* ಜಾಗತಿಕ ನವೋದ್ಯಮ ಪರಿಸರ ವ್ಯವಸ್ಥೆ ಸೂಚ್ಯಂಕ (GSER) ವರದಿಯಲ್ಲಿ ಬೆಂಗಳೂರು ಮಹಾನಗರವು ತನ್ನ ಸ್ಥಾನವನ್ನು 21ರಿಂದ 14ಕ್ಕೆ ಹೆಚ್ಚಿಸಿಕೊಂಡಿದೆ.* ಈ ಸಾಧನೆಯ ಮಾಹಿತಿಯನ್ನು ಪ್ಯಾರಿಸ್ನಲ್ಲಿ ನಡೆಯುತ್ತಿರುವ ವಿವಾ ಟೆಕ್ನಾಲಜಿ (ವಿವಾಟೆಕ್) ಸಮಾವೇಶದಲ್ಲಿ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹಂಚಿಕೊಂಡಿದ್ದಾರೆ. ಅವರು ಈ ಸಮಾವೇಶದಲ್ಲಿ ಭಾರತವನ್ನು ಪ್ರತಿನಿಧಿಸುತ್ತಿದ್ದಾರೆ.* ಬುದ್ಧಿಮತ್ತೆಯ ಶಕ್ತಿ ಆಧರಿಸಿ ಈ ರ್ಯಾಂಕಿಂಗ್ ನೀಡಲಾಗುತ್ತದೆ. ಬೆಂಗಳೂರು ನವೋದ್ಯಮ ಕ್ಷೇತ್ರದಲ್ಲಿ ಉನ್ನತ ಮಟ್ಟದ ಬೆಳವಣಿಗೆ ಸಾಧಿಸಿರುವುದರಿಂದ ‘ಉದಯೋನ್ಮುಖ ತಾರೆ’ ಆಗಿ ಗುರುತಿಸಲಾಗಿದೆ.* ಪ್ಯಾರಿಸ್ (12), ಫಿಲಡಲ್ಫಿಯಾ (13) ಮತ್ತು ಸಿಯಾಟೆಲ್ (15) ನಗರಗಳ ಜೊತೆ ಸಮಾನ ಮಟ್ಟದಲ್ಲಿ ಬೆಂಗಳೂರು ಸ್ಪರ್ಧಿಸುತ್ತಿದೆ.* ಇದೇ ವೇಳೆ ಡೀಪ್ ಟೆಕ್ ಮತ್ತು ಎಐ ಕ್ಷೇತ್ರದಲ್ಲಿಯೂ ಬೆಂಗಳೂರು ಉನ್ನತ ಸಾಧನೆ ಮಾಡಿದ್ದು, ಕೃತಕ ಬುದ್ಧಿಮತ್ತೆ ಮತ್ತು ಬಿಗ್ ಡೇಟಾ ವಿಭಾಗದಲ್ಲಿ 5ನೇ ಸ್ಥಾನ ಪಡೆದಿದೆ.