* ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ಇಂದು ಗುರುವಾರ(ಜನವರಿ 16) ಸ್ಪಾಡೆಕ್ಸ್ ಮಿಷನ್ ಅಡಿಯಲ್ಲಿ ದೇಶದ ಮೊದಲ ಉಪಗ್ರಹ ಡಾಕಿಂಗ್ ಪ್ರಯೋಗವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿತು.* 2023 ಡಿಸೆಂಬರ್ 30ರಂದು PSLV-C60 ರಾಕೆಟ್ನ ಮೂಲಕ ಉಡಾವಣೆಯಾದ SDX01 ಮತ್ತು SDX02 ಉಪಗ್ರಹಗಳನ್ನು ಬಹು ಪ್ರಯತ್ನಗಳ ನಂತರ ಉಪಗ್ರಹಗಳನ್ನು ಯಶಸ್ವಿಯಾಗಿ ಡಾಕಿಂಗ್ ಮಾಡಲಾಯಿತು. ಇದು ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮಕ್ಕೆ ಐತಿಹಾಸಿಕ ಮೈಲಿಗಲ್ಲಾಗಿದೆ.* ಭಾರತ ನಾಲ್ಕನೇ ದೇಶ 370 ಕೋಟಿ ರೂಪಾಯಿ ವೆಚ್ಚದಲ್ಲಿ ಕಾರ್ಯಗತಗೊಳಿಸಲಾದ ಸ್ಪಾಡೆಕ್ಸ್ ಡಾಕಿಂಗ್ ಪ್ರಯೋಗವು ಭಾರತವನ್ನು ಈ ನಿರ್ಣಾಯಕ ಬಾಹ್ಯಾಕಾಶ ಸಾಮರ್ಥ್ಯವನ್ನು ಸಾಧಿಸಿದ ವಿಶ್ವದ ನಾಲ್ಕನೇ ದೇಶವಾಗಿದೆ. * ಉಪಗ್ರಹಗಳನ್ನು 15 ಮೀಟರ್ ದೂರದಿಂದ 3 ಮೀಟರ್ ಹೋಲ್ಡ್ ಪಾಯಿಂಟ್ಗೆ ಸ್ಥಳಾಂತರಿಸಿ, ಡಾಕಿಂಗ್ ಪ್ರಕ್ರಿಯೆ ಪ್ರಾರಂಭಿಸಲಾಗಿತ್ತು. ಬಾಹ್ಯಾಕಾಶ ನೌಕೆ ಸೆರೆಹಿಡಿಯುವಿಕೆಯನ್ನು ಸಾಧಿಸಿದ ನಂತರ, ಹಿಂತೆಗೆದುಕೊಳ್ಳುವ ಪ್ರಕ್ರಿಯೆ ಸರಾಗವಾಗಿ ಪೂರ್ಣಗೊಳ್ಳುವ ಮೂಲಕ ಸ್ಥಿರತೆ ಖಚಿತಪಡಿಸಲಾಯಿತು.* ಬಾಹ್ಯಾಕಾಶನೌಕೆ ಡಾಕಿಂಗ್ ಯಶಸ್ವಿಯಾಗಿ ಪೂರ್ಣಗೊಂಡಿದೆ! ಇದು ಒಂದು ಐತಿಹಾಸಿಕ ಕ್ಷಣ" ಎಂದು ಇಸ್ರೊ ಪ್ರಕಟಿಸಿದೆ.* ಇಸ್ರೋದ ನೂತನ ಅಧ್ಯಕ್ಷ ವಿ. ನಾರಾಯಣನ್, ತಂಡದ ಪ್ರಯತ್ನಗಳಿಗೆ ಅಭಿನಂದನೆ ಸಲ್ಲಿಸಿದರು. ಮುಂದಿನ ಹಂತಗಳಲ್ಲಿ ಅನ್ಡಾಕಿಂಗ್ ಮತ್ತು ವಿದ್ಯುತ್ ವರ್ಗಾವಣೆಯ ಪರಿಶೀಲನೆಗಳು ನಡೆಯಲಿವೆ.* ಜನವರಿ 7 ರಂದು ನಿಗದಿಯಾಗಿದ್ದ ಡಾಕಿಂಗ್, ಉಪಗ್ರಹಗಳ ಅಂತರ 500 ಮೀಟರ್ಗಳಿಂದ 225 ಮೀಟರ್ಗಳಿಗೆ ಇಳಿಸಲಾಗಿದ್ದುದರಿಂದ ಡಾಕಿಂಗ್ ಪ್ರಕ್ರಿಯೆಯು ಮುಂದೂಡಿಕೆಗೊಂಡಿತ್ತು. ಜನವರಿ 12 ರಂದು ಉಪಗ್ರಹಗಳನ್ನು 15 ಮೀಟರ್ ನಿಂದ 3 ಮೀಟರ್ ದೂರಕ್ಕೆ ತಂದ ನಂತರ ಅಂತಿಮ ಡಾಕಿಂಗ್ ಮುಂಚೆ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ತಂಡಗಳು ಬೇರ್ಪಟ್ಟವು.* ಪ್ರಧಾನಿ ನರೇಂದ್ರ ಮೋದಿ ಈ ಸಾಧನೆಗಾಗಿ ಇಸ್ರೊ ತಂಡವನ್ನು ಅಭಿನಂದಿಸಿದ್ದಾರೆ, ಮತ್ತು SpaDeX ಯೋಜನೆ ಭವಿಷ್ಯದಲ್ಲಿ ಅಂತರಿಕ್ಷ ಕಾರ್ಯಾಚರಣೆಗಳಿಗೆ ಮಹತ್ವದ ಮೈಲಿಗಲ್ಲು ಎಂದು ಹೇಳಿದ್ದಾರೆ.* ಅಮೆರಿಕ, ರಷ್ಯಾ ಮತ್ತು ಚೀನಾ ಭವಿಷ್ಯದ ಬಾಹ್ಯಾಕಾಶ ಅನ್ವೇಷಣೆ ಅಭಿಯಾನಗಳಿಗೆ ನಿರ್ಣಾಯಕ ಮೈಲಿಗಲ್ಲಾಗಿರುವ ಮಾನವರಹಿತ ಡಾಕಿಂಗ್ನ್ನು ಪೂರ್ಣಗೊಳಿಸಿರುವ ಇತರ ಮೂರು ದೇಶಗಳಾಗಿವೆ.* ಟಾರ್ಗೆಟ್ ಮತ್ತು ಚೇಸರ್ ಎಂಬ ಎರಡು ಉಪಗ್ರಹಗಳನ್ನು ಒಳಗೊಂಡಿರುವ ಸ್ಪೇಡೆಕ್ಸ್ ಅಭಿಯಾನಕ್ಕೆ ಡಿಸೆಂಬರ್.30ರಂದು ಚಾಲನೆ ನೀಡಲಾಗಿತ್ತು. ಆಂಧ್ರಪ್ರದೇಶದ ಸತೀಶ ಧವನ್ ಬಾಹ್ಯಾಕಾಶ ಕೇಂದ್ರದಿಂದ ಸ್ವದೇಶಿ ನಿರ್ಮಿತ ಪಿಎಸ್ಎಲ್ವಿ ರಾಕೆಟ್ ಮೂಲಕ ಉಪಗ್ರಹಗಳ ಉಡಾವಣೆ ನಡೆದಿತ್ತು.