Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ಇಸ್ರೋದ 2026ರ ಮೊದಲ ಉಡಾವಣೆ ವಿಫಲ: PSLV-C62 ಮಿಷನ್ನಲ್ಲಿ ತಾಂತ್ರಿಕ ದೋಷ
Authored by:
Akshata Halli
Date:
14 ಜನವರಿ 2026
➤
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) 2026ರ ಮೊದಲ ಬಾಹ್ಯಾಕಾಶ ಉಡಾವಣೆಯಲ್ಲಿ ವಿಫಲವಾಗಿದೆ. ಶ್ರೀಹರಿಕೋಟಾದ ಸತೀಶ್ ಧವನ ಬಾಹ್ಯಾಕಾಶ ಕೇಂದ್ರದಿಂದ ಉಡಾಯಿಸಲಾದ
PSLV-C62
ರಾಕೆಟ್, ಭೂ ವೀಕ್ಷಣಾ ಉಪಗ್ರಹ
EOS-N1 (ಅನ್ವೇಷ)
ಮತ್ತು ಅದರೊಂದಿಗೆ ಇದ್ದ 15 ಸಹಯಾತ್ರಿ ಉಪಗ್ರಹಗಳನ್ನು ನಿರ್ದಿಷ್ಟ ಕಕ್ಷೆಗೆ ತಲುಪಿಸಲು ವಿಫಲವಾಯಿತು.
➤
ಉಡಾವಣೆಯ ಸುಮಾರು 30 ನಿಮಿಷಗಳ ನಂತರ, ಮೂರನೇ ಹಂತದ (Third Stage) ಅಂತ್ಯದ ವೇಳೆಗೆ ರಾಕೆಟ್ನಲ್ಲಿ ಅಸಾಮಾನ್ಯ ತಾಂತ್ರಿಕ ವ್ಯತ್ಯಯ ಉಂಟಾಗಿ, ರಾಕೆಟ್ ತನ್ನ ನಿಗದಿತ ಹಾರಾಟ ಮಾರ್ಗದಿಂದ ವಿಚಲಿತಗೊಂಡಿತು ಎಂದು ಇಸ್ರೋ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಇಸ್ರೋ ಸಂಪೂರ್ಣ ತನಿಖೆ ಆರಂಭಿಸಿದೆ.
➤
ಇದು ಪಿಎಸ್ಎಲ್ವಿಗೆ
ಸತತ ಎರಡನೇ ವಿಫಲ ಉಡಾವಣೆ
ಆಗಿದೆ. ಕಳೆದ ವರ್ಷ ಮೇ 19ರಂದು ನಡೆದ EOS-9 ಉಪಗ್ರಹ ಉಡಾವಣೆಯಲ್ಲೂ ಮೂರನೇ ಹಂತದ ತೊಂದರೆಯಿಂದಲೇ ವಿಫಲವಾಗಿತ್ತು. ಪಿಎಸ್ಎಲ್ವಿ ಇಸ್ರೋದ ‘ವರ್ಕ್ಹಾರ್ಸ್’ ಎಂದು ಕರೆಯಲ್ಪಡುವ ರಾಕೆಟ್ ಆಗಿದ್ದು, ಇದುವರೆಗೆ ಚಂದ್ರಯಾನ್–1, ಮಂಗಳಯಾನ ಮತ್ತು ಆದಿತ್ಯ–L1 ಸೇರಿದಂತೆ 63 ಯಶಸ್ವಿ ಉಡಾವಣೆಗಳನ್ನು ನಡೆಸಿದೆ. ಈ ಉಡಾವಣೆ
PSLV-DL
ರೂಪಾಂತರದ ರಾಕೆಟ್ ಬಳಸಿ ನಡೆಸಲಾಗಿತ್ತು. ಇದರಲ್ಲಿ ಎರಡು ಸ್ಟ್ರ್ಯಾಪ್-ಆನ್ ಮೋಟಾರ್ಗಳಿದ್ದು, ಅವು ಸರಿಯಾಗಿ ಕಾರ್ಯನಿರ್ವಹಿಸಿದರೂ ಮೂರನೇ ಹಂತದ ನಂತರ ಸಮಸ್ಯೆ ಎದುರಾಯಿತು.
➤
ಈ ಮಿಷನ್ನಲ್ಲಿ ಡಿಆರ್ಡಿಒ ಮತ್ತು ಇಸ್ರೋ ಸಂಯುಕ್ತವಾಗಿ ಅಭಿವೃದ್ಧಿಪಡಿಸಿದ
EOS-N1 ಅನ್ವೇಷ
ಉಪಗ್ರಹದ ಜೊತೆಗೆ, ಭಾರತ ಮತ್ತು ವಿದೇಶಗಳ ಹಲವಾರು ಸ್ಟಾರ್ಟ್ಅಪ್ಗಳು ಹಾಗೂ ವಿಶ್ವವಿದ್ಯಾಲಯ ವಿದ್ಯಾರ್ಥಿಗಳ ಉಪಗ್ರಹಗಳು ಸೇರಿದ್ದವು. ಕರ್ನಾಟಕ, ಒಡಿಶಾ, ಮಣಿಪುರ ಮತ್ತು ಅಸ್ಸಾಂ ರಾಜ್ಯಗಳ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ ಉಪಗ್ರಹಗಳೂ ಇದರಲ್ಲಿ ಸೇರಿವೆ.
➤
ಮುಖ್ಯವಾಗಿ, ಈ ಮಿಷನ್ನಲ್ಲಿ ಸ್ಪೇನ್ನ
Orbital Paradigm
ಸ್ಟಾರ್ಟ್ಅಪ್ ಅಭಿವೃದ್ಧಿಪಡಿಸಿದ
KID ಕ್ಯಾಪ್ಸೂಲ್
ಕೂಡ ಇದ್ದು, ಭೂಮಿಯ ವಾತಾವರಣಕ್ಕೆ ಮರುಪ್ರವೇಶ (Re-entry) ಪ್ರದರ್ಶನ ನಡೆಸುವುದು ಇದರ ಉದ್ದೇಶವಾಗಿತ್ತು. ಈ ಕ್ಯಾಪ್ಸೂಲ್ ಪಿಎಸ್ಎಲ್ವಿ ನಾಲ್ಕನೇ ಹಂತದೊಂದಿಗೆ ದಕ್ಷಿಣ ಪೆಸಿಫಿಕ್ ಮಹಾಸಾಗರದಲ್ಲಿ ಬೀಳಬೇಕಿತ್ತು. ಆದರೆ ಮಿಷನ್ ವಿಫಲವಾದ ಕಾರಣ, ಎಲ್ಲಾ ಪೇಲೋಡ್ಗಳು ನಷ್ಟವಾಗಿರುವ ಸಾಧ್ಯತೆ ಇದೆ. ಈ ಉಡಾವಣೆಯಲ್ಲಿ ಯುಕೆ–ಥೈಲ್ಯಾಂಡ್ನ
Theos-2
ಉಪಗ್ರಹ, ಬ್ರೆಜಿಲ್ನ ಐದು ಉಪಗ್ರಹಗಳು, ನೇಪಾಳದ ತಂತ್ರಜ್ಞಾನ ಪ್ರದರ್ಶನ ಉಪಗ್ರಹ ಮತ್ತು ವಿವಿಧ ವಾಣಿಜ್ಯ ಪ್ರಯೋಗಾತ್ಮಕ ಪೇಲೋಡ್ಗಳು ಸೇರಿದ್ದವು.
➤
ಇತ್ತೀಚಿನ ವರ್ಷಗಳಲ್ಲಿ ಇಸ್ರೋ ವಿಳಂಬಗಳು ಮತ್ತು ವಿಫಲತೆಗಳನ್ನು ಎದುರಿಸುತ್ತಿದ್ದು, ಕಳೆದ ಒಂದು ವರ್ಷದಲ್ಲಿ ಐದು ಮಿಷನ್ಗಳ ಪೈಕಿ ಮೂರು ಸಂಪೂರ್ಣವಾಗಿ ಯಶಸ್ವಿಯಾಗಿಲ್ಲ. ಆದರೂ 2026ರಲ್ಲಿ ಇನ್ನೂ ಐದು ಪ್ರಮುಖ ಮಿಷನ್ಗಳನ್ನು ಇಸ್ರೋ ಯೋಜಿಸಿದ್ದು, ಅವುಗಳಲ್ಲಿ
ಗಗನಯಾನ ಮಾನವರಹಿತ ಪರೀಕ್ಷಾ ಹಾರಾಟ
ಮತ್ತು ಮೊದಲ ಉದ್ಯಮ ನಿರ್ಮಿತ ಪಿಎಸ್ಎಲ್ವಿ ಉಡಾವಣೆಯೂ ಸೇರಿವೆ. ಪ್ರಸ್ತುತ, PSLV-C62 ಮಿಷನ್ನ ಪೇಲೋಡ್ಗಳನ್ನು ಮರುಪಡೆಯುವ ಸಾಧ್ಯತೆ ಅಥವಾ ಮಿಷನ್ ಪುನಃ ಪ್ರಯತ್ನಿಸುವ ಬಗ್ಗೆ ಇಸ್ರೋ ಅಧಿಕೃತ ಘೋಷಣೆ ನೀಡಿಲ್ಲ.
Take Quiz
Loading...