವಿಕೆಟಿಗೆ 370 ರನ್ ಕಲೆಹಾಕಿತು. ಐರ್ಲೆಂಡ್ 7 ವಿಕೆಟಿಗೆ 254 ರನ್ ಗಳಿಸಿ ಶರಣಾಯಿತು.* ಮುಂಬೈ ಆಟಗಾರ್ತಿ ಜೆಮಿಮಾ ಅವರ ಶತಕದ ನೆರವಿನಿಂದ ತಂಡವು ಐರ್ಲೆಂಡ್ ವಿರುದ್ಧ 116 ರನ್ಗಳ ಜಯ ಸಾಧಿಸಿತು ಮತ್ತು ಮೂರು ಪಂದ್ಯಗಳ ಸರಣಿಯನ್ನು 2–0ಯಿಂದ ಗೆದ್ದಿತು.* ಭಾರತ ತಂಡ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ, ನಾಯಕಿ ಸ್ಮೃತಿ ಮಂದಾನ (73) ಮತ್ತು ಪ್ರತೀಕಾ ರಾವಳ್ (67) ಅಮೋಘ ಆರಂಭ ನೀಡಿದರು, ಮೊದಲ ವಿಕೆಟ್ ಜೊತೆಯಾಟದಲ್ಲಿ 156 ರನ್ ಗಳಿಸಿದರು. ಹರ್ಲಿನ್ ಡಿಯೊಲ್ (89) ಮತ್ತು ಜಿಮಿಮಾ (ಶತಕ, 91 ಎಸೆತೆ) 3ನೇ ವಿಕೆಟ್ಗಾಗಿ 183 ರನ್ ಸೇರಿಸಿದರು, ಭಾರತದ ಮೊತ್ತಕ್ಕೆ ಗಟ್ಟಿ ಅಡಿಪಾಯ ಒದಗಿಸಿದರು.* ಭಾರತದ ಬೌಲರ್ಗಳು ದೀಪ್ತಿ ಶರ್ಮಾ 3 ಮತ್ತು ಪ್ರಿಯಾ ಮಿಶ್ರಾ 2 ವಿಕೆಟ್ಗಳನ್ನು ಪಡೆದರು.