* ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಗುರುವಾರ(ಮಾರ್ಚ್ 13) ಸ್ಪಾಡೆಕ್ಸ್ ಅನ್ನು ಯಶಸ್ವಿಯಾಗಿ ಅನ್ ಡಾಕಿಂಗ್ ಮಾಡಿದ್ದು, ಚಂದ್ರಯಾನ-4 ಕಾರ್ಯಾಚರಣೆಗೆ ನಾಂದಿ ಹಾಡಿದೆ.* ಇಸ್ರೋ ಎಕ್ಸ್ ನಲ್ಲಿ ಎಸ್ಡಿಎಕ್ಸ್-2 ವಿಸ್ತರಣೆ, ಕ್ಯಾಪ್ಚರ್ ಲಿವರ್ 3 ಬಿಡುಗಡೆ, ಎಸ್ಡಿಎಕ್ಸ್-2 ಲಿವರ್ ನಿಷ್ಕ್ರಿಯಗೊಳಿಸುವುದು ಮತ್ತು ಉಪಗ್ರಹಗಳಿಗೆ ಡಿ-ಕ್ಯಾಪ್ಚರ್ ಕಮಾಂಡ್ ನೀಡುವ ಯಶಸ್ವಿ ಪ್ರಯೋಗದ ಅನುಕ್ರಮವನ್ನು ವಿವರಿಸಿದೆ.* ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಡಾ.ಜಿತೇಂದ್ರ ಸಿಂಗ್ ಕೂಡ ತಂಡವನ್ನು ಶ್ಲಾಘಿಸಿದ್ದು, “ಇಸ್ರೋ ತಂಡಕ್ಕೆ ಅಭಿನಂದನೆಗಳು. ಮತ್ತು ಪ್ರತಿಯೊಬ್ಬ ಭಾರತೀಯನಿಗೂ ಹೃದಯಸ್ಪರ್ಶಿ! SPADEX ಉಪಗ್ರಹಗಳು ನಂಬಲಾಗದ ಡಿ-ಡಾಕಿಂಗ್ ಅನ್ನು ಸಾಧಿಸಿದವು.” ಎಂದು ಹೇಳಿದ್ದಾರೆ.* ಭಾರತ, ಚಂದ್ರಯಾನ 4 ಮತ್ತು ಗಗನಯಾನ ಸೇರಿದಂತೆ ಮಹತ್ವಾಕಾಂಕ್ಷೆಯ ಬಾಹ್ಯಾಕಾಶ ಯೋಜನೆಗಳಿಗೆ ಮುಂದಾಗಿದೆ. ಪ್ರಧಾನಿ ಮೋದಿ ಅವರ ಪ್ರೋತ್ಸಾಹದಿಂದ, ಡಿಸೆಂಬರ್ 30, 2024 ರಂದು ಸ್ಪೇಸ್ ಡಾಕಿಂಗ್ ಎಕ್ಸ್ಪೆರಿಮೆಂಟ್ (SDEx) ಮಿಷನ್ ಪ್ರಾರಂಭವಾಯಿತು.* ಜನವರಿ 16, 2025 ರಂದು SDEx-01 ಮತ್ತು SDEx-02 ಉಪಗ್ರಹಗಳನ್ನು ಉಡಾವಣೆ ಮಾಡಲಾಯಿತು. ಅಮೆರಿಕಾ, ರಷ್ಯಾ, ಚೀನಾದ ನಂತರ, ಬಾಹ್ಯಾಕಾಶ ಡಾಕಿಂಗ್ ಸಾಧಿಸಿದ ನಾಲ್ಕನೇ ರಾಷ್ಟ್ರವಾಗಿ ಭಾರತ ಗುರುತಿಸಿಕೊಂಡಿದೆ.