* ಯುವ ಆಟಗಾರ ಜೇಕಬ್ ಮೆನ್ಸಿಕ್ ಅವರು ಮಿಯಾಮಿ ಓಪನ್ನ ಪುರುಷರ ಸಿಂಗಲ್ಸ್ ಫೈನಲ್ನಲ್ಲಿ ಅನುಭವಿ ಆಟಗಾರ ನೊವಾಕ್ ಜೊಕೊವಿಚ್ ಅವರನ್ನು ಮಣಿಸಿ ಪ್ರಶಸ್ತಿ ಗೆದ್ದುಕೊಂಡರು.* ಜೆಕ್ ರಿಪಬ್ಲಿಕ್ನ 19 ವರ್ಷ ವಯಸ್ಸಿನ ಜೇಕಬ್ 7-6 (4), 7-6 (4)ರಿಂದ ಸರ್ಬಿಯಾದ ಜೊಕೊವಿಚ್ ಅವರನ್ನು ಸೋಲಿಸಿದರು. 100ನೇ ಕಿರೀಟವನ್ನು ಮುಡಿಗೇರಿಸಿಕೊಳ್ಳುವ ತವಕದಲ್ಲಿದ್ದ ನಾಲ್ಕನೇ ಶ್ರೇಯಾಂಕದ ಜೊಕೊವಿಚ್ ಅವರಿಗೆ ನಿರಾಸೆಯಾಯಿತು.* ಅವರು 24 ಗ್ರಾನ್ಸ್ಲಾಮ್ ಸೇರಿದಂತೆ 99 ಪ್ರಶಸ್ತಿಗ-ಳನ್ನು ಈಗಾಗಲೇ ಗೆದ್ದಿದ್ದಾರೆ. ಪ್ರಶಸ್ತಿ ಗೆದ್ದ ಜೇಕಬ್ ಮೆನ್ಸಿಕ್ (ಬಲ) ಅವರನ್ನು ಅಭಿನಂದಿಸಿದ ಜೊಕೊವಿಚ್ ಇಲ್ಲಿ ಫೈನಲ್ ಪ್ರವೇಶಿಸುವ ಮೂಲಕ 37 ವರ್ಷ ವಯಸ್ಸಿನ ಜೊಕೊವಿಚ್ ಎ ಟಿಪಿ ಮಾಸ್ಟರ್ಸ್ 1000 ಫೈನಲ್ ತಲುಪಿದ ಅತ್ಯಂತ ಹಿರಿಯ ವಯಸ್ಸಿನ ಆಟಗಾರ ಎಂಬ ದಾಖಲೆಗೆ ಅವರು ಪಾತ್ರವಾಗಿದ್ದರು.* ಕಬ್ಬನ್ ಪಾರ್ಕ್ನಲ್ಲಿರುವ ಕೆಎಸ್ಎಲ್ಟಿಎ ಎಸ್.ಎಂ. ಕೃಷ್ಣ ಕ್ರೀಡಾಂಗಣದಲ್ಲಿ ಇದೇ 6ರವರೆಗೆ ನಡೆಯಲಿರುವ ಈ ಟೂರ್ನಿಯು ಒಟ್ಟು 25.67 ಲಕ್ಷ ಬಹುಮಾನ ಮೊತ್ತ ಒಳಗೊಂಡಿದೆ.