* ಅಮೆರಿಕ ಮೂಲದ ಟ್ರೇಡಿಂಗ್ ಕಂಪನಿ ಜೇನ್ ಸ್ಟ್ರೀಟ್ ಗ್ರೂಪ್ ಅನ್ನು ಭಾರತೀಯ ಷೇರು ಮಾರುಕಟ್ಟೆಯಿಂದ ಸೆಬಿ ನಿಷೇಧಿಸಿದೆ. 2023ರಿಂದ 2025ರ ನಡುವೆ ಕಂಪನಿಯು ವಂಚನೆಯ ಮೂಲಕ ₹36,500 ಕೋಟಿ ಲಾಭ ಮಾಡಿದೆ ಎಂಬ ಆರೋಪವಿದೆ.* ಜೇನ್ ಸ್ಟ್ರೀಟ್ ಬ್ಯಾಂಕ್ ನಿಫ್ಟಿ ಫ್ಯೂಚರ್ಸ್, ಆಪ್ಷನ್, ಮತ್ತು ಇಕ್ವಿಟಿ ಸೆಗ್ಮೆಂಟ್ಗಳಲ್ಲಿ "ಇಂಟ್ರಾಡೇ ಮ್ಯಾನುಪುಲೇಶನ್" ಮತ್ತು "ಮಾರ್ಕಿಂಗ್ ದಿ ಕ್ಲೋಸ್" ತಂತ್ರ ಬಳಸಿದೆ.* ಒಂದು ದಿನದೊಳಗೆ ಷೇರುಗಳ ಖರೀದಿ ಮತ್ತು ಮಾರಾಟದಿಂದ ಬೆಲೆಗಳನ್ನು ಉಬ್ಬಿಸಿ ಅಥವಾ ಕುಸಿಸಿ ಅದರಿಂದ ಲಾಭ ಪಡೆದಿದೆ.* ಕಂಪನಿಯು JS Investments ಸೇರಿದಂತೆ ನಾಲ್ಕು ಅಂಗಸಂಸ್ಥೆಗಳ ಮೂಲಕ ಭಾರತದಲ್ಲಿ ಟ್ರೇಡಿಂಗ್ ಮಾಡುತ್ತಿತ್ತು. 2,600 ಉದ್ಯೋಗಿಗಳಿರುವ ಈ ಕಂಪನಿ ಅತ್ಯಾಧುನಿಕ ಕ್ವಾಂಟ್ ಮಾದರಿಗಳು ಹಾಗೂ ಆಟೊಮೇಟೆಡ್ ವಿಧಾನಗಳಿಂದ ಕೆಲಸ ನಡೆಸುತ್ತಿತ್ತು.* ಆಲ್ಗೋ ಟ್ರೇಡರ್ ಕೃಪಾಕರನ್ ಟೊಮೆಟೋ-ಕೆಚಪ್ ಉದಾಹರಣೆ ನೀಡಿ, ಈಕ್ವಿಟಿ ಮತ್ತು ಫ್ಯೂಚರ್ಸ್ಗಳಲ್ಲಿ ನಷ್ಟ ಕಂಡು, ಆಪ್ಷನ್ಗಳಲ್ಲಿ ಲಾಭ ಮಾಡುವ ತಂತ್ರವನ್ನು ವಿವರಿಸಿದ್ದಾರೆ.* ಜೇನ್ ಸ್ಟ್ರೀಟ್ನ ₹4,843 ಕೋಟಿ ಮೊತ್ತವನ್ನು ಸೆಬಿ ಮುಟ್ಟುಗೋಲು ಹಾಕಿದ್ದು, ಕಂಪನಿಗೆ 21 ದಿನಗಳೊಳಗೆ ಪ್ರತಿಕ್ರಿಯೆ ನೀಡುವ ಸೂಚನೆ ನೀಡಿದೆ.