Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಜಾಗತಿಕ ವೇದಿಕೆಯಲ್ಲಿ ಆಕಾಶ ಏರ್: IATA ಸದಸ್ಯತ್ವ ಪಡೆದ ಭಾರತದ ಐದನೇ ವಿಮಾನಯಾನ
Authored by:
Akshata Halli
Date:
12 ಜನವರಿ 2026
➤
ಭಾರತದ ಅತ್ಯಂತ ಯುವ ವಿಮಾನಯಾನ ಸಂಸ್ಥೆಯಾದ
ಆಕಾಶ ಏರ್ (Akasa Air)
ಅಂತರರಾಷ್ಟ್ರೀಯ ವಿಮಾನ ಸಾರಿಗೆ ಸಂಸ್ಥೆ
(International Air Transport Association – IATA)
ಯ ಅಧಿಕೃತ ಸದಸ್ಯತ್ವವನ್ನು ಪಡೆದಿದೆ. ಇದರಿಂದ ಆಕಾಶ ಏರ್, IATAಗೆ ಸೇರ್ಪಡೆಗೊಂಡ ಭಾರತದ
ಐದನೇ ವಿಮಾನಯಾನ ಸಂಸ್ಥೆ
ಎಂಬ ಗೌರವಕ್ಕೆ ಪಾತ್ರವಾಗಿದೆ.
➤ IATA (IATA Operational Safety Audit)
ಜಾಗತಿಕ ಮಟ್ಟದಲ್ಲಿ 360ಕ್ಕೂ ಹೆಚ್ಚು ವಿಮಾನಯಾನ ಸಂಸ್ಥೆಗಳನ್ನು ಪ್ರತಿನಿಧಿಸುವ ಪ್ರಮುಖ ಸಂಸ್ಥೆಯಾಗಿದ್ದು, ಜಗತ್ತಿನ 80% ಕ್ಕೂ ಹೆಚ್ಚು ವಿಮಾನ ಸಂಚಾರವನ್ನು ನಿರ್ವಹಿಸುತ್ತದೆ. ಆಕಾಶ ಏರ್ ಈ ಸದಸ್ಯತ್ವ ಪಡೆಯಲು ಅಗತ್ಯವಿರುವ
IOSA (IATA Operational Safety Audit)
ಸುರಕ್ಷತಾ ಪರಿಶೀಲನೆಯನ್ನು 2025ರ ಡಿಸೆಂಬರ್ನಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಇದು ವಿಮಾನಯಾನದ ಜಾಗತಿಕ ಸುರಕ್ಷತಾ ಮಾನದಂಡಗಳಿಗೆ ಅನುಗುಣವಾಗಿದೆ ಎಂಬುದನ್ನು ಸೂಚಿಸುತ್ತದೆ.
➤
ಆಕಾಶ ಏರ್ ಅನ್ನು
ವಿನಯ್ ದುಬೆ
ಸ್ಥಾಪಿಸಿದ್ದು, ಖ್ಯಾತ ಹೂಡಿಕೆದಾರ ದಿವಂಗತ
ರಾಕೇಶ್ ಝುಂಜುನ್ವಾಲಾ
ಅವರು ಸುಮಾರು 40% ಹೂಡಿಕೆಗೆ 35 ಮಿಲಿಯನ್ ಡಾಲರ್ ಹೂಡಿಕೆ ಮಾಡಿದ್ದರು. ಸಂಸ್ಥೆಯ ಮೊದಲ ವಾಣಿಜ್ಯ ವಿಮಾನಯಾನ ಸೇವೆ
ಆಗಸ್ಟ್ 7, 2022
ರಂದು ಆರಂಭವಾಯಿತು.ಇಂದಿನವರೆಗೆ ಆಕಾಶ ಏರ್
23 ಮಿಲಿಯನ್ಕ್ಕೂ ಹೆಚ್ಚು ಪ್ರಯಾಣಿಕರಿಗೆ
ಸೇವೆ ಒದಗಿಸಿದ್ದು, ಭಾರತದಲ್ಲಿನ
26 ದೇಶೀಯ ಮತ್ತು 6 ಅಂತರರಾಷ್ಟ್ರೀಯ ನಗರಗಳಿಗೆ
ಸಂಪರ್ಕ ಕಲ್ಪಿಸಿದೆ.
➤ IATA ಸದಸ್ಯತ್ವದಿಂದ ಆಕಾಶ ಏರ್ಗೆ:
=> ಜಾಗತಿಕ ವಿಮಾನಯಾನ ಚರ್ಚೆಗಳಲ್ಲಿ ಭಾಗವಹಿಸುವ ಅವಕಾಶ
=> ವಿಮಾನಯಾನ ಕ್ಷೇತ್ರದ ಉತ್ತಮ ಕಾರ್ಯಪದ್ಧತಿಗಳ ರೂಪುಗೊಳಿಸುವಿಕೆಯಲ್ಲಿ ಪಾಲ್ಗೊಳ್ಳುವಿಕೆ
=> ಸುರಕ್ಷತೆ, ಡಿಜಿಟಲ್ ಬೆಳವಣಿಗೆ ಮತ್ತು ಸಸ್ಥಿರ ವಿಮಾನಯಾನದ ಅಭಿವೃದ್ಧಿ
=> ಜಾಗತಿಕ ಮಟ್ಟದಲ್ಲಿ ಸಂಸ್ಥೆಯ ನಂಬಿಕೆ ಮತ್ತು ಗೌರವ ಹೆಚ್ಚಳ
IATA ಏಷ್ಯಾ-ಪೆಸಿಫಿಕ್ ಉಪಾಧ್ಯಕ್ಷ
ಶೆಲ್ಡನ್ ಹೀ
ಅವರು, ಭಾರತದ ವಿಮಾನಯಾನ ಕ್ಷೇತ್ರವು
77 ಲಕ್ಷ ಉದ್ಯೋಗಗಳನ್ನು
ಬೆಂಬಲಿಸುತ್ತಿದ್ದು,
53.6 ಬಿಲಿಯನ್ ಡಾಲರ್
ಆರ್ಥಿಕ ಕೊಡುಗೆ ನೀಡುತ್ತಿದೆ ಎಂದು ಹೇಳಿದ್ದಾರೆ.
➤ ಭಾರತೀಯ ವಿಮಾನಯಾನ ಸಂಸ್ಥೆಗಳು:
ಆಕಾಶ ಏರ್ ಸೇರ್ಪಡೆಯೊಂದಿಗೆ, IATA ಸದಸ್ಯತ್ವ ಹೊಂದಿರುವ ಭಾರತೀಯ ವಿಮಾನಯಾನ ಸಂಸ್ಥೆಗಳು:
1.
ಏರ್ ಇಂಡಿಯಾ
2.
ಏರ್ ಇಂಡಿಯಾ ಎಕ್ಸ್ಪ್ರೆಸ್
3.
ಇಂಡಿಗೋ
4.
ಆಕಾಶ ಏರ್
5.
ಸ್ಪೈಸ್ಜೆಟ್
➤
ಭವಿಷ್ಯದ ಯೋಜನೆಗಳು:
ಆಕಾಶ ಏರ್ 2030ರೊಳಗೆ
ಜಗತ್ತಿನ ಟಾಪ್ 30 ವಿಮಾನಯಾನ ಸಂಸ್ಥೆಗಳಲ್ಲಿ ಒಂದಾಗುವ
ಗುರಿ ಹೊಂದಿದೆ. ಮುಂದಿನ 10 ವರ್ಷಗಳಲ್ಲಿ
226 ಬೋಯಿಂಗ್ 737 MAX ವಿಮಾನಗಳನ್ನು
ಕಾರ್ಯಾಚರಣೆಗೆ ತರಲು ಯೋಜಿಸಿದೆ. ಪ್ರಸ್ತುತ ಸಂಸ್ಥೆಯ ಬಳಿ
31 ವಿಮಾನಗಳಿದ್ದು
, ಈ ವರ್ಷ ಅಂತ್ಯದೊಳಗೆ 35ಕ್ಕೆ ಏರಿಸಲು ಉದ್ದೇಶಿಸಿದೆ. FY26ರಲ್ಲಿ ಸಂಸ್ಥೆಯ ಸಾಮರ್ಥ್ಯವು
30% ಕ್ಕಿಂತ ಹೆಚ್ಚು
ವೃದ್ಧಿಯಾಗುವ ನಿರೀಕ್ಷೆಯಿದೆ. ಅಲ್ಲದೇ, ಪೈಲಟ್ಗಳ ಸಂಖ್ಯೆ
770–775
ಕ್ಕೆ ಏರಲಿದೆ.
➤
FY25ರಲ್ಲಿ ಆಕಾಶ ಏರ್ ಆರ್ಥಿಕ ಸಾಧನೆ:
- ಆದಾಯದಲ್ಲಿ
49% ಬೆಳವಣಿಗೆ
- EBITDA ಮಾರುಜಿನ್ನಲ್ಲಿ
50% ಸುಧಾರಣೆ
- ಲೋಡ್ ಫ್ಯಾಕ್ಟರ್
87% ಮೀರಿದೆ
- ಸಾಮರ್ಥ್ಯದಲ್ಲಿ
48% ಏರಿಕೆ
- ಇಂಧನವಲ್ಲದ ಆಸನ ವೆಚ್ಚದಲ್ಲಿ
7% ಇಳಿಕೆ
ಇವು ಸಂಸ್ಥೆಯ ಪರಿಣಾಮಕಾರಿ ವೆಚ್ಚ ನಿರ್ವಹಣೆ ಮತ್ತು ವೇಗದ ಬೆಳವಣಿಗೆಯನ್ನು ತೋರಿಸುತ್ತವೆ.
➤ ಕಾರ್ಗೋ ಮತ್ತು ಹೆಚ್ಚುವರಿ ಸೇವೆಗಳು:
ಆಕಾಶ ಏರ್ ಪ್ರಯಾಣಿಕ ಸೇವೆಗಳ ಹೊರತಾಗಿ
25ಕ್ಕೂ ಹೆಚ್ಚು ಹೆಚ್ಚುವರಿ ಸೇವೆಗಳನ್ನು
ಒದಗಿಸುತ್ತಿದೆ. 2025ರ ಮಾರ್ಚ್ ವೇಳೆಗೆ ಸಂಸ್ಥೆ ಸುಮಾರು
1 ಲಕ್ಷ ಟನ್ ಕಾರ್ಗೋ
ಸಾಗಣೆ ಮಾಡಿದ್ದು, ಭಾರತದ ವಿಮಾನ ಕಾರ್ಗೋ ಕ್ಷೇತ್ರದಲ್ಲಿ ಪ್ರಮುಖ ಸ್ಥಾನ ಪಡೆದಿದೆ. 1,150ಕ್ಕೂ ಹೆಚ್ಚು ಕಾರ್ಪೊರೇಟ್ ಪಾಲುದಾರರೊಂದಿಗೆ ಸಹಕಾರ ಹೊಂದಿದ್ದು, ದೀರ್ಘಕಾಲಿಕ ಸ್ಥಿರತೆಗೆ ಹೊಸ ಹೂಡಿಕೆಗಳನ್ನು ಸಹ ಪಡೆದಿದೆ.
Take Quiz
Loading...