* ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೊ) ಎನ್ವಿಎಸ್–01 ನ್ಯಾವಿಗೇಷನ್ (ಪಥ ದರ್ಶಕ) ಉಪಗ್ರಹವನ್ನು ಶ್ರೀಹರಿಕೋಟಾದಲ್ಲಿನ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದ ಎರಡನೇ ಉಡಾವಣಾ ನೆಲೆಯಿಂದ ಮೇ 29 ರಂದು ಉಡಾವಣೆ ಮಾಡಲಾಗುವುದು ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ಇಸ್ರೊ) ತಿಳಿಸಿದೆ.* 'ನಾವಿಕ (ನ್ಯಾವಿಗೇಷನ್ ವಿತ್ ಇಂಡಿಯನ್ ಕಣ್ ಸ್ಟೆಲೇಷನ್) ಸೇವೆಗಳಿಗಾಗಿ ತಯಾರಿಸಲಾದ ಎರಡನೆಯ ಉಪಗ್ರಹಗಳಲ್ಲಿ ಎನ್ ವಿಎಸ್ - 01 ಮೊದಲನೆಯದಾಗಿದ್ದು, 2,232 ಕೆ.ಜಿ.ತೂಕದ ಎನ್ ವಿಎಸ್ - 01 ಉಪಗ್ರಹವನ್ನು ಹೊತ್ತ ರಾಕೆಟ್ 'ಜಿಎಸ್ಎಲ್ ವಿ - ಎಫ್ ೧೨' ಮೇ 29 ರಂದು ಆಕಾಶಕ್ಕೆ ಹಾರಲಿದೆ ಎಂದು ಇಸ್ರೋ ಹೇಳಿಕೆಯಲ್ಲಿ ತಿಳಿಸಿದೆ.