* 2025 ರ ಜಾಗತಿಕ ನಾವೀನ್ಯತೆ ಸೂಚ್ಯಂಕದಲ್ಲಿ (GII) ಭಾರತವು ಜಾಗತಿಕವಾಗಿ 38ನೇ ಸ್ಥಾನ ಪಡೆದುಕೊಂಡಿದೆ. 2020 ರಲ್ಲಿ 48 ನೇ ಸ್ಥಾನದಿಂದ ಇದು ನಿರಂತರ ಸುಧಾರಣೆ ಕಂಡಿದೆ.* ಕಡಿಮೆ-ಮಧ್ಯಮ ಆದಾಯದ ಆರ್ಥಿಕತೆಗಳಲ್ಲಿ ಮತ್ತು ದಕ್ಷಿಣ-ಮಧ್ಯ ಏಷ್ಯಾ ಪ್ರದೇಶದಲ್ಲಿ ಭಾರತ 1ನೇ ಸ್ಥಾನದಲ್ಲಿದೆ. ಜಾಗತಿಕವಾಗಿ ಸ್ವಿಟ್ಜರ್ಲೆಂಡ್, ಸ್ವೀಡನ್ ಮತ್ತು ಅಮೆರಿಕಾ ಮೊದಲ ಮೂರು ಸ್ಥಾನಗಳಲ್ಲಿ ಇದ್ದರೆ, ಚೀನಾ 10ನೇ ಸ್ಥಾನದಲ್ಲಿದೆ.* ವಿಶ್ವ ಬೌದ್ಧಿಕ ಸ್ವತ್ತು ಸಂಸ್ಥೆ (WIPO) ಪ್ರಕಟಿಸಿದ ಈ ವರದಿ 139 ದೇಶಗಳು ಮತ್ತು ಅಗ್ರ 100 ನಾವೀನ್ಯತೆ ಗುಂಪುಗಳ ವಿಶ್ಲೇಷಣೆಯನ್ನು ಒಳಗೊಂಡಿದೆ.* ದಶಕದಷ್ಟು ವೇಗದ R&D ವೆಚ್ಚ ಮತ್ತು ವೆಂಚರ್ ಕ್ಯಾಪಿಟಲ್ ಹೂಡಿಕೆಗಳ ಬೆಳವಣಿಗೆಯ ನಂತರ, ಪ್ರಸ್ತುತ ಜಾಗತಿಕವಾಗಿ ಬೆಳವಣಿಗೆ ಮಂದಗತಿಯಾಗಿರುವ ಹಂತದಲ್ಲಿ ಇದು ಬಿಡುಗಡೆಯಾಗಿದೆ.* ಮಧ್ಯಮ ಆದಾಯದ ಆರ್ಥಿಕ ವ್ಯವಸ್ಥೆಗಳು ಆವಿಷ್ಕಾರದಲ್ಲಿ ಬಲವಾಗಿ ಹೊರಹೊಮ್ಮುತ್ತಿವೆ. ಚೀನಾ, ಭಾರತ, ಟರ್ಕಿಯೆ, ವಿಯೆಟ್ನಾಂ ನಿರಂತರ ಸುಧಾರಣೆ ಸಾಧಿಸುತ್ತಿರುವರೆ, ಸೆನೆಗಲ್, ಟುನೀಶಿಯಾ, ಉಜ್ಬೇಕಿಸ್ತಾನ್, ರುವಾಂಡಾ ಮುಂತಾದ ದೇಶಗಳು ಚುರುಕು ನಾವೀನ್ಯತೆ ರಾಷ್ಟ್ರಗಳಾಗಿ ಬೆಳೆಯುತ್ತಿವೆ.* GII ತಂತ್ರಜ್ಞಾನ, ವ್ಯಾಪಾರ ಮಾದರಿ, ಸಾಮಾಜಿಕ ಉಪಕ್ರಮಗಳು ಹಾಗೂ ವ್ಯವಸ್ಥಾತ್ಮಕ ಬದಲಾವಣೆಗಳನ್ನು ಸಮಗ್ರವಾಗಿ ಪರಿಶೀಲಿಸುತ್ತದೆ.* ಹೂಡಿಕೆ, ತಂತ್ರಜ್ಞಾನ ಪ್ರಗತಿ, ಅಳವಡಿಕೆ ದರಗಳು ಮತ್ತು ಸಮಾಜದ ಮೇಲೆ ಅದರ ಪರಿಣಾಮಗಳನ್ನು ಗಮನಿಸಿ, ಜಾಗತಿಕ ಆವಿಷ್ಕಾರ ಪ್ರವೃತ್ತಿಗಳನ್ನು ಸ್ಪಷ್ಟವಾಗಿ ಬಿಂಬಿಸುತ್ತದೆ.2025 ರಲ್ಲಿ ಅತ್ಯಂತ ನಾವೀನ್ಯತೆ ದೇಶಗಳ ಟಾಪ್ 10 ಪಟ್ಟಿ: ದೇಶ ಜಿಐಐ ಅಂಕ (GII Score)1 ಸ್ವಿಟ್ಜರ್ಲ್ಯಾಂಡ್ 662 ಸ್ವೀಡನ್ 62.63 ಅಮೆರಿಕ 61.74 ಕೊರಿಯಾ ಗಣರಾಜ್ಯ 605 ಸಿಂಗಪುರ್ 59.86 ಯುನೈಟೆಡ್ ಕಿಂಗ್ಡಮ್ 59.17 ಫಿನ್ಲ್ಯಾಂಡ್ 57.78 ನೆದರ್ಲ್ಯಾಂಡ್ಸ್ 579 ಡೆನ್ಮಾರ್ಕ್ 56.910 ಚೀನಾ 56.6