* ಟ್ವಿಟರ್ ಸಹಸಂಸ್ಥಾಪಕ ಜಾಕ್ ಡೋರ್ಸಿ ಹೊಸ ಮೆಸೇಜಿಂಗ್ ಆ್ಯಪ್ ‘ಬಿಟ್ಚ್ಯಾಟ್’ ಅನ್ನು ಅಭಿವೃದ್ಧಿಪಡಿಸಿದ್ದಾರೆ. ಅವರು ಇದೀಗ ಬ್ಲಾಕ್ ಕಂಪನಿಯ ಸಿಇಒ ಕೂಡಾ ಆಗಿದ್ದಾರೆ.* ಈ ಆ್ಯಪ್ ಇಂಟರ್ನೆಟ್, ವೈಫೈ, ಸರ್ವರ್, ಫೋನ್ ನಂಬರ್ ಅಥವಾ ಇಮೇಲ್ ಇಲ್ಲದೆಯೇ ಕಾರ್ಯನಿರ್ವಹಿಸುತ್ತದೆ. ಕೇವಲ ಬ್ಲೂಟೂಥ್ನ ಆಧಾರದಲ್ಲಿ ಬಳಕೆದಾರರು ಪರಸ್ಪರ ಸಂದೇಶಗಳನ್ನು ವಿನಿಮಯ ಮಾಡಿಕೊಳ್ಳಬಹುದು.* ಸಾಮಾನ್ಯವಾಗಿ ಬ್ಲೂಟೂಥ್ನಿಂದ ಸಮೀಪದ ಸಾಧನಗಳೊಂದಿಗೆ ಮಾತ್ರ ಸಂಪರ್ಕ ಸಾಧ್ಯವಾದರೂ, ಈ ಆ್ಯಪ್ ದೂರದಲ್ಲಿರುವ ಸಾಧನಗಳಿಗೂ ಸಂಪರ್ಕ ಸಾಧಿಸಿ ಸಂದೇಶ ಕಳಿಸಲು ಸಹಾಯ ಮಾಡುತ್ತದೆ.* ಇದು ಇಂಟರ್ನೆಟ್ ಇಲ್ಲದ ಪರಿಸ್ಥಿತಿಗಳಲ್ಲಿ ಕೂಡ ಸಂಪರ್ಕ ಸಾಧಿಸಲು ಉಪಯುಕ್ತವಾಗಬಹುದು. ಮುಂದಿನ ಹಂತದಲ್ಲಿ ವೈಫೈ ಆಧಾರಿತ ವೇಗದ ಮೆಸೇಜಿಂಗ್ ಅಭಿವೃದ್ಧಿಯ ಮೇಲೂ ಕೆಲಸ ನಡೆಯುತ್ತಿದೆ.