* 16 ವರ್ಷದ ಒಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣಗಳ ಬಳಕೆಗೆ ನಿರ್ಬಂಧ ಹೇರಲು ಉದ್ದೇಶಿಸಿರುವ ಸರ್ಕಾರದ ಕ್ರಮಕ್ಕೆ ಅಸ್ಟ್ರೇಲಿಯಾದ ಎಲ್ಲ ರಾಜ್ಯಗಳು ಹಾಗೂ ಪ್ರಾಂತ್ಯಗಳು ಸರ್ವಾನುಮತದಿಂದ ಶುಕ್ರವಾರ (ನ.08) ಬೆಂಬಲ ಸೂಚಿಸಿವೆ.* ದೇಶದ ಎಂಟು ಪ್ರಾಂತ್ಯಗಳ ನಾಯಕರೊಂದಿಗೆ ಪ್ರಧಾನಿ ಆ್ಯಂಟೊನಿ ಅಲ್ಬನೀಸ್ ಅವರು ವಿಡಿಯೊ ಕಾನ್ಸರೆನ್ಸ್ ಮೂಲಕ ಮಾತುಕತೆ ನಡೆಸಿದರು. 'ಜಗತ್ತಿನ ಲ್ಲಿಯೇ ಮೊದಲ ಬಾರಿಗೆ ಇಂಥದ್ದೊಂದು ಕ್ರಮವನ್ನುಆಸ್ಟ್ರೇಲಿಯಾ ಸರ್ಕಾರ ಕೈಗೊಳ್ಳಲು ಸಿದ್ಧವಾಗಿದೆ' ಎಂದು ಪ್ರಧಾನಿ ಅಂಟೊನಿ . * ವಯೋಮಿತಿಯನ್ನು 14 ಅಥವಾ 16ಕ್ಕೆ ನಿಗದಿಪಡಿಸುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ಚರ್ಚೆ ನಡೆದಾಗ ತಸ್ಮಾನಿಯಾ ರಾಜ್ಯವು ವಯೋಮಿತಿಯನ್ನು 14ಕ್ಕೆ ನಿಗದಿಪಡಿಸಿ ಎಂಬ ಸಲಹೆ ನೀಡಿತ್ತು. ಆದರೆ, ದೇಶದಲ್ಲಿ ಒಂದೇ ರೀತಿಯ ಕಾನೂನು ಜಾರಿಯಾಗಬೇಕು ಎನ್ನುವ ಉದ್ದೇಶದಿಂದ ಈ ಸಲಹೆಯನ್ನು ನಿರಾಕರಿಸಲಾಗಿತ್ತು.* ಆಸ್ಟ್ರೇಲಿಯಾದ ಮುಖ್ಯ ವಿರೋಧ ಪಕ್ಷವು ಈಗಾಗಲೇ ಈ ಕ್ರಮವನ್ನು ಬೆಂಬಲಿಸಿದೆ. ಆದರೆ, ಗ್ರೀನ್ಸ್ ಪಕ್ಷ ಮಾತ್ರ ಇದನ್ನು ವಿರೋಧಿಸಿದೆ. 'ಇಂಥ ಕ್ರಮಗಳಿಂದ ಸ್ವೀಡನ್‌ನ ಪರಿಸರ ಕಾರ್ಯಕರ್ತೆ ಗ್ರೇಟಾ ಥನ್‌ಬರ್ಗ್ ಅಂತಹವರು ನಮ್ಮ ನೆಲದಲ್ಲಿ ಹುಟ್ಟುವುದಕ್ಕೇ ಸಾಧ್ಯವಿಲ್ಲ' ಎಂದು ಅಭಿಪ್ರಾಯಪಟ್ಟಿದೆ.* ಮಾನಸಿಕ ಆರೋಗ್ಯ ವೈದ್ಯರು, ತಜ್ಞರು ಕೂಡ ಈ ಕ್ರಮವನ್ನು ವಿರೋಧಿಸಿದ್ದಾರೆ. ಆದರೆ, ಪ್ರಮುಖ ವಿರೋಧ ಪಕ್ಷವು ಈ ಕ್ರಮವನ್ನು ಬೆಂಬಲಿಸಿರುವುದರಿಂದ ಸಂಸತ್ತಿನಲ್ಲಿ ಈ ಕುರಿತ ಮಸೂದೆಯು ಸುಲಭವಾಗಿ ಪಾಸಾಗಲಿದೆ ಎನ್ನಲಾಗುತ್ತಿದೆ.