* ಜಾತಿ ಆಧಾರಿತ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ ಸಮೀಕ್ಷೆಯ ವರದಿ ಸಂಪುಟ ಸಭೆಯಲ್ಲಿ ಮಂಡನೆ ಮಾಡಲಾಯಿತು * ವಿಸ್ತೃತ ಚರ್ಚೆಗೆ ಏಪ್ರಿಲ್ 17ರಂದು ವಿಶೇಷ ಸಂಪುಟ ಸಭೆ ಕರೆದಿರುವುದಾಗಿ ಹಿಂದುಳಿದ ವರ್ಗಗಳ ಸಚಿವ ಶಿವರಾಜ ತಂಗಡಗಿ ತಿಳಿಸಿದ್ದಾರೆ.* 6.35 ಕೋಟಿ ಗುರಿಯಲ್ಲಿ 5.98 ಕೋಟಿ ಜನರ (97.4%) ಮಾಹಿತಿ ಸಂಗ್ರಹ; 37 ಲಕ್ಷ ಜನ ಹೊರಬಿದ್ದಿದ್ದಾರೆ.* 1.35 ಕೋಟಿ ಕುಟುಂಬಗಳ ಸಮೀಕ್ಷೆ, 54 ಮಾನದಂಡದಡಿ ಪರಿಶೀಲನೆ.* ₹192 ಕೋಟಿ ವೆಚ್ಚದಲ್ಲಿ ಸಮೀಕ್ಷೆ; ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದಾರೆ.* ಎಲ್ಲ ಸಚಿವರಿಗೆ ವರದಿ ನೀಡಲಾಗಿದ್ದು, ಅಧ್ಯಯನ ಮಾಡಿ 17ರಂದು ಚರ್ಚೆಗೆ ಹಾಜರಾಗುವ ಸೂಚನೆ ನೀಡಲಾಗಿದೆ.* ಸಭೆಯಲ್ಲಿ ಯಾರೂ ಆಕ್ಷೇಪ ವ್ಯಕ್ತಪಡಿಸಲಿಲ್ಲ; ಕೆಲವು ಸಮುದಾಯದ ಸಚಿವರು ಸುಮ್ಮನೇ ಇದ್ದರು ಎಂದು ಮೂಲಗಳು ತಿಳಿಸಿವೆ.