Loading..!
KPSC Vaani
Login
My Orders
My Cart
Shorts
Job news
Current Affairs
Buy books
Practice Papers
Quizzes
Question Papers
Institutes
Flash news
Cut Offs
Blogs
Study Materials
Contact Us
About Us
More
Study Materials
Cut Offs
Blogs
Contact Us
Upload file
About Us
Login
Register
×
Warning!
Enter minimum 2 characters.
Back
ಪ್ರಚಲಿತ ಘಟನೆಗಳು
ISO/IEC 42001 ಪ್ರಮಾಣೀಕರಣ ಪಡೆದ ಮೊದಲ ಪಾವತಿ ಕಂಪನಿಯಾಗಿ Financial Software and Systems(FSS)
8 ಜನವರಿ 2026
* ಭಾರತದ ಪಾವತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮಹತ್ವದ ಸಾಧನೆಯಾಗಿ,
Financial Software and Systems (FSS)
ಸಂಸ್ಥೆ
ISO/IEC 42001
ಪ್ರಮಾಣೀಕರಣವನ್ನು ಪಡೆಯುವ
ಭಾರತ, ಮಧ್ಯಪ್ರಾಚ್ಯ, ಏಷ್ಯಾ–ಪೆಸಿಫಿಕ್ (APAC) ಹಾಗೂ ದಕ್ಷಿಣ ಆಫ್ರಿಕಾ ಪ್ರದೇಶಗಳ ಮೊದಲ ಪಾವತಿ ಕಂಪನಿ
ಯಾಗಿ ಹೊರಹೊಮ್ಮಿದೆ. ISO/IEC 42001 ಪ್ರಮಾಣೀಕರಣವು
ಕೃತಕ ಬುದ್ಧಿಮತ್ತೆ (AI) ಯ ಜವಾಬ್ದಾರಿಯುತ, ನೈತಿಕ ಹಾಗೂ ನಿಯಂತ್ರಿತ ಬಳಕೆಗೆ
ಸಂಬಂಧಿಸಿದ ಜಾಗತಿಕ ಮಾನದಂಡವಾಗಿದೆ. ಈ ಪ್ರಮಾಣೀಕರಣದ ಮೂಲಕ FSS ಸಂಸ್ಥೆ, ಅಸ್ತವ್ಯಸ್ತ (ad-hoc) AI ಬಳಕೆಯಿಂದ ದೂರ ಸರಿದು,
ಸಂಸ್ಥಾಮಟ್ಟದ AI ಆಡಳಿತ (AI Governance) ಚೌಕಟ್ಟನ್ನು
ಅಳವಡಿಸಿಕೊಂಡಿದೆ.
*
ಈ ಸಾಧನೆಯ ಮಹತ್ವ:
=>
AI ವ್ಯವಸ್ಥೆಗಳ ಸಂಪೂರ್ಣ ಜೀವನಚಕ್ರದಲ್ಲಿ ಮೇಲ್ವಿಚಾರಣೆ, ಅಪಾಯ ಮೌಲ್ಯಮಾಪನ, ಹೊಣೆಗಾರಿಕೆ, ಪಾರದರ್ಶಕತೆ ಹಾಗೂ ನಿಯಂತ್ರಣ ಪಾಲನೆಯನ್ನು ಖಚಿತಪಡಿಸುವ ವ್ಯವಸ್ಥೆಯನ್ನು ಇದು ಒದಗಿಸುತ್ತದೆ.
=>
ವಂಚನೆ ಪತ್ತೆ
,
ವಹಿವಾಟು ಮೇಲ್ವಿಚಾರಣೆ
,
ಡಿಸ್ಪ್ಯೂಟ್ ಮ್ಯಾನೇಜ್ಮೆಂಟ್
,
ರಿಕನ್ಸಿಲಿಯೇಷನ್
,
ಆಪರೇಷನಲ್ ಆಟೋಮೇಷನ್
ಮುಂತಾದ ಪ್ರಮುಖ ಕ್ಷೇತ್ರಗಳಲ್ಲಿ AI ಬಳಕೆ
=> AI ಯಿಂದ ಉಂಟಾಗಬಹುದಾದ ಪಕ್ಷಪಾತ, ಅನಿರೀಕ್ಷಿತ ಫಲಿತಾಂಶಗಳು, ವಿವರಣಾತ್ಮಕತೆಯ ಕೊರತೆ ಹಾಗೂ ನಿಯಂತ್ರಣ ಉಲ್ಲಂಘನೆಗಳಂತಹ ಅಪಾಯಗಳನ್ನು ತಡೆಯಲು ಇದು ವ್ಯವಸ್ಥಿತ ಕ್ರಮಗಳನ್ನು ಒದಗಿಸುತ್ತದೆ.
* ಹಣಕಾಸು ಕ್ಷೇತ್ರಕ್ಕೆ ಪ್ರಾಮುಖ್ಯತೆ :
ISO/IEC 42001 ಮಾನದಂಡವು, ಹಣಕಾಸು ಸೇವಾ ಕ್ಷೇತ್ರದಲ್ಲಿ AI ಬಳಕೆಯಿಂದ ಉಂಟಾಗುವ
ನ್ಯಾಯತೆ, ವಿವರಣಾತ್ಮಕತೆ (Explainability), ಹೊಣೆಗಾರಿಕೆ
ಸಂಬಂಧಿತ ಅಪಾಯಗಳನ್ನು ಸಮರ್ಥವಾಗಿ ನಿರ್ವಹಿಸಲು ಸಹಾಯಕವಾಗಿದೆ. ಇದು ಮುಂದಿನ ದಿನಗಳಲ್ಲಿ
EU AI Act
ಹಾಗೂ
RBI ಯ ನೈತಿಕ AI ಒತ್ತಾಯಗಳಿಗೆ
ಅನುಗುಣವಾಗಿ ಅತ್ಯಂತ ಪ್ರಸ್ತುತವಾಗಲಿದೆ.
* FSS ನ CEO
ವಿ. ಬಾಲಸುಬ್ರಹ್ಮಣ್ಯನ್
ಅವರು“ಪಾವತಿ ವ್ಯವಸ್ಥೆಗಳಲ್ಲಿ AI ಪ್ರಮುಖ ಮೂಲಸೌಕರ್ಯವಾಗುತ್ತಿರುವ ಸಂದರ್ಭದಲ್ಲಿ, ಅದರ ಆಡಳಿತ (Governance) ಅತ್ಯಾವಶ್ಯಕ. ಶಕ್ತಿಶಾಲಿಯಷ್ಟೇ ಅಲ್ಲ, ನಂಬಿಕೆಯುಳ್ಳ ಹಾಗೂ ಹೊಣೆಗಾರ AI ನಿರ್ಮಾಣಕ್ಕೆ ಈ ಪ್ರಮಾಣೀಕರಣ ನಮ್ಮ ಬದ್ಧತೆಯನ್ನು ತೋರಿಸುತ್ತದೆ” ಎಂದು ಹೇಳಿದ್ದಾರೆ.
* FSS ನ AI ಆಡಳಿತ ಚೌಕಟ್ಟನ್ನು
TÜV SÜD
(ಜಾಗತಿಕ ಪ್ರಮಾಣೀಕರಣ ಸಂಸ್ಥೆ) ಸ್ವತಂತ್ರವಾಗಿ ಮೌಲ್ಯಮಾಪನ ಮಾಡಿದೆ.
Take Quiz
Loading...