* ಹಣಕಾಸು ವರ್ಷದ ಕೊನೆಯ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ದರ ಶೇ.7.4ಕ್ಕೆ ಏರಿಕೆಯಾಗಿದೆ. ಇದು ಹಿಂದಿನ ಮೂರು ತ್ರೈಮಾಸಿಕಗಳಿಗಿಂತ ಉತ್ತಮವಾಗಿದ್ದು, ನಿರೀಕ್ಷೆಗೂ ಮೀರಿ ಬೆಳವಣಿಗೆ ಸಾಧಿಸಿದೆ.* 2024-25ರ ಹಣಕಾಸು ವರ್ಷದಲ್ಲಿ ವಾರ್ಷಿಕ ಬೆಳವಣಿಗೆ ದರ ಶೇ.6.5ರಷ್ಟಿದೆ. ಇದು ಕೋವಿಡ್ ನಂತರದ ಅವಧಿಯಲ್ಲಿ ದಾಖಲಾಗಿರುವ ಅತಿ ಕಡಿಮೆ ಬೆಳವಣಿಗೆ ದರವಾಗಿದೆ.* ಜಾಗತಿಕ ಆರ್ಥಿಕ ಕುಸಿತದ ನಡುವೆಯೂ ಭಾರತವು ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯ ಹಿರಿಮೆಯನ್ನು ಉಳಿಸಿಕೊಂಡಿದೆ. ಕಳೆದ ವರ್ಷ ಈ ದರ ಶೇ.9.2ರಷ್ಟಿತ್ತು.* ಜಾಗತಿಕ ಅನಿಶ್ಚಿತತೆಗಳಿಂದ ಖಾಸಗಿ ಹೂಡಿಕೆ ಕಡಿಮೆಯಾಗಿದ್ದರೂ, ಗ್ರಾಮೀಣ ಬೇಡಿಕೆಯು ಹೆಚ್ಚಾಗಿದ್ದು ಬೆಳವಣಿಗೆಯು ಸರಾಸರಿ ಅಂದಾಜಿನೊಳಗೆ ಇದೆ.* ಕೃಷಿ, ತಯಾರಿಕೆ, ನಿರ್ಮಾಣ, ಕೈಗಾರಿಕೆ ಮುಂತಾದ ವಲಯಗಳಲ್ಲಿ ಏರಿಕೆಯು ಕಂಡುಬಂದಿದ್ದು, ಜಿಡಿಪಿ ಮೇಲೆ ಸಕಾರಾತ್ಮಕ ಪ್ರಭಾವ ಬೀರಿದೆ.* ರಷ್ಯಾ-ಉಕ್ರೇನ್ ಯುದ್ಧ, ಟ್ರಂಪ್ ಸುಂಕ ನೀತಿ ಬದಲಾವಣೆ ಹಾಗೂ ಜಾಗತಿಕ ಮಾರುಕಟ್ಟೆ ಪುನರ್ನಿಮಾಣದ ನಡುವೆಯೂ, ಗ್ರಾಮೀಣ ಬೇಡಿಕೆ, ಉತ್ತಮ ಮುಂಗಾರು ಇಳುವರಿ ಮತ್ತು ಸರಕಾರಿ ವೆಚ್ಚದ ಜತೆಗೆ ದೇಶದ ಆರ್ಥಿಕ ಬೆಳವಣಿಗೆಯು ಚುರುಕುಗೊಂಡಿದೆ.