* 'ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಜೊತೆಗಿನ ಸಹಭಾಗಿತ್ವವನ್ನು ಇನ್ನಷ್ಟು ವಿಸ್ತರಿಸಲಾಗುವುದು' ಎಂದು 'ನಾಸಾ' ಆಡಳಿತಾಧಿಕಾರಿ ಬಿಲ್‌ ನೆಲ್ಸನ್ ಹೇಳಿದ್ದಾರೆ.* ಭಾರತದ ಗಗನಯಾತ್ರಿಯ ಜೊತೆಗೂಡಿ ಅಂತರರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಜಂಟಿ ಕಾರ್ಯಾಚರಣೆ ನಡೆಸುವುದೂ ಇದರಲ್ಲಿ ಸೇರಿದೆ ಎಂದು ನೆಲ್ಸನ್ ಅವರು ತಿಳಿಸಿದರು. * ಕ್ರಮವಾಗಿ ಭಾರತ ಮತ್ತು ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರರಾದ ಅಜಿತ್ ಡೊಭಾಲ್ ಮತ್ತು ಜೇಕ್ ಸುಲಿವಾನ್, 'ಇಸ್ರೋದ ಗಗನಯಾತ್ರಿಗಳಿಗೆ ಅಮೆರಿಕದಲ್ಲಿ ತರಬೇತಿ ನೀಡಲಾ ಗುವುದು' ಎಂದು ಜಂಟಿ ಹೇಳಿಕೆ ನೀಡಿದ ಬೆನ್ನಲೇ  ಬಿಲ್‌ ನೆಲ್ಸನ್ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತದ ಜೊತೆಗಿನ ಸಹಭಾಗಿತ್ವವನ್ನು ಇನ್ನಷ್ಟು ವಿಸ್ತರಿಸಲಾಗುವುದು ಎಂದು ಹೇಳಿದ್ದಾರೆ.