* ಇತ್ತೀಚಿಗಷ್ಟೇ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ದಾಖಲೆ ಬರೆದಿದ್ದ ಭಾರತ ಇದೀಗ ಮಾನವಸಹಿತ ಗಗನಯಾನ ಸಿದ್ಧತೆಯ ಭಾಗವಾಗಿ ಇಸ್ರೋ ಶನಿವಾರ (ಅ.21) ಬೆಳ್ಳಿಗೆ 10:00 ಗಂಟೆಗೆ ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಮೊದಲ ಪ್ರಾಯೋಗಿಕ ಪರೀಕ್ಷೆಯನ್ನು ಯಶಸ್ವಿಯಾಗಿ ಉಡಾವಣೆಯಾಗಿದೆ.*  ಟೆಸ್ಟ್ ವೆಹಿಕಲ್ ಅಬಾರ್ಟ್ ಮಿಷನ್ (TV-D1) ಬೆಳಿಗ್ಗೆ 10 ಗಂಟೆಗೆ ಯಶಸ್ವಿಯಾಗಿ ಟೇಕ್ ಆಫ್ ಆಯಿತು ಮತ್ತು 17 ಕಿಮೀ ಎತ್ತರದಲ್ಲಿ ಪರೀಕ್ಷಾ ವಾಹನದಿಂದ ಕ್ರ್ಯೂ ಎಸ್ಕೇಪ್ ಸಿಸ್ಟಮ್ (CES) ಮತ್ತು ಕ್ರ್ಯೂ ಮಾಡ್ಯೂಲ್ (CM) ಪ್ರತ್ಯೇಕಗೊಂಡು ಅಂತಿಮವಾಗಿ ನಿಖರವಾಗಿ 11 ನಿಮಿಷಗಳ ನಂತರ ಶ್ರೀಹರಿಕೋಟಾ ಕರಾವಳಿಯಿಂದ 10 ಕಿಮೀ ದೂರದಲ್ಲಿರುವ ಬಂಗಾಳ ಕೊಲ್ಲಿಯಲ್ಲಿ ಪೂರ್ವ ನಿರ್ಧಾರಿತ ಸ್ಥಳದಲ್ಲಿ ಇಳಿಯುವ ಮೂಲಕ ಇದು ಇಸ್ರೋ ವಿಜ್ಞಾನಿಗಳ ಪ್ರಯತ್ನಕ್ಕೆ ಸಾಕ್ಷಿಯಾಗಿದೆ.* ಬಂಗಾಳ ಕೊಲ್ಲಿಯಲ್ಲಿ ಇಳಿದಿದ್ದ ಕ್ರೊ ಮಾಡ್ಯೂಲ್ ಅನ್ನು ನೌಕಾಪಡೆಯ ಈಸ್ಟರ್ನ್ ಕಮಾಂಡ್ ನ ಸಿಬಂದಿ ವಶಕ್ಕೆ ಪಡೆದುಕೊಂಡರು, ನಂತರ  ಕ್ರೊ ಮಾಡ್ಯೂಲ್ ಅನ್ನು ಚೆನ್ನೈ ನ ಬಂದರಿಗೆ ತರಲಾಗಿದೆ ಎಂದು ಇಸ್ರೋ ಅಧ್ಯಕ್ಷ ಎಸ್. ಸೋಮನಾಥ ಅವರು ತಿಳಿಸಿದ್ದಾರೆ.* 2024 ರ ಕೊನೆಯಲ್ಲಿ ಅಥವಾ 2025 ರ ಆರಂಭದಲ್ಲಿ ನಿರೀಕ್ಷಿಸಲಾದ ಗಗನಯಾನ ಮಿಷನ್ ಮೂರು ವ್ಯಕ್ತಿಗಳ ಸಿಬ್ಬಂದಿಯನ್ನು ಮೂರು ದಿನಗಳ ಕಾರ್ಯಾಚರಣೆಗಾಗಿ 400 ಕಿ.ಮೀ ಕಡಿಮೆ ಭೂಮಿಯ ಕಕ್ಷೆಯಲ್ಲಿ ಮಾನವರನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಗುರಿ ಹೊಂದಿದೆ ಹಾಗೂ ಹಿಂದೂ ಮಹಾಸಾಗರದ ನೀರಿನಲ್ಲಿ ಸುರಕ್ಷಿತ ಲ್ಯಾಂಡಿಂಗ್ ಮತ್ತು ಅವರ ಸುರಕ್ಷಿತ ವಾಪಸಾತಿಯನ್ನು ಖಚಿತಪಡಿಸಿಕೊಳ್ಳುವುದು ಇದರೊಂದಿಗೆ ಮಾನವಸಹಿತ ಬಾಹ್ಯಾಕಾಶ ಯಾನಕ್ಕೆ ಭಾರತದ ಸಾಮಥ್ರ್ಯ ಪ್ರದರ್ಶಿಸುವ ಗುರಿಯನ್ನು ಇಸ್ರೋ ಹೊಂದಿದೆ.* ಟಿವಿ- ಡಿ1 ಮಿಷನ್‍ನ ಯಶಸ್ವಿ ಸಾಧನೆಯನ್ನು ಘೋಷಿಸಲು ನನಗೆ ತುಂಬಾ ಸಂತೋಷವಾಗಿದೆ. ಈ ಕಾರ್ಯಾಚರಣೆಯ ಉದ್ದೇಶವು ಗಗನ್ಯಾನ್ ಕಾರ್ಯಕ್ರಮಕ್ಕಾಗಿ ಮಾನವರಹಿತ ವ್ಯವಸ್ಥೆಯನ್ನು ಪ್ರದರ್ಶಿಸುವುದಾಗಿತ್ತು ಎಂದು ಇಸ್ರೋ ಮುಖ್ಯಸ್ಥ ಎಸ್.ಸೋಮನಾಥ್ ಹೇಳಿದ್ದಾರೆ.