* ಜಗತ್ತಿನಲ್ಲಿ ಅತಿ ಹೆಚ್ಚು ಸೈಬರ್ ದಾಳಿಗೆ ಬಗುರಿಯಾದ ರಾಷ್ಟ್ರಗಳ ಪೈಕಿ ಭಾರತ 2ನೇ ಸ್ಥಾನದಲ್ಲಿದೆ. 2024ರಲ್ಲಿ ದೇಶದ ಒಟ್ಟು 95 ಪ್ರಮುಖ ಕೇಂದ್ರಗಳ ಮೇಲೆ ದಾಳಿ ನಡೆಸಿ ಮಾಹಿತಿ ಕದಿಯುವ ಪ್ರಯತ್ನಗಳು ನಡೆದಿವೆ ಎಂದು ಸೈಬರ್ ಗುಪ್ತಚರ ಸಂಸ್ಥೆ 'ಕ್ಲೌಡ್ಸೆಕ್ನ ಥ್ರೆಟ್ಲ್ಯಾಂಡ್ಸ್ಕೇಪ್' ತನ್ನ ವರದಿಯಲ್ಲಿ ಹೇಳಿದೆ. * ಡಾರ್ಕ್ ವೆಬ್ ಮಾಹಿತಿ ಆಧರಿಸಿ ಕಂಪನಿ ಹೊರತಂದಿರುವ ವರದಿಯಲ್ಲಿ ಈ ದೇಶದ ಒಟ್ಟು 95 ಪ್ರಮುಖ ಕೇಂದ್ರಗಳ ಮೇಲೆ ದಾಳಿ ನಡೆಸಿ ಮಾಹಿತಿ ಬಯಲಾಗಿದೆ.* 140 ಸೈಬರ್ ದಾಳಿಗಳಿಗೆ ತುತ್ತಾಗಿರುವ ಅಮೆರಿಕ ಜಗತ್ತಿನಲ್ಲಿ ಅತಿ ಹೆಚ್ಚು ಸೈಬರ್ ದಾಳಿಗೆ ಒಳಗಾಗಿರುವ ರಾಷ್ಟ್ರಗಳ ಪೈಕಿ ಮೊದಲ ಸ್ಥಾನದಲ್ಲಿದೆ. * 57 ಸೈಬರ್ ದಾಳಿಗೆ ತುತ್ತಾದ ಇಸ್ರೇಲ್ ಮೂರನೇ ಸ್ಥಾನದಲ್ಲಿದೆ.* ಸೈಬರ್ ದಾಳಿಕೋರರು ಭಾರತದ ಹಣಕಾಸು, ಬ್ಯಾಂಕಿಂಗ್ ಕ್ಷೇತ್ರವನ್ನು ಹೆಚ್ಚು ಗುರಿಯಾಗಿಸಿದ್ದಾರೆ. ಭಾರತದಲ್ಲಿ ನಡೆದ ಒಟ್ಟು 95 ದಾಳಿಗಳಲ್ಲಿ ಈ ಎರಡು ಕ್ಷೇತ್ರಗಳ ಮೇಲೆ ನಡೆದ ದಾಳಿಯ ಸಂಖ್ಯೆ 20ರಷ್ಟಿದೆ. * ಸೈಬರ್ ದಾಳಿ ನಡೆಸುವ ಹೈಟೆಕ್ ಗುಂಪು ಭಾರತದ ನಾಗರಿಕರಿಗೆ ಸಂಬಂಧಿಸಿದ ಸುಮಾರು 85 ಕೋಟಿ ರೂ. ಮೊತ್ತದ ದಾಖಲೆಯನ್ನು ದೋಚಿದೆ.