* ಇತಿಹಾಸದಲ್ಲಿ ಇದೆ ಮೊದಲ ಬಾರಿಗೆ ಅರ್ಜೆಂಟೀನಾದ (Argentina) ಬ್ಯೂನಸ್ ಐರಿಸ್ ಪ್ರಾಂತ್ಯದ ರಾಜಧಾನಿ ಲಾ ಪ್ಲಾಟಾದಿಂದ ಬಂದ 60 ವರ್ಷ ವಯಸ್ಸಿನ ಪತ್ರಕರ್ತೆ ಅಲೆಜಾಂಡ್ರಾ ಮರಿಸಾ ರೊಡ್ರಿಗಸ್ ಅವರು ಬ್ಯೂನಸ್ ಐರಿಸ್ ಮಿಸ್ ಯೂನಿವರ್ಸ್(Miss Universe Buenos Aires 2024) ಕಿರೀಟವನ್ನು ಗೆದ್ದು ಇತಿಹಾಸವನ್ನು ಬರೆದಿದ್ದಾರೆ. * ಈ ಮೂಲಕ ಇಂತಹ ಪ್ರತಿಷ್ಠಿತ ಗೌರವಕ್ಕೆ ಪಾತ್ರರಾದ 60ವರ್ಷ ವಯಸ್ಸಿನ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. * ರೋಡ್ರಿಗಸ್ ಕೇವಲ ಸೌಂದರ್ಯ ರಾಣಿಯಲ್ಲ ಅವರು ಅನುಭವಿ ವಕೀಲರು ಮತ್ತು ಪತ್ರಕರ್ತರು. ಮೇ 2024ರಂದು ನಡೆಯಲಿರುವ ʼಮಿಸ್ ಯೂನಿವರ್ಸ್ ಅರ್ಜೆಂಟೀನಾʼಗೆ ಮುಂಬರುವ ರಾಷ್ಟ್ರೀಯ ಆಯ್ಕೆಯಲ್ಲಿ ಬ್ಯೂನಸ್ ಐರಿಸ್ ಅನ್ನು ಪ್ರತಿನಿಧಿಸಲು ಈಕೆ ತಯಾರಿ ನಡೆಸುತ್ತಿದ್ದಾರೆ.* ವಿಶ್ವ ಸುಂದರಿ ಸ್ಪರ್ಧಿಗಳು 1952 ರಲ್ಲಿ ಸ್ಥಾಪನೆಯಾದಾಗಿನಿಂದ 18 ಮತ್ತು 28 ರ ನಡುವಿನ ವಯಸ್ಸಿನ ಅವಿವಾಹಿತರು ಮತ್ತು ಮಕ್ಕಳಿಲ್ಲದವರು ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವನ್ನು ನೀಡಲಾಗಿತ್ತು, ಆದರೆ ಸ್ಪರ್ಧೆಯ ಇತ್ತೀಚಿನ ನಿರ್ಧಾರವು ಹಿಂದಿನ ಮಾನದಂಡಗಳನ್ನು ಕಡೆಗಣಿಸಿ 18 ರಿಂದ 73 ವರ್ಷ ವಯಸ್ಸಿನ ಮಹಿಳೆಯರಿಗೆ ಭಾಗವಹಿಸಲು ಅವಕಾಶ ನೀಡಲಾಗಿದೆ.* ಅಲೆಜಾಂಡ್ರಾ ಮರಿಸಾ ಹೈಸ್ಕೂಲ್ ನಂತರ ಪತ್ರಿಕೋದ್ಯಮದಲ್ಲಿ ವೃತ್ತಿಜೀವನವನ್ನು ಮುಂದುವರಿಸಿದರು ಮತ್ತು ಕಾನೂನಿನ ಬಗ್ಗೆ ಪರಿಶೀಲಿಸುವ ಮೊದಲು ಮತ್ತು ಅಂತಿಮವಾಗಿ ಆಸ್ಪತ್ರೆಯ ಕಾನೂನು ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ.* ಸಾವಯವ ಆಹಾರಗಳು, ಬಹಳಷ್ಟು ಹಣ್ಣುಗಳು, ಸಾಕಷ್ಟು ತರಕಾರಿಗಳನ್ನು ತಿನ್ನಲು ಪ್ರಯತ್ನಿಸುತ್ತೇನೆ ಮತ್ತು ಉತ್ತಮ ಕ್ರೀಮ್ಗಳನ್ನು ಬಳಸುತ್ತೇನೆ ಎಂದು ಮರಿಸಾ ಅವರು ಹೇಳಿಕೊಂಡಿದ್ದಾರೆ.