* ರಾಜ್ಯದಲ್ಲಿ ಎರಡನೇ ಬಾರಿಗೆ ನಡೆಯಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಈ ಬಾರಿ ವಿದ್ಯುತ್ ಮೀಟರ್ ಆಧರಿಸಿ ಮನೆಪಟ್ಟಿ ಸಿದ್ಧಪಡಿಸಿ, ಜಿಯೋ ಟ್ಯಾಗಿಂಗ್ ಮೂಲಕ ಮನೆ-ಮನೆಗೆ ತಲುಪುವ ಕ್ರಮ ಕೈಗೊಳ್ಳಲಾಗಿದೆ.* ಇದು ದೇಶದಲ್ಲೇ ಮೊದಲ ಪ್ರಯೋಗವಾಗಲಿದೆ. ರಾಜ್ಯದಲ್ಲಿ ಅಂದಾಜು 2 ಕೋಟಿ ಮನೆಗಳನ್ನು ಗುರುತಿಸಿ, ಸಮೀಕ್ಷೆಗೆ ಸ್ಟಿಕರ್ ಅಂಟಿಸುವ ಕಾರ್ಯ ನಡೆಯುತ್ತಿದೆ.* ಹಿಂದಿನ ಸಮೀಕ್ಷೆ ನಡೆದಿದ್ದು 10 ವರ್ಷಗಳ ಹಿಂದೆ. ಅದರಿಂದಾಗಿ ರಾಜ್ಯ ಸರ್ಕಾರವು ಈಗ ಹೊಸ ಸಮೀಕ್ಷೆ ನಡೆಸಲು ತೀರ್ಮಾನಿಸಿದೆ.* ಎಲ್ಲಾ ಜನರನ್ನು ವೈಜ್ಞಾನಿಕ ರೀತಿಯಲ್ಲಿ ಒಳಪಡಿಸಲು ಸುಧಾರಿತ ತಂತ್ರಜ್ಞಾನ ಬಳಸಲಾಗುತ್ತಿದೆ. ಸಮೀಕ್ಷೆಗೆ ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ (ಅ.10ರವರೆಗೆ ವಿಸ್ತರಣೆ ಸಾಧ್ಯ) ಅವಧಿ ನಿಗದಿಯಾಗಿದೆ.* 2011ರ ಜನಗಣತಿ ಪಟ್ಟಿ ಅಥವಾ ಮತದಾರರ ಪಟ್ಟಿಯ ಬದಲು, ಈ ಬಾರಿ ವಿದ್ಯುತ್ ಸಂಪರ್ಕವನ್ನು ಆಧಾರವನ್ನಾಗಿ ತೆಗೆದುಕೊಳ್ಳಲಾಗಿದೆ. ಏಕೆಂದರೆ ಕರ್ನಾಟಕದಲ್ಲಿ ಮನೆಗಳಿಗೆ ವಿದ್ಯುತ್ ಸಂಪರ್ಕ ಒದಗಿಸುವಲ್ಲಿ ದೇಶದಲ್ಲೇ ಪ್ರಥಮ ಸ್ಥಾನವಿದೆ.* ಪ್ರಶ್ನಾವಳಿ ಪಟ್ಟಿ ಸೆಪ್ಟೆಂಬರ್ 6ರೊಳಗೆ ಬಹುತೇಕ ಅಂತಿಮವಾಗಲಿದೆ. ಸಮೀಕ್ಷೆ ಸಮಯದಲ್ಲಿ ಸಾರ್ವಜನಿಕರು ತೋರಬೇಕಾದ ದಾಖಲೆ ವಿವರಗಳು ಶೀಘ್ರದಲ್ಲೇ ಪ್ರಕಟವಾಗಲಿವೆ. ಇದರಿಂದ ಸಮೀಕ್ಷಕರು ತಕ್ಷಣ ದತ್ತಾಂಶ ಸಂಗ್ರಹಿಸಲು ಅನುಕೂಲವಾಗಲಿದೆ.