* ಇಸ್ರೇಲ್-ಇರಾನ್ ಯುದ್ಧಕ್ಕೆ ಅಮೆರಿಕ ನೇರವಾಗಿ ಸೇರುವ ಮೂಲಕ, ಇರಾನ್ನ ಮೂರು ಪ್ರಮುಖ ಪರಮಾಣು ತಾಣಗಳಾದ ಫೋರ್ಡೋ, ನಟಾಂಜ್ ಮತ್ತು ಎಸ್ಪಹಾನ್ ಮೇಲೆ ತಡರಾತ್ರಿ ದಾಳಿ ನಡೆಸಿದೆ.* ಬಾಂಬರ್ ವಿಮಾನಗಳು ಹಾಗೂ ಟೊಮಾಹಾಕ್ ಕ್ಷಿಪಣಿಗಳ ಸಹಾಯದಿಂದ ಈ ದಾಳಿ ನಡೆದಿದೆ.* ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದಾಳಿಯ ಯಶಸ್ಸನ್ನು ಘೋಷಿಸುತ್ತಾ ಟ್ವೀಟ್ ಮಾಡಿದ್ದಾರೆ. ಯುದ್ಧ ವಿಮಾನಗಳು ಸುರಕ್ಷಿತವಾಗಿ ಮರಳಿವೆ ಎಂದು ತಿಳಿಸಿದ್ದಾರೆ. ಟ್ರಂಪ್ ತಮ್ಮ ಸೇನೆಯ ಶಕ್ತಿಗೆ ಅಭಿನಂದನೆ ಸಲ್ಲಿಸಿದ್ದಾರೆ.* ಇರಾನ್ ಈ ದಾಳಿಯನ್ನು ದೃಢಪಡಿಸಿದೆ. ಫೋರ್ಡೋ ಮೇಲೆ ಆರು ಬಾಂಬರ್ ದಾಳಿ ನಡೆಸಿದ್ದರೆ, ಉಳಿದ ಎರಡು ತಾಣಗಳ ಮೇಲೆ ನೌಕಾ ಆಧಾರಿತ ಕ್ಷಿಪಣಿಗಳ ದಾಳಿ ನಡೆದಿದೆ. ಆದರೆ, ಈ ತಾಣಗಳಲ್ಲಿ ಪರಮಾಣು ವಸ್ತುಗಳನ್ನು ಈಗಾಗಲೇ ಸ್ಥಳಾಂತರಿಸಲಾಗಿದೆ ಎಂದು ಇರಾನ್ ಹೇಳಿದೆ. ಯಾವುದೇ ಸೋರಿಕೆಯ ಭೀತಿ ಇಲ್ಲ.* ಇರಾನ್ ಅಮೆರಿಕಗೆ ಎಚ್ಚರಿಕೆ ನೀಡಿದ್ದು, "ನೀವು ಪ್ರಾರಂಭಿಸಿದ್ದೀರಿ, ಅದನ್ನು ನಾವು ಕೊನೆಗೊಳಿಸುತ್ತೇವೆ" ಎಂದು ಘೋಷಿಸಿದೆ. ಭವಿಷ್ಯದಲ್ಲಿ ತೀವ್ರ ಪ್ರತಿಕ್ರಿಯೆ ಸಾಧ್ಯ ಎಂಬ ಸೂಚನೆ ಇದೆ.* ಅಮೆರಿಕದ ಅಧ್ಯಕ್ಷ ಟ್ರಂಪ್ ಭಾರತೀಯ ಕಾಲಮಾನ ಪ್ರಕಾರ ಬೆಳಗ್ಗೆ 7:30ಕ್ಕೆ ರಾಷ್ಟ್ರವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಈ ದಾಳಿಯ ಹಿಂದಿನ ಉದ್ದೇಶ ಮತ್ತು ಮುಂದಿನ ಕ್ರಮಗಳ ಬಗ್ಗೆ ವಿವರ ನೀಡುವ ನಿರೀಕ್ಷೆ ಇದೆ.