* ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥರು ಮುಕೇಶ್ ಅಂಬಾನಿ ಅವರು  'ಬ್ರಾಂಡ್ ಫೈನಾನ್ಸ್' ಸಂಸ್ಥೆ ಬಿಡುಗಡೆಗೊಳಿಸಿದ ಬ್ರಾಂಡ್ ಗಾರ್ಡಿಯನ್ ಶಿಪ್ ಸೂಚ್ಯಂಕ ಪಟ್ಟಿಯಲ್ಲಿ ಭಾರತದ ಉದ್ಯಮಿಗಳಲ್ಲಿ ಮೊದಲ ಹಾಗೂ ಜಾಗತಿಕ ಮಟ್ಟದಲ್ಲಿ ಎರಡನೇ ಸ್ಥಾನ ಪಡೆದುಕೊಂಡಿದೆ.* ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಛೇರ್ಮನ್ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿರುವ ಮುಕೇಶ್, ಮೈಕ್ರೋಸಾಫ್ಟ್‌ನ ಸತ್ಯಾ ನಾದೆಲ್ಲಾ, ಗೂಗಲ್ ಸಿಇಒ ಸುಂದರ್ ಪಿಚೈ, ಆ್ಯಪಲ್ ಸಂಸ್ಥೆಯ ಟಿಮ್ ಕುಕ್, ಟೆಸ್ಲಾದ ಎಲಾನ್ ಮಸ್ಕ್ ಅವರನ್ನು ಹಿಂದಿಕ್ಕಿ 2ನೇ ಸ್ಥಾನ ಪಡೆದಿದ್ದಾರೆ. ಟೆನ್ಸೆಂಟ್‌ನ ಹುವಾಟೆಂಗ್ ಮಾ 1 ನೇ ಸ್ಥಾನದಲ್ಲಿದ್ದಾರೆ.* ಟಾಟಾ ಸನ್ಸ್ ಅಧ್ಯಕ್ಷ ಎನ್ ಚಂದ್ರಶೇಖರನ್ 2023 ರ ಶ್ರೇಯಾಂಕದಲ್ಲಿ ನಂ.8 ರಿಂದ ನಂ.5 ಸ್ಥಾನದಲ್ಲಿದ್ದಾರೆ. ಅವರ ನಂತರ ಮಹೀಂದ್ರಾ & ಮಹೀಂದ್ರಾದ ಅನೀಶ್ ಶಾ ನಂ.6 ಮತ್ತು ಇನ್ಫೋಸಿಸ್‌ನ ಸಲೀಲ್ ಪರೇಖ್ ನಂ.16 ಸ್ಥಾನದಲ್ಲಿದ್ದಾರೆ. 2023 ರ ಶ್ರೇಯಾಂಕದಲ್ಲಿ ಅಂಬಾನಿ ಜಾಗತಿಕವಾಗಿ 2 ನೇ ಸ್ಥಾನದಲ್ಲಿದ್ದರು.* ನೌಕರರು, ಹೂಡಿಕೆದಾರರು ಮತ್ತು ಸಮಾಜಕ್ಕೆ ಸಮತೋಲಿತವಾಗಿ ಉದ್ಯಮದ ಮೌಲ್ಯವನ್ನು ಸುಸ್ಥಿರ ಮಾದರಿಯಲ್ಲಿ ಹೆಚ್ಚಿಸುವ ಆಧಾರದ ಮೇಲೆ ಗಾರ್ಡಿಯನ್‌ ಷಿಪ್ ಇಂಡೆಕ್ಸ್ ಜಾಗತಿಕವಾಗಿ ಸಿಇಒಗಳನ್ನು ಗುರುತಿಸುತ್ತದೆ.* ಈ ವರ್ಷ ಅವರು ಬ್ರಾಂಡ್ ಗಾರ್ಡಿಯನ್‌ಶಿಪ್ ಇಂಡೆಕ್ಸ್ 2024 ರಲ್ಲಿ 'ಡೈವರ್ಸಿಫೈಡ್' ಕಾಂಗ್ಲೋಮೆರೇಟ್‌ಗಳಲ್ಲಿ ನಂ.1 ಸ್ಥಾನ ಪಡೆದರು. ಮೈಕ್ರೋಸಾಫ್ಟ್‌ನ ಸತ್ಯ ನಾಡೆಲ್ಲಾ, ಗೂಗಲ್‌ನ ಸುಂದರ್ ಪಿಚೈ, ಆಪಲ್‌ನ ಟಿಮ್ ಕುಕ್ ಮತ್ತು ಟೆಸ್ಲಾದ ಎಲೋನ್ ಮಸ್ಕ್ ಅವರಂತಹ ಜಾಗತಿಕ ಮೇಜರ್‌ಗಳಿಗಿಂತ ಅಂಬಾನಿ ಮುಂದಿದ್ದಾರೆ.* 2023 ರ ಪಟ್ಟಿಯಲ್ಲೂ ಅಂಬಾನಿ ಅವರು ಜಾಗತಿಕ ಮಟ್ಟದಲ್ಲಿ ಎರಡನೇ ಸ್ಥಾನದಲ್ಲಿದ್ದರು. ಬ್ರಾದ ಫೈನಾನ್ಸ್ ಸಮೀಕ್ಷೆಯ ಅಂಬಾನಿ ಅವರಿಗೆ 80 .3 ಸ್ಕೋರ್ ನೀಡಿದೆ. ಅಗ್ರಸ್ಥಾನ ಪಡೆದ ಚೀನಾದ ಹುವಾತೆಂಗ್ ಮಾ ಅವರಿಗೆ 81 .6 ಸ್ಕೋರ್ ಲಭಿಸಿದೆ.