* ಜಾಗತಿಕ ಟಿಬಿ ವರದಿ 2023 ವರದಿ ಪ್ರಕಾರ 2022 ರಲ್ಲಿ ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಕ್ಷಯರೋಗ ಪ್ರಕರಣಗಳನ್ನು ಹೊಂದಿತ್ತು ಎಂದು ವಿಶ್ವ  ಆರೋಗ್ಯ ಸಂಸ್ಥೆಯ ಹೇಳುತ್ತದೆ* ವಿಶ್ವದ ಒಟ್ಟು ಟಿಬಿ ಪ್ರಕರಣಗಳಲ್ಲಿ ಭಾರತದಲ್ಲಿ ಶೇಕಡಾ 27 ರಷ್ಟು ಪ್ರಕರಣಗಳಿವೆ. 28.2 ಲಕ್ಷ ಪ್ರಕರಣಗಳಿದ್ದು, ಅವುಗಳಲ್ಲಿ ಶೇ 12ರಷ್ಟು (3,42,000 ಜನರು) ಈ ಕಾಯಿಲೆಯಿಂದ ಸಾವಿಗೀಡಾಗಿದ್ದಾರೆ. 30 ರಾಷ್ಟ್ರಗಳು ವಿಶ್ವದ ಶೇ.87 ರಷ್ಟು ಟಿಬಿ ಪ್ರಕರಣಗಳಿಗೆವೆಂದು ವರದಿ ಬಹಿರಂಗಪಡಿಸಿದೆ. ಇಂಡೋನೇಷ್ಯಾ (ಶೇ 10), ಚೀನಾ (ಶೇ 7.1), ಫಿಲಿಪೈನ್ಸ್ (ಶೇ 7.0), ಪಾಕಿಸ್ತಾನ (ಶೇ 5.7), ನೈಜೀರಿಯಾ (ಶೇ 4.5), ಬಾಂಗ್ಲಾದೇಶ (ಶೇ 3.6), ಮತ್ತು ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ (ಶೇ 3.0) ನಂತರದ ಸ್ಥಾನದಲ್ಲಿದೆ.* ಪ್ರಕರಣಗಳ ಸಂಖ್ಯೆಯನ್ನು ಕಡಿಮೆ ಮಾಡುವಲ್ಲಿ ಭಾರತವು ಪ್ರಗತಿ ಸಾಧಿಸಿದೆ ಎಂದು ವರದಿ ತೋರಿಸುತ್ತದೆ. 2015 ರಲ್ಲಿ 1,00,000 ಜನರ ಪೈಕಿ 258 ರೋಗಿಗಳಿದ್ದರೆ, 2022 ರಲ್ಲಿ 1,00,000 ಜನರಿಗೆ 199 ಕ್ಕೆ ರೋಗ ಪ್ರಕರಣಗಳಿವೆ. ಆದರೆ ದರವು ಇನ್ನೂ ಜಾಗತಿಕ ಸರಾಸರಿ 100,000 ಕ್ಕೆ 133 ಕ್ಕಿಂತ ಹೆಚ್ಚಾಗಿದೆ.