* ಇಸ್ರೋ ಮಾಜಿ ಅಧ್ಯಕ್ಷ ಕೆ. ಕಸ್ತೂರಿ ರಂಗನ್ ಅವರು ವಿಧಿವಶರಾಗಿದ್ದಾರೆ. 84 ವರ್ಷ ವಯಸ್ಸಾಗಿದ್ದ ಕಸ್ತೂರಿ ರಂಗನ್ ಅವರು ಬೆಂಗಳೂರಿನಲ್ಲಿ ತಮ್ಮ ನಿವಾಸದಲ್ಲಿ ಶುಕ್ರವಾರ(ಏಪ್ರಿಲ್ 25) ಬೆಳಿಗ್ಗೆ ಕೊನೆ ಉಸಿರೆಳೆದಿದ್ದರೆ.* ಇಸ್ರೋ ಮುಖ್ಯಸ್ಥರಾಗಿ ಅವರು ಅನೇಕ ರಾಕೆಟ್ಗಳ ಯಶಸ್ವಿ ಉಡಾವಣೆಗಳನ್ನು ನಡೆಸಿದ್ದು, ಭಾರತದಲ್ಲಿ ವಿಜ್ಞಾನ, ತಂತ್ರಜ್ಞಾನ ಹಾಗೂ ಇಸ್ರೋ ಅಭಿವೃದ್ಧಿಯಲ್ಲಿ ಅಪಾರ ಕೊಡುಗೆ ಸಲ್ಲಿಸಿದ್ದಾರೆ.* ಪಶ್ಚಿಮ ಘಟ್ಟ ಸಂರಕ್ಷಣೆಗೆ ಸಂಬಂಧಿಸಿದಂತೆ ಅವರು ಕೇಂದ್ರ ಸರ್ಕಾರಕ್ಕೆ ಮಹತ್ವದ ವರದಿ ನೀಡಿದ್ದರು. ಇಸ್ರೋ ಸಂಸ್ಥೆಯನ್ನು 9 ವರ್ಷಗಳ ಕಾಲ ಮುನ್ನಡೆಸಿದ ಕಸ್ತೂರಿ ರಂಗನ್ ಅವರು ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಪಡೆದ ಅನೇಕ ದೊಡ್ಡ ಸಾಧನೆಗಳ ಹಿಂದಿನ ಶಕ್ತಿ ಆಗಿದ್ದರು.* ಪರಿಸರ, ಶಿಕ್ಷಣ, ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಗಳಲ್ಲಿ ಅವನ ಕೊಡುಗೆ ಅನನ್ಯವಾಗಿತ್ತು. ರಾಜ್ಯಸಭೆ ಸದಸ್ಯರಾಗಿ ಅವರು ದೇಶದ ಮಹತ್ವಪೂರ್ಣ ನೀತಿಗಳ ರೂಪದಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು.* ಕಸ್ತೂರಿ ರಂಗನ್ ಅವರ ಸಾಧನೆಯನ್ನು ಗುರುತಿಸಿ ಭಾರತ ಸರ್ಕಾರ ಅವರು ಪದ್ಮವಿಭೂಷಣ, ಪದ್ಮಭೂಷಣ ಹಾಗೂ ಪದ್ಮಶ್ರೀ ಇವುಗಳನ್ನು ನೀಡಿ ಗೌರವಿಸಿದೆ.* ಏಪ್ರಿಲ್ 27ರಂದು ರಾಮನ್ ಸಂಶೋಧನಾ ಸಂಸ್ಥೆಯಲ್ಲಿ (ಆರ್ಆರ್ಐ) ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.