* ದೇಶದ ಜಾಗತಿಕ ಕಡಲ ಆರ್ಥಿಕತೆಗೆ ಬಲ ನೀಡುವ ನಿಟ್ಟಿನಲ್ಲಿ 23 ಸಾವಿರ ಕೋಟಿ ಮೊತ್ತದ ಸಮುದ್ರಯಾನ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಿದ್ದಾರೆ.* ಸಮುದ್ರಯಾನ ಯೋಜನೆಯಿಂದ ಬ೦ದರು ಅಭಿವೃದ್ಧಿ, ಸುಸ್ಥಿರ ಬಳಕೆಗೆ ಉತ್ತೇಜನ ಹಾಗೂ ಅಂತರರಾಷ್ಟ್ರೀಯ ಸಹಯೋಗವನ್ನು ಸುಗಮಗೊಳಿಸುವ ಕಾರ್ಯತಂತ್ರದ ಉಪಕ್ರಮಗಳಿಗೆ ಅನುಗುಣವಾಗಿ ಈ ನೀಲನಕ್ಷೆ ಸಿದ್ಧಪಡಿಸಲಾಗಿದೆ ಎಂದು ತಿಳಿಸಲಾಗಿದೆ.* ಅಕ್ಟೋಬರ್ 17 ರಿಂದ 19 ರಂದು  ಮೂರು ದಿನಗಳ ಕಾಲ ನಡೆಯುವ ಮೂರನೇ ಆವೃತ್ತಿಯ ಜಾಗತಿಕ ಕಡಲ ಭಾರತ ಶೃಂಗಸಭೆಗೆ ಪ್ರಧಾನಿ ನರೇಂದ್ರ ಮೋದಿ ಅವರು ವರ್ಚುವಲ್‌ ಆಗಿ ಚಾಲನೆ ನೀಡಿದರು.* ಸಮುದ್ರಯಾನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಬಂದರುಗಳ ಭವಿಷ್ಯ, ಇಂಗಾಲದ ಡೈಆಕ್ಸೆಡ್ ಹೊರಸೂಸುವಿಕೆ ಪ್ರಮಾಣ ತಗ್ಗಿಸುವಿಕೆ, ಕರಾವಳಿ ಪ್ರದೇಶದಲ್ಲಿ ಹಡಗುಗಳ ರವಾನೆ, ಒಳನಾಡು ಜಲಸಾರಿಗೆ ಸೇರಿದಂತೆ ಹಲವು ವಿಷಯಗಳ ಬಗ್ಗೆ ಶೃಂಗಸಭೆಯಲ್ಲಿ ಚರ್ಚಿಸಲಾಗುತ್ತದೆ.