* ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಅವರು ಅಮೆರಿಕದಲ್ಲಿ ದಾಖಲೆ ರಹಿತವಾಗಿ ನೆಲೆಸಿರುವ ಭಾರತೀಯರನ್ನು ಕಾನೂನುಬದ್ಧವಾಗಿ ವಾಪಸ್ ಕರೆಸಿಕೊಳ್ಳಲು ಭಾರತ ಮುಕ್ತವಾಗಿದೆ ಎಂದು ಬುಧವಾರ(ಜ.22) ತಿಳಿಸಿದ್ದಾರೆ.* ನವದೆಹಲಿಯು ಅಮೆರಿಕದಿಂದ ಭಾರತಕ್ಕೆ ಗಡೀಪಾರು ಮಾಡಬಹುದಾದವರ ಸಂಖ್ಯೆಯನ್ನು ಪರಿಶೀಲಿಸುತ್ತಿದೆ ಎಂದು ಹೇಳಿದ್ದಾರೆ.* ಸರ್ಕಾರವು ಕಾನೂನು ಪಾಲನೆಯನ್ನು ಬೆಂಬಲಿಸಿ, ಭಾರತೀಯ ಪ್ರತಿಭಾವಂತರಿಗೆ ಜಾಗತಿಕ ಮಟ್ಟದಲ್ಲಿ ಹೆಚ್ಚಿನ ಅವಕಾಶಗಳನ್ನು ನೀಡಲು ಇಚ್ಛಿಸುವುದಾಗಿ ಹೇಳಿದ ಅವರು, ಅಕ್ರಮ ವಲಸೆಯನ್ನು ದೃಢವಾಗಿ ವಿರೋಧಿಸುತ್ತೇವೆ ಎಂದರು.* ಜೈಶಂಕರ್ ಅವರು ಅಮೆರಿಕದ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರಿಗೆ "ವೀಸಾ ಪಡೆಯಲು 400 ದಿನಗಳವರೆಗೆ ಕಾಯುವುದು ಸರಿಯಲ್ಲ. ಈ ಸಂಬಂಧ ಉತ್ತಮವಾಗಿದೆ ಎಂದು ಭಾವಿಸಲು ಆಗುವುದಿಲ್ಲ" ಎಂದು ಹೇಳಿದ್ದಾರೆ.