* ಪಿಎಂ ಕಿಸಾನ್ ಯೋಜನೆಯ 15ನೇ ಕಂತಿನ ಹಣ ಬಿಡುಗಡೆ ಅಗಿದ್ದು, ಆಗಸ್ಟ್ನಿಂದ ನವೆಂಬರ್ವರೆಗಿನ ಅವಧಿಗೆ ಒಟ್ಟು 18,000 ಕೋಟಿ ರೂ ಹಣವನ್ನು ಪಿಎಂ ನರೇಂದ್ರ ಮೋದಿ ಬಿಡುಗಡೆ ಮಾಡಿದ್ದಾರೆ.* ಜಾರ್ಖಂಡ್ನ ಖೂಂಟಿಯಲ್ಲಿ ನಡೆದ ಕಾರ್ಯಕ್ರಮದ ವೇಳೆ ಪ್ರಧಾನಿಗಳಿಂದ 15ನೇ ಕಂತಿನ ಹಣ ರಿಲೀಸ್ ಮಾಡಲಾಗಿದೆ.* 15ನೇ ಕಂತಿನಡಿ ಸುಮಾರು 8 ಸಾವಿರ ರೈತರು ತಲಾ 2000 ರೂ.ಗಳನ್ನು ತಮ್ಮ ಖಾತೆಗಳ ಮೂಲಕ ಪಡೆಯಲಿದ್ದಾರೆ.* ಒಟ್ಟು 18,000 ಕೋಟಿ ರೂ.ಗಳನ್ನು ಪಿಎಂ ಕಿಸಾನ್‌ ನಿಧಿ ಅಡಿ ರೈತರಿಗೆ ಈ ಬಾರಿ ನೀಡಲಾಗುತ್ತಿದೆ. ಪಿಎಂ ಕಿಸಾನ್‌ ನಿಧಿಯಡಿ ವರ್ಷದಲ್ಲಿ 6,000 ರೂ.ಸಿಗಲಿದ್ದು, ಪ್ರತಿ ನಾಲ್ಕು ತಿಂಗಳಿಗೊಮ್ಮೆ 2,000 ರೂ.ನೇರವಾಗಿ ರೈತರ ಖಾತೆಗೆ ವರ್ಗಾವಣೆ ಆಗಲಿದೆ.* ಈ ಪಿಎಂ ಕಿಸಾನ್ ಯೋಜನೆಯನ್ನು ಫೆಬ್ರವರಿ -01- 2019ರಂದು ಪ್ರಾರಂಭಿಸಲಾಯಿತು.* ಹಣಕಾಸು ವರ್ಷದಲ್ಲಿ ಏಪ್ರಿಲ್ನಿಂದ ಜುಲೈವರೆಗೆ ಒಂದು ಕಂತು; ಆಗಸ್ಟ್ನಿಂದ ನವೆಂಬರ್ವರೆಗೂ ಇನ್ನೊಂದು ಕಂತು; ಹಾಗು ಡಿಸೆಂಬರ್ನಿಂದ ಮಾರ್ಚ್ವರೆಗೆ ಮತ್ತೊಂದು ಕಂತಿನ ಹಣವನ್ನು ಸರ್ಕಾರ ಬಿಡುಗಡೆ ಮಾಡುತ್ತದೆ.