Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಜಾಗತಿಕ ಪರಿಸರ ಸೌಂದರ್ಯ ಸ್ಪರ್ಧೆಯಲ್ಲಿ ನಟಾಲಿಗೆ ಕಿರೀಟ
7 ನವೆಂಬರ್ 2025
* ಫಿಲಿಪೈನ್ಸ್ನ ರಾಜಧಾನಿಯಾದ
ಮನಿಲಾದಲ್ಲಿ
ಅತ್ಯಂತ ಅದ್ಧೂರಿಯಾಗಿ ನಡೆದ ಮಿಸ್ ಅರ್ಥ್ (Miss Earth) 2025 ಅಂತರರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯಲ್ಲಿ ಈ ಬಾರಿ ಚೆಕ್ ರಿಪಬ್ಲಿಕ್ ರಾಷ್ಟ್ರದ ಸ್ಪರ್ಧಿ
ನಟಾಲಿ (Natalie)
ಅವರು ಪ್ರಶಸ್ತಿಯನ್ನು ಗೆದ್ದಿದ್ದಾರೆ. ಜಗತ್ತಿನ ಅನೇಕ ರಾಷ್ಟ್ರಗಳಿಂದ ಭಾಗವಹಿಸಿರುವ ಸ್ಪರ್ಧಿಗಳಿಗೆ ಹೊರತಾಗಿ, ನಟಾಲಿ ಅವರು ತಮ್ಮ ಪ್ರತಿಭೆ, ಸೌಂದರ್ಯ, ಸಾಮಾಜಿಕ ಹೊಣೆಗಾರಿಕೆ ಮತ್ತು ಪರಿಸರ ಸಂರಕ್ಷಣೆಯ ಕುರಿತು ನೀಡಿದ ಸಂದೇಶಗಳ ಮೂಲಕ ತೀರ್ಪುಗಾರರ ಮನಸ್ಸನ್ನು ಗೆದ್ದುಕೊಂಡಿದ್ದಾರೆ.
* ಈ ಸ್ಪರ್ಧೆಯನ್ನು
ನವೆಂಬರ್ 1 ರಿಂದ 2 ರವರೆಗೆ
ಯಶಸ್ವಿಯಾಗಿ ಆಯೋಜಿಸಲಾಗಿತ್ತು. ಮಿಸ್ ಅರ್ಥ್ ಸ್ಪರ್ಧೆಯು ಸಾಮಾನ್ಯ ಸೌಂದರ್ಯ ಸ್ಪರ್ಧೆಯಷ್ಟೇ ಅಲ್ಲ; ಇದು ಪರಿಸರ ಸಂರಕ್ಷಣೆ, ಹಸಿರು ಅಭಿಯಾನಗಳು, ಜಾಗತಿಕ ತಾಪಮಾನ ಏರಿಕೆ, ಪರಿಸರ ಸಮತೋಲನ ಹಾಗೂ ಸಹಜ ಸಂಪನ್ಮೂಲಗಳ ರಕ್ಷಣೆಗೆ ಒತ್ತು ನೀಡುವ ವಿಶಿಷ್ಟ ವೇದಿಕೆ ಎಂದು ಪರಿಗಣಿಸಲಾಗಿದೆ.
* ಸ್ಪರ್ಧೆಯಲ್ಲಿ ನಾಲ್ಕು ಪ್ರಮುಖ ಅಂಶಗಳಿಗೆ (Elements) ಸಂಬಂಧಿಸಿದ ವಿಶೇಷ ಪ್ರಶಸ್ತಿಗಳನ್ನೂ ನೀಡಲಾಗುತ್ತದೆ. ಅವುಗಳು ಪ್ರಕೃತಿಯ ಗಾಳಿ, ನೀರು, ಬೆಂಕಿ ಮತ್ತು ಭೂಮಿ ಎಂಬ ಸಂಜ್ಞೆಗಳ ಸಂಕೇತ:
# ಮಿಸ್ ಅರ್ಥ್ 2025 (Miss Earth):
ನಟಾಲಿ (
ದೇಶ
ಚೆಕ್ ರಿಪಬ್ಲಿಕ್)
#
ಮಿಸ್ ಅರ್ಥ್ ಏರ್ (Miss Earth Air):
ಸಾಲ್ಗೆ(
ದೇಶ
ಐಸ್ಲ್ಯಾಂಡ್)
#
ಮಿಸ್ ಅರ್ಥ್ ವಾಟರ್ (Miss Earth Water):
ಮು ಅನ್ ಟ್ರನ್(
ದೇಶ
ವಿಯೆಟ್ನಾಂ)
#
ಮಿಸ್ ಅರ್ಥ್ ಫೈರ್ (Miss Earth Fire):
ವಾರಿ ಇಂಗುನಿಯಾ(
ದೇಶ
ಫಿಲಿಪೈನ್ಸ್)
* ಈ ಸ್ಪರ್ಧೆಯ ಪ್ರಮುಖ ಉದ್ದೇಶ ಜಾಗತಿಕ ನಾಗರಿಕರಲ್ಲಿ ಪರಿಸರ ಸಂರಕ್ಷಣೆ, ಪ್ಲಾಸ್ಟಿಕ್ ಮಾಲಿನ್ಯ ನಿರ್ವಹಣೆ, ಅರಣ್ಯ ಸಂರಕ್ಷಣೆ, ಗ್ಲೋಬಲ್ ವಾರ್ಮಿಂಗ್ ವಿರುದ್ಧ ಹೋರಾಟ,ಪರಿಸರ ಶಿಕ್ಷಣಕ್ಕೆ ಉತ್ತೇಜನ.ಹೀಗೆ ವಿವಿಧ ಹಸಿರು ಅಭಿಯಾನಗಳನ್ನು ಹರಡಿಸುವುದಾಗಿ ಸ್ಪರ್ಧೆಯ ಪ್ರಮುಖ ಉದ್ದೇಶವಾಗಿದೆ.
* ಮಿಸ್ ಅರ್ಥ್ ಸ್ಪರ್ಧೆಯನ್ನು “ಪರಿಸರ ರಾಜತಾಂತ್ರಿಕ ಸುಂದರ ಸ್ಪರ್ಧೆ” ಎಂದೇ ಕರೆಯಲಾಗುತ್ತದೆ. ಸ್ಪರ್ಧೆಯ ವಿಜೇತೆಯರು ಮುಂದಿನ ವರ್ಷ ಪೂರ್ತಿ ಪರಿಸರ ದೂತರಾಗಿ ವಿಶ್ವದಾದ್ಯಂತ ಜಾಗೃತಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ.
* ಚೆಕ್ ರಿಪಬ್ಲಿಕ್ನ ನಟಾಲಿ ಅವರ ಸೌಂದರ್ಯ, ಬುದ್ಧಿವಂತಿಕೆ, ಪರಿಸರದ ಮೇಲಿನ ಕಾಳಜಿ ಮತ್ತು ಮಾನವೀಯ ದೃಷ್ಟಿಕೋನವು ಅವರಿಗೆ ಜಾಗತಿಕ ವೇದಿಕೆಯಲ್ಲಿ ಕಿರೀಟವನ್ನು ತಂದಿದೆ. ಪರಿಸರದ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಮಿಸ್ ಅರ್ಥ್ ಸ್ಪರ್ಧೆ ವಿಶಿಷ್ಟ ಸ್ಥಾನವನ್ನು ಹೊಂದಿದ್ದು, ಮುಂದಿನ ಪೀಳಿಗೆಗೆ ಹಸಿರು ಬದುಕಿನ ನಿಲುವನ್ನು ಕಟ್ಟಿಕೊಡುತ್ತದೆ.
Take Quiz
Loading...