* ಅಮೆರಿಕದ ವ್ಯಾಸ್ಟ್ ಕಂಪನಿ ಭೂಮಿಯ ಕಕ್ಷೆಯಲ್ಲಿ ತಾವು ನಿರ್ಮಿಸಿರುವ ಬಾಹ್ಯಾಕಾಶ ನಿಲ್ದಾಣಕ್ಕೆ ಭಾರತೀಯ ರಾಕೆಟ್ ಮೂಲಕ ಗಗನಯಾನಿಗಳನ್ನು ಕಳಿಸುವಲ್ಲಿ ಆಸಕ್ತಿ ವ್ಯಕ್ತಪಡಿಸಿದೆ.* ಗ್ಲೋಬಲ್ ಸ್ಪೇಸ್ ಎಕ್ಸ್ಪ್ಲೋರೇಷನ್ ಕಾನ್ಫರೆನ್ಸ್ ಸಂದರ್ಭದಲ್ಲಿ, ಕಂಪನಿಯ ಸಿಇಒ ಮ್ಯಾಕ್ಸ್ ಹೋಟ್ ಅವರು ಇಸ್ರೊ ವಿಜ್ಞಾನಿಗಳನ್ನು ಭೇಟಿಯಾಗಿ ಈ ಬಗ್ಗೆ ಚರ್ಚೆ ನಡೆಸಿದ್ದಾರೆ.* ಕ್ಯಾಲಿಫೋರ್ನಿಯಾ ಮೂಲದ ಈ ಕಂಪನಿ, ವ್ಯಾಪಾರಿಕ ಉದ್ದೇಶಕ್ಕೆ ಬಾಹ್ಯಾಕಾಶ ನಿಲ್ದಾಣ ನಿರ್ಮಿಸುತ್ತಿರುವ ಪ್ರಪಂಚದ ಮೊದಲ ಸಂಸ್ಥೆಯಾಗಿದೆ.* ಇತ್ತೀಚಿನ ವರದಿಗಳ ಪ್ರಕಾರ, ಐಎಸ್ಎಸ್ 2031ರ ನಂತರ ತನ್ನ ಸೇವೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಿದ್ದು, ಬಳಿಕ ವ್ಯಾಸ್ಟ್ನ ನಿಲ್ದಾಣ ಮುಖ್ಯ ಕೇಂದ್ರವಾಗಲಿದೆ.* ಮ್ಯಾಕ್ಸ್ ಹೋಟ್ ಅವರು ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ, ‘2026ರ ಮೇ ತಿಂಗಳಲ್ಲಿ ಸ್ಪೇಸ್ಎಕ್ಸ್ನ ಫಾಲ್ಕನ್–9 ರಾಕೆಟ್ನ ಸಹಾಯದಿಂದ ಹೆವೆನ್–1 ನಿಲ್ದಾಣ ಉಡ್ಡಯನ ಮಾಡುವ ಯೋಜನೆ ಇದೆ’ ಎಂದು ತಿಳಿಸಿದ್ದಾರೆ.* ‘ಭಾರತದ ಗಗನಯಾನ ಯೋಜನೆ ನನ್ನ ಗಮನ ಸೆಳೆದಿದೆ. ನಮ್ಮ ನಿಲ್ದಾಣಕ್ಕೆ ಗಗನಯಾತ್ರಿಗಳನ್ನು ಕಳಿಸಲು ಇಸ್ರೊದ ರಾಕೆಟ್ಗಳನ್ನು ಬಳಸುವ ಸಾಧ್ಯತೆಗಳನ್ನು ಪರಿಶೀಲಿಸುತ್ತಿದ್ದೇವೆ’ ಎಂದು ಅವರು ಹೇಳಿದರು.* ಇಸ್ರೊ ಅಭಿವೃದ್ಧಿಪಡಿಸಿರುವ ಎಲ್ಎಂವಿ–3 ರಾಕೆಟ್, ಗಗನಯಾನ ನೌಕೆಯನ್ನು ಹೊತ್ತೊಯ್ಯಲಿದೆ. ಈ ಯೋಜನೆಯನ್ನು 2027ರ ಮೊದಲ ತ್ರೈಮಾಸಿಕದಲ್ಲಿ ಆರಂಭಿಸಲು ಉದ್ದೇಶಿಸಲಾಗಿದೆ.