Job Description: * ಇರಾನ್‌ನ ನೂತನ ಅಧ್ಯಕ್ಷರಾಗಿ ಮಸೌದ್ ಪೆಜೆಶ್ಕಿಯಾನ್ ದೇಶ ವಿದೇಶಗಳ ಗಣ್ಯರ ಸಮ್ಮುಖದಲ್ಲಿ ಪ್ರಮಾಣ ವಚನ ಸ್ವೀಕರಿಸಿದರು. * ನೂತನ ಅಧ್ಯಕ್ಷರು ಮಸೌದ್ ಹೊಸ ಸಚಿವ ಸಂಪುಟ ರಚಿಸುವ ಸಾಧ್ಯತೆ ಇದೆ ಎಂದು ಉನ್ನತ ಮೂಲಗಳು ಮಾಹಿತಿ ನೀಡಿವೆ.* ಪದಗ್ರಹಣ ಸಮಾರಂಭದಲ್ಲಿ ಇರಾನ್‌ನ ಪ್ಯಾಲೇಸ್ಟಿನಿಯನ್ ಮಿತ್ರರಾಷ್ಟ್ರಗಳಾದ ಹಮಾಸ್ ಮತ್ತು ಇಸ್ಲಾಮಿಕ್ ಜಿಹಾದ್ ನಾಯಕರು ಮತ್ತು ಯೆಮೆನ್‌ನ ಟೆಹ್ರಾನ್ ಬೆಂಬಲಿತ ಹೌತಿ ಚಳವಳಿ ಮತ್ತು ಲೆಬನಾನ್‌ನ ಹಿಜ್ಬುಲ್ಲಾದ ಹಿರಿಯ ಪ್ರತಿನಿಧಿಗಳು ಸಮಾರಂಭದಲ್ಲಿ ಭಾಗವಹಿಸಿದ್ದರು.* ಪ್ರಮಾಣ ವಚನ ಸ್ವೀಕಾರ ಮಾಡಿದ ನಂತರ ಮಾತನಾಡಿದ ದೇಶದ ಘನತೆ ಕಾಪಾಡುವ ಜೊತೆಗೆ ಅನುಕೂಲತೆಯ ಆಧಾರದ ಮೇಲೆ ಪ್ರಪಂಚದ ವಿವಿಧ ದೇಶಗಳೊಂದಿಗೆ ರಚನಾತ್ಮಕ ಮತ್ತು ಪರಿಣಾಮಕಾರಿ ಸಂವಹನ ಮತ್ತು ಸಂಬಂಧ ಮುಂದುವರಿಸುತ್ತೇವೆ ಎಂದು ಹೇಳಿದ್ದಾರೆ ಪಾಶ್ಚಿಮಾತ್ಯ ದೇಶಗಳೊಂದಿಗಿನ ಇರಾನ್‌ನ ಇನ್ನಿತರೆ ದೇಶಗಳೊಂದಿಗೆ ಸಂಬಂಧಗಳನ್ನು ಸುಧಾರಣೆ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡಲಾಗುವುದು ಜೊತೆಗೆ ವಿಶ್ವ ಶಕ್ತಿಗಳೊಂದಿಗೆ ಅದರ ಪರಮಾಣು ಬಿಕ್ಕಟ್ಟನ್ನು ತಗ್ಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಮಸೌದ್ ಅವರು ಹೇಳಿದ್ದಾರೆ. * ಗಾಜಾದಲ್ಲಿ ಹಮಾಸ್‌ನೊಂದಿಗೆ ಇಸ್ರೇಲ್‌ನ ಸಂಘರ್ಷ ಮತ್ತು ಲೆಬನಾನ್‌ನಲ್ಲಿ ಇರಾನ್‌ನ ಮಿತ್ರ ಹೆಜ್ಬುಲ್ಲಾ ಜೊತೆಗಿನ ಗಡಿಯಾಚೆಗಿನ ಹೋರಾಟದ ಕುರಿತು ಮಧ್ಯಪ್ರಾಚ್ಯ ಉದ್ವಿಗ್ನತೆ ಕಡಿಮೆ ಮಾಡಲು ಪ್ರಯತ್ನ ಮಾಡಲಾಗುವುದು ಎಂದು ಮಸೌದ್ ತಿಳಿಸಿದ್ದಾರೆ.* 2024ರ ಮೇ ತಿಂಗಳಲ್ಲಿ ಹೆಲಿಕಾಪ್ಟರ್ ಅಪಘಾತದಲ್ಲಿ ಅಧ್ಯಕ್ಷ ಇಬ್ರಾಹಿಂ ರೈಸಿ ಸಾವನ್ನಪ್ಪಿದ್ದರು. ತೆರವಾದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ನೂತನ ಅಧ್ಯಕ್ಷರಾಗಿ ಮಸೌದ್ ಆಯ್ಕೆಯಾಗಿದ್ದಾರೆ.